ದಿನ ಭವಿಷ್ಯ: ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸಿ
Published 12 ನವೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಒಡಹುಟ್ಟಿದವರ ಸಹಕಾರದಿಂದ ಮಾನಸಿಕ ನೆಮ್ಮದಿ, ಸಂಸಾರದಲ್ಲಿ ಸಮತೋಲನ ಪಡೆಯುವಿರಿ. ಮಾತೃವರ್ಗದ ಸಂಬಂಧಿಗಳ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿವೆ.
ವೃಷಭ
ಜೀವನದ ಸಂಕ್ರಮಣ ಕಾಲದ ಗೊಂದಲಗಳಲ್ಲಿ ಸಂಗಾತಿ ಬೆನ್ನೆಲುಬು ಆಗಲಿದ್ದಾರೆ. ಹಣಕಾಸಿನ ವಿಚಾರದಲ್ಲಿ ಇನ್ನೊಂದು ಮೆಟ್ಟಿಲು ಹತ್ತುವಂತೆ ಆಗಲಿದೆ. ವೈಷಮ್ಯಗಳು ಅನುಭವಕ್ಕೆ ಬರಲಿವೆ.
ಮಿಥುನ
ಹೊರದೇಶದ ಉದ್ಯೋಗ ಅನ್ವೇಷಣೆ ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆ ಬಯಸುವವರಿಗೆ ಒಳ್ಳೆಯ ದಿನ. ಬೇರೆಯವರಿಗೆ ಕೆಲಸ ಹೊರೆಸುವಂಥ ಮೂರ್ಖತನ ಮಾಡದಿರಿ.
ಕರ್ಕಾಟಕ
ದೈವಬಲದ ಕಾರಣ ಕೈಗೊಂಡ ಕೆಲಸ-ಕಾರ್ಯಗಳಲ್ಲಿ ಜಯ ಉಂಟಾಗಲಿದೆ. ಅನಿರೀಕ್ಷಿತ ಬಂಧುಗಳ ಆಗಮನ ದಿನಚರಿಯನ್ನು ಅದಲು ಬದಲು ಮಾಡುತ್ತದೆ.
ಸಿಂಹ
ಮನೆ ಜಾಗದ ಪಾಲುದಾರಿಕೆ ವಿಷಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರಲಿದೆ. ನಿರ್ಮಾಣಕಾರ್ಯದಲ್ಲಿ ತೊಡಗಿರುವವರಿಗೆ ಸಕಾಲ. ದೇವರ ಅನುಗ್ರಹಕ್ಕೆ ಪ್ರಾರ್ಥನೆ ಇರಲಿ.
ಕನ್ಯಾ
ದೈಹಿಕವಾದ ಶ್ರಮ ಕಡಿಮೆ ಇದ್ದರೂ ಆದಾಯವಿರುವುದರಿಂದ ಮನಸ್ಸಿಗೆ ಅಧಿಕ ಸಂತೋಷ ಆಗಲಿದೆ. ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸಿ.
ತುಲಾ
ಮುಕ್ತ ಮಾತುಕತೆಯಿಂದ ಮಾತ್ರ ಮನೋಭಿಲಾಷೆಯ ಸ್ಥಾನಮಾನ ದೊರೆಯುತ್ತದೆ. ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ. ಮನೆಯಲ್ಲಿಯೂ ನೆಮ್ಮದಿಯ ವಾತಾವರಣ ಇರಲಿದೆ.
ವೃಶ್ಚಿಕ
ಮೌಖಿಕವಾಗಿ ಬೆಳೆದ ಮಾತಿನಲ್ಲಿ ತರ್ಕಬದ್ಧ ಉತ್ತರಗಳಿಗೆ ಎಲ್ಲರೂ ಮಾರುಹೋಗುವರು. ಗೌರವಾನ್ವಿತ ವ್ಯಕ್ತಿಯೆಂದು ಅನಿಸಿಕೊಂಡ ನಿಮಗೆ ಸಮಾಜದಲ್ಲಿ ಅಪಮಾನವಾಗಬಹುದು.
ಧನು
ಉತ್ತಮ ಗುರುವಿನ ಪ್ರಾಪ್ತಿಯಿಂದಾಗಿ ಮನಸ್ಸಿನ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಬಂಧುಗಳ ಮೂಲಕ ಸಹಕಾರ ದೊರೆತು ವ್ಯಾಪಾರದಲ್ಲಿ ಅಧಿಕ ಧನಲಾಭ.
ಮಕರ
ಜೀವನದ ನಡೆ-ನುಡಿಗಳು ಕಿರಿಯರ ಜೀವನಕ್ಕೆ ಮಾರ್ಗದರ್ಶನದಂತೆ ಸಹಕಾರಿ. ಒಡಹುಟ್ಟಿದವರ ಸಮಸ್ಯೆಗೆ ನಿಮ್ಮಿಂದಾಗುವ ಉಪಕಾರವನ್ನು ಮಾಡುವ ಪ್ರಯತ್ನಮಾಡಿ.
ಕುಂಭ
ಧರ್ಮಕಾರ್ಯಗಳನ್ನು ಮಾಡುವಲ್ಲಿ ವಿಳಂಬ ಮಾಡದಿರಿ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಉಂಟಾಗಿ ಸಮಸ್ಯೆಗಳು ಎಲ್ಲವೂ ಬಗೆಹರಿಯುತ್ತವೆ. ಮಾನಸಿಕ ನೆಮ್ಮದಿ ಹೆಚ್ಚುವುದು.
ಮೀನ
ವಸಾಯದಲ್ಲಿ ವಿಪತ್ತನ್ನು ನಿಭಾಯಿಸಲು ಬೇಕಾದ ಸೂಕ್ತ ತಯಾರಿ ಮಾಡಿಟ್ಟುಕೊಳ್ಳಿರಿ. ಮೇಲಧಿಕಾರಿಗಳ ಜೊತೆಯಲ್ಲಿ ಮಿತ್ರತ್ವ ಕಾಪಾಡಿಕೊಳ್ಳುವುದು ಒಳಿತು.