ಭಾನುವಾರ, 3 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಆಫೀಸಿನಲ್ಲಿ ಅಚ್ಚರಿಯ ಸಂಗತಿಗಳು ನಡೆಯಲಿವೆ
Published 30 ಜುಲೈ 2025, 23:49 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮುಂದಿನ ದಿನಗಳ ವ್ಯವಹಾರಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಈ ದಿನ ಮಾಡಿಕೊಳ್ಳುವುದು ಉತ್ತಮ. ಧಾರ್ಮಿಕ ಕಾರ್ಯಗಳನ್ನು ನಡೆಸುವಲ್ಲಿ ಯಶಸ್ವಿಯಾಗುವಿರಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇರುವುದು.
ವೃಷಭ
ಪ್ರವಾಸಿ ಏಜೆಂಟರಿಗೆ ಅಧಿಕ ಆದಾಯವಿರುವುದರ ಜೊತೆಗೆ ಅಧಿಕ ಸಮಸ್ಯೆಯೂ ಎದುರಾಗಬಹುದು. ಈ ದಿನ ತೆರಿಗೆ ಸಂಬಂಧದ ಕೆಲಸಗಳೆಲ್ಲವನ್ನೂ ಪೂರ್ಣಗೊಳಿಸಿರಿ. ಅವಿವಾಹಿತರಿಗೆ ಹೊಸ ಸಂಬಂಧವೊಂದು ಉತ್ತಮವಾಗಿ ಕೂಡಿ ಬರಲಿದೆ.
ಮಿಥುನ
ನ್ಯಾಯವಾದಿಗಳು ತಮ್ಮ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನೆಡೆಸಿದರೂ ತೀರ್ಪಿನ ಬಗ್ಗೆ ಕಳವಳ ಇರಲಿದೆ. ಸಾಮಾಜಿಕ ಕೆಲಸವನ್ನು ಬದಿಗಿಟ್ಟು ನಿಮ್ಮ ಜವಾಬ್ದಾರಿಯ ಬಗ್ಗೆ, ಸ್ವಂತ ವಿಚಾರಗಳತ್ತ ಹೆಚ್ಚಿನ ಗಮನವನ್ನು ಹರಿಸಿ.
ಕರ್ಕಾಟಕ
ನಿಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಜೀವನವನ್ನು ಉತ್ತಮ ಹಾದಿಯಲ್ಲಿ ಮುನ್ನಡೆಯುವಿರಿ. ಉದ್ವೇಗವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಉತ್ತಮ. ಭರತನಾಟ್ಯ ಕಲಾವಿದರಿಗೆ ಉತ್ತಮವಾದ ವೇದಿಕೆ ಸಿಗಲಿದೆ.
ಸಿಂಹ
ಉದ್ಯೊಗಿ ವಿಚಾರಗಳತ್ತ ಹೆಚ್ಚಿನ ಗಮನವನ್ನು ಕೊಡಬೇಕಾಗುವುದು. ಯೋಚಿಸಿರುವ ಕೆಲಸಗಳು ಉತ್ತಮವಾಗಿ ನೆರವೇರಿವುದರಿಂದ ನೆಮ್ಮದಿ ಇರುವುದು. ಸಂದಿಗ್ಧ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿ.
ಕನ್ಯಾ
ನಿಮ್ಮ ಕ್ರಿಯಾತ್ಮಕತೆಗೆ ಇಂದು ಉತ್ಕೃಷ್ಟ ಮಟ್ಟದಲ್ಲಿ ಬೇಡಿಕೆ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಇಂದು ಹಲವಾರು ಸವಾಲುಗಳನ್ನು ಎದುರುನೋಡಬೇಕಾಗುತ್ತದೆ. ವಿದೇಶದಲ್ಲಿರುವ ಮಕ್ಕಳಿಂದ ಸಂತಸದ ಸುದ್ದಿಯೊಂದನ್ನು ಕೇಳುವಿರಿ.
ತುಲಾ
ವಿಷಯಗಳನ್ನು ಹಿಡಿತಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗಿ. ಕೆಲಸಕ್ಕೆ ಸಂಬಂಧಿಸಿದಂತೆ ಅಧ್ಯಯನವೂ ಅವಶ್ಯವಾಗಿ ಬೇಕಾಗುತ್ತದೆ. ಬ್ಯಾಂಕ್ ಸಿಬ್ಬಂದಿಗೆ ಹೆಚ್ಚಿನ ಕೆಲಸವಿರುವುದು.
ವೃಶ್ಚಿಕ
ಆಫೀಸಿನಲ್ಲಿ ಅಚ್ಚರಿಯ ಸಂಗತಿಗಳು ನಡೆಯಲಿವೆ. ನಿಮ್ಮ ಕೆಲಸಕ್ಕೆ ಕುಟುಂಬದ ಸದಸ್ಯರು ಹೆಚ್ಚಿನ ಸಹಾಯವನ್ನು ಮಾಡುವರು. ಇಂದು ರಾಜಕೀಯ ಪ್ರಭಾವೀ ವ್ಯಕ್ತಿಗಳೊಂದಿಗಿನ ಮಾತುಕಥೆ ನಿಮಗೆ ಲಾಭವನ್ನು ತರಲಿದೆ.
ಧನು
ಊರಿನ ಅಭಿವೃದ್ಧಿ ಕಾರ್ಯದ ಜವಾಬ್ದಾರಿಗಳು ನಿಮ್ಮ ಸಾಮಾಜಿಕ ಬದುಕಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದು. ಪಾಲುದಾರರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ. ತಂದೆಯವರ ಆರೋಗ್ಯ ಸುಧಾರಣೆಯಿಂದ ನೆಮ್ಮದಿ ಇರುವುದು.
ಮಕರ
ಸರ್ಕಾರಿ ಸಂಬಂಧವಾದ ಅಧಿಕಾರಿಗಳೊಂದಿಗೆ ವ್ಯವಹರಿಸಲು ಇದು ಉತ್ತಮ ದಿನವಾಗಿದೆ. ಶಸ್ತ್ರ ವೈದ್ಯರಿಗೆ ಇಂದು ಹೆಚ್ಚಿನ ಅವಕಾಶಗಳು ದೊರೆಯಲಿವೆ. ಸ್ವ ಉದ್ಯೋಗಿಗಳಿಗೆ ಒಳ್ಳೆಯ ಲಾಭ ಗಳಿಸುವ ಅವಕಾಶ ಇರುವುದು.
ಕುಂಭ
ಮಂದಗತಿಯಲ್ಲಿ ಕೆಲಸ ಕಾರ್ಯಗಳು ನೆರವೇರಿದರೂ ದಿನಾಂತ್ಯದಲ್ಲಿ ಸಂಪೂರ್ಣವಾಗುವುದರ ಬಗ್ಗೆ ಸಂಶಯ ಬೇಡ. ಕೆಲಸದ ಮೇಲಿನ ಪ್ರಯಾಣಗಳು ಹಿತಕರವಾಗಿರುವುದು. ಹಣಕಾಸಿನ ಕೊರತೆ ಕಾಣುವುದಿಲ್ಲ.
ಮೀನ
ವ್ಯವಹಾರದ ಮಾತುಕತೆಗಳಿಗೆ ಒಳ್ಳೆಯ ದಿನ. ನಿರುದ್ಯೋಗಿಗಳಿಗೆ ಉತ್ತಮ ನೌಕರಿ ದೊರೆತು ಸಂತಸ ಹೊಂದುವರು. ಉಸಿರಾಟದ ಸಮಸ್ಯೆ ಹೊಂದಿದವರಿಗೆ ವೈದ್ಯರ ಸಲಹೆ ಬೇಕಾಗುತ್ತದೆ. ಉಮಾಮಹೇಶ್ವರನನ್ನು ಆರಾಧಿಸಿ, ಶುಭವಾಗುವುದು.
ADVERTISEMENT
ADVERTISEMENT