ದಿನ ಭವಿಷ್ಯ: ಮನಸ್ಸಿದ್ದರೆ ಮಾರ್ಗ ಎಂಬ ಮಾತು ಅನ್ವಯಿಸುತ್ತದೆ
Published 21 ಸೆಪ್ಟೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜವಾಬ್ದಾರಿ ಕೆಲಸಗಳು ಒದಗಿ ಬಂದು ಅವುಗಳನ್ನು ಮುಗಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೈದ್ಯರಿಗೆ ತುರ್ತು ಕೆಲಸಗಳಿಂದ ಬಿಡುವಿಲ್ಲದಂತಾಗುವುದು. ಧರ್ಮದಲ್ಲಿ ಶ್ರದ್ಧೆ ಹೆಚ್ಚಲಿದೆ, ಧಾರ್ಮಿಕ ಕೆಲಸಗಳಲ್ಲಿ ತೊಡಗುತ್ತೀರಿ.
ವೃಷಭ
ಭಾಷಾ ಅಧ್ಯಾಪಕರಿಗೆ ಮತ್ತು ನಾಟಕ ಕಲಾವಿದವರಿಗೆ ಮನ್ನಣೆ ಸಿಗಲಿದೆ. ಚರ್ಮದ ವಸ್ತುಗಳ ಮಾರಾಟಗಾರರಿಗೆ ವಿದೇಶದಿಂದ ಅವಕಾಶ ಸಿಗಲಿದೆ. ರಫ್ತು ವ್ಯವಹಾರದಲ್ಲಿ ಲಾಭ ಸಿಗಲಿದೆ.
ಮಿಥುನ
ತುಂಬ ದಿನಗಳಿಂದ ಶತ್ರುಗಳ ಉಪಟಳದಿಂದ ಬೇಸರಗೊಂಡಿರುವ ನಿಮಗೆ ಶತ್ರುಗಳ ಬಣ್ಣ ಬಯಲಾಗುವುದು ಸಂತಸ ತರಲಿದೆ. ವ್ಯಾಪಾರದ ಅಭಿವೃದ್ಧಿಗೆ ಪತ್ರಿಕೆಯವರ ಸಹಾಯ ಪಡೆದು ಪ್ರಚಾರಕ್ಕೆ ಬರಬಹುದು.
ಕರ್ಕಾಟಕ
ಮಕ್ಕಳ ಕೆಲವು ಮಾತುಗಳು ಮನಸ್ಸಿಗೆ ಬಹಳವಾಗಿ ನಾಟುವುದು. ಎಲ್ಲಾ ರೀತಿಯ ಕುಟುಂಬದ ಸಮಸ್ಯೆಗಳು ಪರಿಹಾರವಾಗುವವು. ತಂದೆ ಮಕ್ಕಳ ನಡುವೆ ಸಂಬಂಧ ಅಭಿವೃದ್ಧಿಯಾಗುವುದು.
ಸಿಂಹ
ನಡೆದು ಬಂದ ದಾರಿಯು ನಿಮಗಿಂತ ಕಿರಿಯರಿಗೆ ಮಾರ್ಗದರ್ಶನವನ್ನು ಕೊಡಲಿದೆ. ಮಕ್ಕಳ ಹಾಗೂ ಮೊಮ್ಮಕ್ಕಳ ಜತೆಗೆ ಈ ಹಬ್ಬವನ್ನು ಆಚರಿಸುವಿರಿ. ಈ ದಿನವು ಹರ್ಷದಾಯಕವಾಗಿರುವುದು.
ಕನ್ಯಾ
ಸಾಂಪ್ರದಾಯಿಕ ಉಡುಗೆಗಳ ಮಾರಾಟಗಾರರಿಗೆ ಅಧಿಕ ಮಾರಾಟ ಇರುವುದು. ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶಗಳು ಬರಲಿವೆ. ಕೌಟುಂಬಿಕ ವಿಚಾರಗಳತ್ತ ಸಂಪೂರ್ಣ ಗಮನ ನೀಡಬೇಕಾಗುತ್ತದೆ.
ತುಲಾ
ಹೊಸದಾಗಿ ಹಣ ಹೂಡಿಕೆ ಮಾಡಬೇಕಾದರೆ ವ್ಯಕ್ತಿಯ ಪರಿಚಯ ಮತ್ತು ವ್ಯವಹಾರದ ಸಂಪರ್ಕ ನಿಮಗಿದ್ದರೆ ಶುಭವಾಗುವುದು. ಎಲ್ಲಾ ಕಿರಿ ಕಿರಿಗಳನ್ನೂ ಶಾಂತ ರೀತಿಯಿಂದ ಎದುರಿಸಿ.
ವೃಶ್ಚಿಕ
ವಕೀಲೀ ವೃತ್ತಿ ನಡೆಸುವವರಿಗೆ, ನ್ಯಾಯಾಂಗ ಇಲಾಖೆಯವರಿಗೆ ಉತ್ತಮ ದಿನ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯ. ತಾಮ್ರ, ಹಿತ್ತಾಳೆ ಪಾತ್ರೆಗಳ ಮಾರಾಟಗಾರರಿಗೆ ಅಧಿಕ ಲಾಭವಿರುವುದು.
ಧನು
ಈಗೆರಡು ದಿನಗಳಿಂದ ಅನುಭವಿಸುತ್ತಿರುವ ಹಣಕಾಸಿನ ಸಂಬಂಧದ ಅಪವಾದಗಳು ದೂರವಾಗಲಿವೆ. ಅತಿಯಾಗಿ ಪ್ರೀತಿಸುವ ಹಾಗೂ ಆದರಿಸುವ ಜನರೊಂದಿಗೆ ಕಾಲ ಕಳೆಯಲು ಸಕಾಲವಾಗಿದೆ.
ಮಕರ
ಹಣ ಉಳಿತಾಯದ ಸನ್ಮಾರ್ಗಗಳನ್ನು ಕಂಡುಕೊಳ್ಳುವಿರಿ, ಅದರಂತಯೇ ಉಳಿತಾಯವಾಗಲಿದೆ. ಸಮಯ ಪ್ರಜ್ಞೆಯ ಜೊತೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಶುಭ. ಎಣಿಕೆಯಂತೆ ಕಾರ್ಯಗಳು ಸಿದ್ಧಿಸಲಿವೆ.
ಕುಂಭ
ಸಾಹಿತಿಗಳು ಈ ದಿನದಲ್ಲಿ ಬರೆಯುವ ಲೇಖನಕ್ಕೆ ಸರಸ್ವತಿಯ ಅನುಗ್ರಹ ಇದ್ದಂತೆ ಅನುಭವವಾಗಲಿದೆ. ತಿಂಡಿ ತಿನಿಸುಗಳ ವ್ಯಾಪಾರದಲ್ಲಿ ಲಾಭ ನಷ್ಟದ ಮಿಶ್ರಫಲ ಕಾಣುವಿರಿ. ಮನಸ್ಸಿದ್ದರೆ ಮಾರ್ಗ ಎಂಬ ಮಾತು ಅನ್ವಯಿಸುತ್ತದೆ.
ಮೀನ
ಇತರರಿಗಿಂತ ಭಿನ್ನವಾದ ಹಾಗೂ ಧನಾತ್ಮಕವಾದ ನಿರ್ಧಾರವನ್ನು ತಗೆದುಕೊಳ್ಳುವಿರಿ. ಧನಾಗಮನಕ್ಕೆ ಹಲವು ರೀತಿಯ ಅವಕಾಶಗಳು ಇದ್ದರೂ ಬುದ್ಧಿವಂತಿಕೆ, ಆತ್ಮವಿಶ್ವಾಸದ ಅಗತ್ಯವಿರುತ್ತದೆ.