ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಇಂದು ಉತ್ತಮ ದಿನ
Published 25 ಜುಲೈ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ನೇಹಿತನ ಮಾತನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕೇಳುವುದರಿಂದ ಅವರ ಆಜ್ಞಾನುವರ್ತಿಯನ್ನಾಗಿಸಬಹುದು. ಸಿಹಿ ಖಾದ್ಯ ತಯಾರಕರಿಗೆ ಬೇಡಿಕೆಗಳು ಹೆಚ್ಚಲಿವೆ. ಗೃಹಾಲಂಕಾರ ವಸ್ತುಗಳ ಖರೀದಿಗೆ ಉತ್ತಮ ದಿನ.
ವೃಷಭ
ಹೊಸ ದಾರಿಯನ್ನು ಹಿಡಿಯಲು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಗ್ರಹಗತಿಯ ಬೆಂಬಲ ಇದೆ. ನಡೆಯುವ ಘಟನೆಯಿಂದ ಸಂಗಾತಿಗೆ ಸಂತೋಷವಾಗುವುದು. ಕೋಪವನ್ನು ನಿಯಂತ್ರಣ ಮಾಡಿಕೊಳ್ಳಿ.
ಮಿಥುನ
ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುವುದು ಅಗತ್ಯ. ಶ್ರಮಕ್ಕೆ ಸರಿಸಮಾನ ಧನಾಗಮನಕ್ಕೆ ತೊಂದರೆಯಿಲ್ಲ. ಕೃಷಿಕರಿಗೆ ಅಧಿಕ ಒತ್ತಡ ದೇಹಕ್ಕೆ ಆಯಾಸವನ್ನು ಮಾಡಲಿದೆ.
ಕರ್ಕಾಟಕ
ಸಂಗೀತ ಕ್ಷೇತ್ರದಲ್ಲಿರುವವರು ಧ್ವನಿಯ ಬಗ್ಗೆ, ಕ್ರೀಡಾಪಟುಗಳು ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೌಟುಂಬಿಕ ಕೆಲಸಗಳು ನಿರಾಯಾಸವಾಗಿ ಸಾಗುವುದು. ವ್ಯಾಪಾರ ವಿಸ್ತರಣೆ ಮಾಡುವ ಬಗ್ಗೆ ಯೋಚಿಸಿ.
ಸಿಂಹ
ಕಲ್ಪನೆಗೂ ಮತ್ತು ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಅಸಮಾಧಾನಕ್ಕೆ ಕಾರಣವಾಗಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ತಂದುಕೊಳ್ಳುವುದು ನಿಮ್ಮ ಕೈಯಲ್ಲಿದೆ.
ಕನ್ಯಾ
ಸಹೋದ್ಯೋಗಿಗಳಿಂದ ನಿರೀಕ್ಷಿತ ಕೆಲಸಗಳು ನಡೆಯುವುದು ಕಷ್ಟವಾಗಲಿದೆ. ಭೂ ಖರೀದಿಯ ಯೋಜನೆಯಲ್ಲಿರುವವರಿಗೆ ಮಧ್ಯವರ್ತಿಗಳ ಮೂಲಕದ ವ್ಯವಹಾರ ಕೈಗೂಡುವುದು. ಸಂತಾನಭಾಗ್ಯದ ಲಕ್ಷಣವಿದೆ.
ತುಲಾ
ಅನುಸರಿಸುವ ವ್ಯಕ್ತಿಗಳು ಈ ದಿನ ಹೆಚ್ಚಿರುತ್ತಾರೆ. ನಡವಳಿಕೆಯಲ್ಲಿ ಹೆಚ್ಚಿನ ಗಮನವಿರಲಿ. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಶುಭ ಸುದ್ದಿ ಕೇಳಲಿದೆ. ಅತಿಯಾದ ನಿದ್ದೆ ನಿಮ್ಮ ಕೆಲಸವನ್ನು ಹಾಳುಮಾಡುವುದು.
ವೃಶ್ಚಿಕ
ವಿಳಂಬವಾಗುತ್ತಿರುವ ಕಾರ್ಯಗಳನ್ನು ಶೀಘ್ರವಾಗಿ ಮುಕ್ತಾಯ ಮಾಡಲು ಕುಲದೇವತೆ ಹಾಗು ಗ್ರಾಮದೇವತೆಯ ಮೊರೆ ಹೋಗಿ. ಸ್ನೇಹಿತರ ಕೆಲವು ಅಹಿತಕರ ನಡೆಗಳಿಂದ ಇರಿಸುಮುರಿಸಾಗುವುದು.
ಧನು
ಹೊಸ ಹೂಡಿಕೆಯಲ್ಲಿ ಅನುಭವವಿಲ್ಲದಿದ್ದರೆ ನಷ್ಟಗಳನ್ನೇ ನೋಡಬೇಕಾಗುತ್ತದೆ. ಬಾಲ್ಯದ ಬಯಕೆಯು ಈಡೇರುವುದು. ಶತ್ರುಗಳ ಉಪಟಳ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಉಂಟಾಗುವ ಲಕ್ಷಣವಿದೆ.
ಮಕರ
ಮಾತಿನ ಬಗ್ಗೆ ಜಾಗ್ರತೆ ವಹಿಸಿ, ಮಾತಿನಿಂದ ಸಮಸ್ಯೆ ಉಂಟಾಗಬಹುದು. ಭೂ ಸಂಬಂಧ ವ್ಯವಹಾರದಲ್ಲಿ ಪತ್ರಗಳ ಬಗ್ಗೆ ಎರಡು ಬಾರಿ ಪರಿಶೀಲಿಸುವುದು ಉತ್ತಮ. ಆರೋಪವನ್ನು ಕೇಳಬೇಕಾಗಬಹುದು
ಕುಂಭ
ಪಾಲುದಾರಿಕೆ ವ್ಯವಹಾರದಲ್ಲಿ ಯಾವುದೇ ರೀತಿಯ ಸಂಶಯಕ್ಕೆ ಆಸ್ಪದ ಕೊಡದೆ ಪಾರದರ್ಶಕತೆ ಉಳಿಸಿಕೊಳ್ಳಿ. ಗುರುಗಳ ಆಜ್ಞೆಯನ್ನು ಪಾಲಿಸಿದಲ್ಲಿ ಶ್ರೇಯಸ್ಸಾಗುವುದು. ಬುದ್ಧಿ ಪರಮಾತ್ಮನಲ್ಲಿ ಸ್ಥಿರವಾದರೆ ಜಯ ಖಂಡಿತ.
ಮೀನ
ಗ್ರಹಗಳ ಚಲನೆಯು ಸುಖಮಯವಾಗಿ ಜೀವನ ನಡೆಸಲು ಅನುಕೂಲವಾಗಿದೆ. ಮಕ್ಕಳ ಮೂಲಕ ಕೆಲವು ಸಮಸ್ಯೆಗಳಿಗೆ ಪರಿಹಾರವು ದೊರೆಯುತ್ತದೆ. ಅನಾರೋಗ್ಯ ಪರಿಹಾರವಾಗುವುದು.