ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಜೀವನದ ಮುಖ್ಯ ಮಜಲನ್ನು ತಲುಪುವಿರಿ
Published 3 ಸೆಪ್ಟೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜೀವನದ ಮುಖ್ಯ ಮಜಲನ್ನು ತಲುಪುವಿರಿ. ಸಂಜೆ ವೇಳೆ ಆರೋಗ್ಯದ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಾಣಿಸಿಕೊಳ್ಳಬಹುದು. ಮಗಳ ಭವಿಷ್ಯದ ಬಗ್ಗೆ ಕಾಳಜಿ ಹುಟ್ಟುವುದು.
ವೃಷಭ
ಊಟದ ಸಮಯ ಪದೇಪದೇ ಬದಲಾಯಿಸುವುದರಿಂದಾಗಿ ಅಜೀರ್ಣಾದಿ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಪ್ರಾಣಿ ಸಾಕಾಣಿಕೆ ನಡೆಸುವವರಿಗೆ ಲಾಭದಾಯಕ ದಿನ.
ಮಿಥುನ
ಹೊಸ ವಸ್ತ್ರ ಖರೀದಿಗೆ ಪ್ರಶಸ್ತವಾದ ದಿನ. ವಾರ್ಷಿಕವಾದ ಖರ್ಚು ವೆಚ್ಚಗಳು ವ್ಯತ್ಯಾಸಗೊಳ್ಳುತ್ತಿರುವುದು ಗಮನಕ್ಕೆ ಬರಲಿದೆ. ಸಾರ್ವಜನಿಕವಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಿರಿ.
ಕರ್ಕಾಟಕ
ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು ಎನ್ನುವ ಪರಿಸ್ಥಿತಿ ಎದುರಿಸುವ ಸಾಧ್ಯತೆ ಇದೆ. ಶಾಲಾ ಕಾಲೇಜುಗಳಲ್ಲಿ ಕೆಲಸ ನಡೆಸುವವರು ವಿದ್ಯಾರ್ಥಿಗಳಿಗೆ ಭಯ ಪಡಬೇಕಾಗುವುದು. ಪ್ರತಿಷ್ಠೆ ಹೆಚ್ಚಿಸಿಕೊಳ್ಳುವಿರಿ.
ಸಿಂಹ
ದೊಡ್ಡ ಕಾರ್ಯಕ್ರಮವನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಹೊಂದುವಿರಿ. ಕಾರಣವಿಲ್ಲದೆ ದುಃಖವಾಗುವುದು ಆಶ್ಚರ್ಯವನ್ನು ತರಲಿದೆ. ಚರ್ಮದ ಬಗ್ಗೆ ಕಾಳಜಿ ಬೇಕಾಗುವುದು.
ಕನ್ಯಾ
ಕೆಲಸಗಳಿಗೆ ವಾತಾವರಣವು ಸಹಕರಿಸದೆ ಇರಬಹುದು. ಕಳೆದು ಹೋದ ವಸ್ತುವಿನ ಲಭ್ಯತೆ ಸಾಧ್ಯವಿದೆ. ಪುಸ್ತಕ ಮಾರಾಟಗಾರರು ಹಾಗೂ ಸ್ಟೇಷನರಿ ವಸ್ತುಗಳ ಮಾರಾಟಗಾರರು ಲಾಭ ಹೊಂದುವಿರಿ.
ತುಲಾ
ಅರ್ಥವತ್ತಾದ ಪರಿಪಕ್ವವಾದ ಮಾತು ಎದುರಾಳಿಯನ್ನು ಮಾತಿಗೆ ಒಪ್ಪುವಂತೆ ಮಾಡುವುದು. ಅಂದುಕೊಂಡ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ಮುಗಿಯಲಿವೆ.
ವೃಶ್ಚಿಕ
ತರುಣ–ತರುಣಿಯರಿಗೆ ಮೋಜು ಮಸ್ತಿಯಲ್ಲಿಯೇ ಹೆಚ್ಚಿನ ಮನಸ್ಸು ಉಂಟಾಗುವುದು.ಆದರೆ ಅದರಿಂದ ಹೊರಬರಲು ಪ್ರಯತ್ನಿಸಿ. ಎಲ್ಲಾ ಕಷ್ಟಗಳಿಗೂ ಆತ್ಮಸ್ಥೈರ್ಯ ಜೊತೆಯಾಗುವುದು.
ಧನು
ಅಕ್ಕನ ಮನೆಯ ವಿಶೇಷವಾದ ದಿನದಲ್ಲಿ ಭಾಗವಹಿಸುವಿರಿ. ಉತ್ಸವಾದಿಗಳಲ್ಲಿ ಪರಿಚಯವಾದ ವ್ಯಕ್ತಿಯನ್ನು ಬಾಳಸಂಗಾತಿಯಾಗಿ ಆರಿಸಿಕೊಳ್ಳಬಹುದು. ಶೀತ ಉಂಟುಮಾಡುವ ವಸ್ತುಗಳಿಂದ ಅಂತರ ಕಾಯ್ದುಕೊಳ್ಳಿರಿ.
ಮಕರ
ಮುಂದಿನ ತಲೆಮಾರಿಗೆ ಆಸ್ತಿಯನ್ನು ಮಾಡಿ ಇಡುವ ವಿಚಾರವಾಗಿ ಬಹಳ ಯೋಚನೆಯನ್ನು ಮಾಡುವಿರಿ. ಅನಿವಾರ್ಯದ ಕಾರಣದಿಂದ ಚಿನ್ನ ಖರೀದಿ ಮಾಡಬಹುದು. ಅಜ್ಜನ ಮನೆಗೆ ಭೇಟಿ ನೀಡುವ ಅವಕಾಶವಿದೆ.
ಕುಂಭ
ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳಿದ್ದರೂ ಕೆಲಸಗಳಿಗೆ ಅದು ಅಡ್ಡಿಯಾಗುವುದಿಲ್ಲ. ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಹೆಚ್ಚಿನ ಸಾಮರ್ಥ್ಯ ವನ್ನು ನೀಡು ಎಂದು ದೇವರಲ್ಲಿ ಪ್ರಾರ್ಥಿಸಿ.
ಮೀನ
ಕೆಲಸಗಳನ್ನು ನಾಳೆಗೆ ಮುಂದೂಡುವುದು ಇಂದಿಗೆ ಸುಲಭವೆಂದು ಕಂಡರೂ ಹಾಗೆ ಮಾಡದಿರಲು ಯತ್ನಿಸಿ. ಮನೆಯ ವ್ಯಕ್ತಿಗಳಿಗಿಂತ ಸಾಮಾಜಿಕ ಜಾಲತಾಣದ ವ್ಯಕ್ತಿಗಳೇ ಪ್ರಯೋಜನಕ್ಕೆ ಬರುವರು.
ADVERTISEMENT
ADVERTISEMENT