ಹುಬ್ಬಳ್ಳಿ: ಅಮೋಘ ಲಯದಲ್ಲಿರುವ ಸ್ಮರಣ್ ರವಿಚಂದ್ರನ್ ಅವರ ಅಜೇಯ ದ್ವಿಶತಕ ಮತ್ತು ಶ್ರೇಯಸ್ ಗೋಪಾಲ್ ಅವರ ಅರ್ಧಶತಕ ಮತ್ತು ಚುರುಕಿನ ಬೌಲಿಂಗ್ನಿಂದಾಗಿ (18ಕ್ಕೆ 3) ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಂಡೀಗಢ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.

ಎಡಗೈ ಬ್ಯಾಟರ್ ಸ್ಮರಣ್ ಪ್ರಸಕ್ತ ರಣಜಿ ಋತುವಿನಲ್ಲಿ ತಮ್ಮ ಎರಡನೇ ದ್ವಿಶತಕ ದಾಖಲಿಸಿದರು. ಇದರಿಂದಾಗಿ ಕರ್ನಾಟಕ ತಂಡವು 160 ಓವರ್ಗಳಲ್ಲಿ 8 ವಿಕೆಟ್ಗೆ 547 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಇದಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ಚಂಡೀಗಢ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 17.4 ಓವರ್ಗಳಲ್ಲಿ 4 ವಿಕೆಟ್ಗಳಿಗೆ 72 ರನ್ ಗಳಿಸಿತು. ಪ್ರವಾಸಿ ತಂಡವು ಕರ್ನಾಟಕ ತಂಡದ ಗುರಿ ಮೀರಲು ಇನ್ನೂ 475 ರನ್ ಗಳಿಸಬೇಕಿದೆ.

ಮೊದಲ ದಿನದಾಟದಲ್ಲಿ ಕರ್ನಾಟಕ 5 ವಿಕೆಟ್ಗೆ 298 ರನ್ ಗಳಿಸಿತ್ತು. 110 ರನ್ ಗಳಿಸಿದ್ದ ಸ್ಮರಣ್, 38 ರನ್ ಗಳಿಸಿದ್ದ ಶ್ರೇಯಸ್ ಕ್ರೀಸ್ನಲ್ಲಿದ್ದರು. ಸೋಮವಾರ ಆಟ ಮುಂದುವರಿಸಿದ ಈ ಜೋಡಿ, ಎದುರಾಳಿ ತಂಡದ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿತು. ಹೀಗಾಗಿ ಮೊದಲ ಒಂದೂವರೆ ಗಂಟೆ ಅವಧಿಯಲ್ಲಿ ಯಾವುದೇ ವಿಕೆಟ್ ಬೀಳಲಿಲ್ಲ.

ಆರನೇ ವಿಕೆಟ್ಗೆ 88 ರನ್ಗಳ ಜತೆಯಾಟವಾಡಿದ್ದ ಸ್ಮರಣ್ ಮತ್ತು ಶ್ರೇಯಸ್ ಸೋಮವಾರ ಆ ಮೊತ್ತವನ್ನು 141ಕ್ಕೆ ಹಿಗ್ಗಿಸಿದರು. ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕ ಗಳಿಸಿದ ಶ್ರೇಯಸ್ (62) ಅವರನ್ನು ವಿಶು ಕಶ್ಯಪ್ ಎಲ್ಬಿ ಬಲೆಗೆ ಕೆಡವಿ ಜತೆಯಾಟ ಮುರಿದರು.

ತಾಳ್ಮೆಯಿಂದ ಆಡಿದ ಸ್ಮರಣ್ ಬಾಲಂಗೋಚಿಗಳ ಜತೆ ಇನಿಂಗ್ಸ್ ಕಟ್ಟಿ, ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು. ಅವಕಾಶ ಸಿಕ್ಕಾಗ ಚೆಂಡನ್ನು ಬೌಂಡರಿಗೆ ಗೆರೆ ತಲುಪಿಸಿದರು. ನಿಶುಂಕ್ ಬಿರ್ಲಾ ಅವರ ಎಸೆತದಲ್ಲಿ ಒಂದು ರನ್ ಗಳಿಸಿದ ಸ್ಮರಣ್ ದ್ವಿಶತಕ ಪೂರೈಸಿದರು. ಆ ನಂತರವೂ ಅಜೇಯ ಆಟವಾಡಿದ ಅವರು ವೈಯಕ್ತಿಕ ಗರಿಷ್ಠವನ್ನು 227ಕ್ಕೆ (362 ಎ, 4X16, 6X2) ಹೆಚ್ಚಿಸಿದರು. ಕೇರಳ ಎದುರು ಅವರು 220 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

ಎರಡು ಜೀವದಾನಗಳ ಲಾಭ ಪಡೆದ 20 ವರ್ಷದ ಸ್ಪಿನ್ನರ್ ಶಿಖರ್ ಶೆಟ್ಟಿ ಚೊಚ್ಚಲ ಅರ್ಧಶತಕ (59, 122ಎ, 4X7) ಗಳಿಸಿದರು. ಇದು ಅವರಿಗೆ ಮೂರನೇ ಪಂದ್ಯ. ಶಿಖರ್ ಮತ್ತು ಸ್ಮರಣ್ ಜೋಡಿಯ ಎಂಟನೇ ವಿಕೆಟ್ ಜತೆಯಾಟದಲ್ಲಿ 111 (191ಎ) ಹರಿದು ಬಂದವು. ವಿದ್ಯಾಧರ ಪಾಟೀಲ (30) ಉಪಯುಕ್ತ ಕಾಣಿಕೆ ನೀಡಿದರು.

ಪ್ರಥಮ ಇನಿಂಗ್ಸ್ ಆರಂಭಿಸಿದ ಚಂಡೀಗಡ ತಂಡಕ್ಕೆ ಶಿವಂ ಭಾಂಬ್ರಿ, ಅರ್ಜುನ್ ಆಜಾದ್ ಉತ್ತಮ ಆರಂಭ ನೀಡಲು ಯತ್ನಿಸಿದರು. ವೇಗವಾಗಿ ರನ್ ಗಳಿಸುತ್ತಿದ್ದ ಅರ್ಜುನ್ (32, 29ಎ, 4X3, 6X1) ಅವರನ್ನು ಆಫ್ ಸ್ಪಿನ್ನರ್ ಮೊಹ್ಸಿನ್ ಖಾನ್ ಬೌಲ್ಡ್
ಮಾಡಿದರು.

ನಂತರ ಶ್ರೇಯಸ್ ಗೋಪಾಲ್ ಕೈಚಳಕ ತೋರಿದರು. 12 ಮತ್ತು14ನೇ ಓವರ್ನಲ್ಲಿ ಅವರು ಕ್ರಮವಾಗಿ ಶಿವಂ (16) ಮತ್ತು ವಿಶು ಕಶ್ಯಪ್ (5) ಅವರ ವಿಕೆಟ್ ಕಿತ್ತರು. ಅವರು ಎಸೆದ ದಿನದಾಟದ ಕೊನೆಯ ಓವರ್ನ ನಾಲ್ಕನೇ ಎಸೆತದಲ್ಲಿ ನಿಖಿಲ್ ಠಾಕೂರ್ (1) ಕೀಪರ್ ಕೆ.ಎಲ್.ಶ್ರೀಜಿತ್ಗೆ ಕ್ಯಾಚಿತ್ತು ನಿರ್ಗಮಿಸಿದರು. 14 ರನ್ ಗಳಿಸಿರುವ ನಾಯಕ ಮನನ್ ವೋಹ್ರಾ ಕ್ರೀಸ್ನಲ್ಲಿದ್ದಾರೆ.

‘ಟ್ರೋಫಿ ಗೆಲ್ಲುವ ಗುರಿ’

‘ದೀರ್ಘ ಇನಿಂಗ್ಸ್ ಆಡಲು ನಿರ್ಧರಿಸಿದ್ದೆ. ಹೀಗಾಗಿ ಟೂರ್ನಿಯಲ್ಲಿ ಎರಡನೇ ದ್ವಿಶತಕ ಗಳಿಸಲು ಸಾಧ್ಯವಾಯಿತು. ತಂಡ ಬೃಹತ್ ಮೊತ್ತ ಗಳಿಸಲು ಕೊಡುಗೆ ನೀಡಿದ್ದಕ್ಕೆ ಖುಷಿಯಾಗಿದೆ’ ಎಂದು ಸ್ಮರಣ್ ರವಿಚಂದ್ರನ್ ಹೇಳಿದರು.

‘ಕರ್ನಾಟಕ ತಂಡ ಕಳೆದ ಒಂದು ದಶಕದಿಂದ ರಣಜಿ ಟ್ರೋಫಿ ಗೆದ್ದಿಲ್ಲ. ಈ ಬಾರಿಯಾದರೂ ಟ್ರೋಫಿ ಗೆಲ್ಲಬೇಕು ಎಂಬುದು ನಮ್ಮ ಗುರಿ. ಅದರತ್ತ ಹೆಚ್ಚು ಗಮನ ಹರಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.