ದಿನ ಭವಿಷ್ಯ: ಬಹುಜನರ ಒಡನಾಟದಿಂದ ಪ್ರೀತಿ ಪಡೆಯುವಂತಾಗಲಿದೆ
Published 11 ಸೆಪ್ಟೆಂಬರ್ 2025, 23:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂಧನ ಮಾರಾಟಗಾರರಿಗೆ ಅನುಕೂಲಕರವಾಗಿರುವುದು. ಸ್ಪರ್ಧಾತ್ಮಕ ಮನೋಭಾವ ಹೊಸ ಸಾಹಸಕ್ಕೆ ಕೈ ಹಾಕಲು ಪ್ರೇರೇಪಿಸುವುದು. ಇನ್ನೊಬ್ಬರ ಜೀವನದಲ್ಲಿ ಪಾತ್ರ ಮಹತ್ವದ್ದು.
ವೃಷಭ
ದೈವಬಲ ಉಂಟಾಗಿದ್ದು ಆರ್ಥಿಕ ಪರಿಸ್ಥಿತಿಯು ಸುಧಾರಣೆಯತ್ತ ಸಾಗಿರುವುದನ್ನು ಕಾಣುವಿರಿ. ಉತ್ತಮ ಅವಕಾಶಗಳು ಬರಲಿವೆ.ಅದನ್ನು ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ.
ಮಿಥುನ
ಎಲ್ಲಾ ಕೆಲಸಗಳು ಸಿಬ್ಬಂದಿ ವರ್ಗದವರ ಸಹಕಾರದಿಂದ ವ್ಯವಸ್ಥಿತವಾಗಿ ಕೈಗೂಡಲಿವೆ. ಸ್ಥಿರಾಸ್ತಿ ಸಂಬಂಧಿಸಿದ ವ್ಯವಹಾರಗಳಿಂದ ಲಾಭವಿರುವುದು. ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಮರೆಯದಿರಿ.
ಕರ್ಕಾಟಕ
ಕಾರ್ಮಿಕ ವರ್ಗದವರ ಬೇಡಿಕೆಗಳು ಈಡೇರಲಿವೆ. ವಿದೇಶದಿಂದ ಹೆಚ್ಚಿನ ಶಿಕ್ಷಣಕ್ಕೆಂದು ತೆರಳಿದ ಮಗನ ಆಗಮನವಾಗುವುದು. ಸಾಹಿತಿ ಹಾಗೂ ಕಲಾವಿದರಿಗೆ ಉತ್ತಮವಾದ ದಿನ. ಈಶ್ವರನ ಆರಾಧನೆಯಿಂದ ನೆಮ್ಮದಿ.
ಸಿಂಹ
ವಿದ್ಯಾರ್ಥಿಗಳು ಪರಿಶ್ರಮಕ್ಕೆ ತಕ್ಕ ಯಶಸ್ಸು ಕಾಣುವರು. ಸಂಬಂಧಿಕರೊಬ್ಬರ ಆಸ್ತಿಯನ್ನು ಕೊಳ್ಳುವ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕೆಲಸ ಭಿನ್ನಾಭಿಪ್ರಾಯವನ್ನು ಮೂಡಿಸಲಿದೆ. ಕೆಲಸಗಳು ನಿರೀಕ್ಷಿತ ಹಾದಿಯಲ್ಲಿ ಸಾಗುವುದು.
ಕನ್ಯಾ
ನೈತಿಕ ಧೈರ್ಯ ಹೆಚ್ಚುವುದು. ಸ್ವಲ್ಪ ಮಟ್ಟಿಗೆ ಧನ ವ್ಯಯವಿದ್ದರೂ ವಿವಿಧ ಹೊಸ ಮೂಲಗಳಿಂದ ಧನಾಗಮವಾಗುವುದು. ಕುಟುಂಬದಲ್ಲಿ ನೆಮ್ಮದಿ ಇರುವುದು. ರಾಜಕಾರಣದ ವಿಷಯಗಳು ಅನುಕೂಲಕರವಾಗಿರುವುದು.
ತುಲಾ
ದೇವರ ಮತ್ತು ಹಿರಿಯರ ಅನುಗ್ರಹದಿಂದ ಕುಟುಂಬದಲ್ಲಿನ ಅನೇಕ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ಕಾಗದದ ರಫ್ತು ಉದ್ಯಮದವರಿಗೆ ಉತ್ತಮ ಆದಾಯವಿರುವುದು. ಉದ್ಯೋಗಸ್ಥರಿಗೆ ಉನ್ನತ ಸ್ಥಾನಮಾನ ಪ್ರಾಪ್ತಿ.
ವೃಶ್ಚಿಕ
ಮಾತಿನಿಂದ ಕಾರ್ಯ ಸಾಧಿಸುವ ನಿಮ್ಮ ಗುಣದಿಂದ ಅನುಕೂಲಕರ ವಾತಾವರಣವನ್ನು ಕಾಣುವಿರಿ. ಆಭರಣ ಮಾರಾಟಗಾರರಿಗೆ ಒದಗುವ ಅವಕಾಶಗಳ ಹೆಚ್ಚಳದಿಂದ ಕೆಲಸವಿರುವುದು.
ಧನು
ಕಂಪ್ಯೂಟರ್ ಎಂಜಿನಿಯರ್‌ಗಳಿಗೆ ವಿದೇಶಿ ಕಂಪನಿಗಳ ಅಹ್ವಾನ ಅಥವಾ ಉತ್ತಮ ಲಾಭದಾಯಕ ಅವಕಾಶಗಳು ಲಭ್ಯ. ಮನೆ ಅಥವಾ ಕಟ್ಟಡ ನಿರ್ಮಾಣ ಕಾರ್ಯವು ಯಾವುದೇ ತೊಂದರೆಗಳಿಲ್ಲದೆ ಮುಂದುವರಿಯಲಿದೆ.
ಮಕರ
ಉತ್ತಮ ಒಡನಾಟ ಹೊಂದಿರುವ ವ್ಯಕ್ತಿಗಳೊಂದಿಗೆ ವ್ಯಾವಹಾರಿಕ ಆಲೋಚನೆಯನ್ನು ಹಂಚಿಕೊಳ್ಳುವುದರಿಂದ ವಿವಿಧ ರೀತಿಯಲ್ಲಿ ನಷ್ಟ ಆಗುವುದು. ವ್ಯವಹಾರದ ಗೌಪ್ಯತೆ ಕಾಪಾಡಿಕೊಳ್ಳಿ.
ಕುಂಭ
ಸಂಘ ಸಂಸ್ಥೆಗಳ ವಿಚಾರವನ್ನು ಮುಕ್ತವಾಗಿ ಚರ್ಚಿಸಿ ನಂತರದಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತರುವುದು ಉತ್ತಮ. ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ಪಡೆಯಲು ಪರಿಶ್ರಮ ಜತೆ ಬುದ್ಧಿವಂತಿಕೆಯೂ ಬಹುಮುಖ್ಯ.
ಮೀನ
ಐಷಾರಾಮಿ ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸುವುದು ಅನಿವಾರ್ಯ. ಸಮಾಜದಲ್ಲಿನ ಮುಂದಾಳತ್ವಕ್ಕೆ ಜನ ಮೆಚ್ಚಿ, ಸಲಹೆಗಳನ್ನು ಕೇಳುವರು. ಬಹುಜನರ ಒಡನಾಟದಿಂದ ಪ್ರೀತಿ ಪಡೆಯುವಂತಾಗಲಿದೆ.