ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ
Published 29 ಸೆಪ್ಟೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕುಟುಂಬದವರ ಜತೆ ಕಳೆಯುವ ಪ್ರತಿಕ್ಷಣವು ನೆನಪಿಟ್ಟುಕೊಳ್ಳಬೇಕಾದಂಥ ಸನ್ನಿವೇಶಗಳಾಗಿರುತ್ತದೆ. ಮಕ್ಕಳ ಸಂತೋಷಕ್ಕಾಗಿ ರಹಸ್ಯವಾಗಿ ಸಹಾಯ ಮಾಡುತ್ತೀರಿ.
ವೃಷಭ
ಏಕಾಗ್ರತೆಯಿಂದ ಶಿವನ ನಾಮಸ್ಮರಣೆ ಅಥವಾ ಧ್ಯಾನ ಮಾಡುವುದು ಒಳ್ಳೆಯದು. ಮನೆ ಕೊಳ್ಳುವ ವಿಷಯದ ಬಗ್ಗೆ ಮಾಹಿತಿ ಪಡೆಯಿರಿ. ಶತ್ರುಗಳು ಮಿತ್ರರಾಗಲು ಬಯಸಿ ಬರುತ್ತಾರೆ.
ಮಿಥುನ
ಕೌಟುಂಬಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಕಾರ್ಯಪ್ರವೃತ್ತರಾಗುವಿರಿ. ಅವಿವಾಹಿತರಿಗೆ ಒಳ್ಳೆಯ ಕಡೆ ಸಂಬಂಧ ಬರಲಿದೆ. ನಾಜೂಕಿನ ಕೆಲಸ ಕಾರ್ಯಗಳಿಂದಾಗಿ ಮನ್ನಣೆ ಗಳಿಸುವಿರಿ.
ಕರ್ಕಾಟಕ
ಹಿಂದೂಸ್ತಾನಿ ಸಂಗೀತಗಾರರು ನಿಮ್ಮ ಕಚೇರಿಯಲ್ಲಿ ಭಾವಪರವಶರಾಗಿ ಹಾಡಿದ ವಿರಹ ರಾಗಕ್ಕೆ ಅಭಿಮಾನಿಗಳು ಮರುಳಾಗುತ್ತಾರೆ. ಆರಂಭಿಸಿದ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಿದರೂ ಪೂರ್ಣಗೊಳ್ಳಲಿವೆ.
ಸಿಂಹ
ಬದ್ಧವೈರಿಗಳ ಮನೆಯ ಕಷ್ಟವನ್ನು ನೋಡಿ ಮನಸ್ಸು ಕರಗಿ ಸಹಾಯ ಮಾಡುವ ಸಾಧ್ಯತೆಗಳಿವೆ. ಎದುರಾಳಿಗೆ ಪರಿಣಾಮಕಾರಿಯಾಗುವ ನಿರ್ಧಾರ ಅಗತ್ಯವಾಗಿ ತೆಗೆದುಕೊಳ್ಳಿ. ಪಾಲುದಾರಿಕೆ ವ್ಯವಹಾರಗಳು ಲಾಭ ತರಲಿದೆ.
ಕನ್ಯಾ
ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಲೋಪದೋಷವನ್ನು ಮಾಡದೆ ಅತ್ಯಂತ ಎಚ್ಚರಿಕೆ ವಹಿಸಿ. ವ್ಯಂಗ್ಯಚಿತ್ರ ಕಲಾವಿದರಿಗೆ ಮಾಸ ಪತ್ರಿಕೆಯ ಸಂಸ್ಥೆಯಿಂದ ಅವಕಾಶಗಳು ದೊರೆಯಲಿವೆ.
ತುಲಾ
ಉತ್ತಮ ವಿಚಾರಗಳು ಜಾರಿಗೆ ಬರಬೇಕೆಂದು ಮಾಡುತ್ತಿರುವ ಪ್ರಯತ್ನ ಶೀಘ್ರ ಶುಭಫಲ ನೀಡುವುದು. ಪ್ರೀತಿಸುವವರ ಮಾರ್ಗದರ್ಶನ ಈ ದಿನ ದೊರೆಯಲಿದ್ದು, ಹೊಸ ಚೈತನ್ಯ ತುಂಬಿ ಬರಲಿದೆ.
ವೃಶ್ಚಿಕ
ಕೆಲವು ದಿನಗಳ ಬಳಿಕ ಸಮಾನಮನಸ್ಕರ ಜತೆ ಕಳೆದ ಸಮಯವು ಹಲವು ತರಹದ ಜ್ಞಾನವರ್ಧನೆ ಮಾಡಿಕೊಳ್ಳಲು ಸಹಾಯಕಾರಿ. ಅಧಿಕಾರಿ ಹಾಗೂ ಹಿರಿಯರಿಂದ ಸಹಾಯ ಸಹಕಾರಗಳನ್ನು ಅಪೇಕ್ಷಿಸುವಂತಹ ದಿನ.
ಧನು
ತಾಯಿಯ ಬ್ಯಾಂಕ್ ಚಟುವಟಿಕೆಗಳು ಹಾಗೂ ಕಚೇರಿ ಕೆಲಸಗಳು ಜವಾಬ್ದಾರಿಗೆ ಬರುವುದರಿಂದ ತಿರುಗಾಟ ಮಾಡಬೇಕಾಗುವುದು. ಹನುಮ ಸಮೇತನಾದ ಶ್ರೀರಾಮನ ಪರಿವಾರವನ್ನು ಆರಾಧಿಸಿ ಶ್ರೇಯೋವಂತರಾಗಿರಿ.
ಮಕರ
ಯಾರಿಂದಲೋ ಕೇಳಿಸಿಕೊಂಡ ವಾರ್ತೆಗಳನ್ನು ಹಬ್ಬಿಸುವ ಮೊದಲು ಆ ಸುದ್ದಿಯು ಸತ್ಯವೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಿರಿ. ವಾತ-ಪಿತ್ತಗಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಮನೋರಂಜನೆಗಾಗಿ ಖರ್ಚು ಮಾಡುವಿರಿ.
ಕುಂಭ
ವ್ಯಾಪಾರ ವ್ಯವಹಾರಗಳು ಅಧಿಕ ವರಮಾನಗಳನ್ನು ತರಲಿವೆ. ನಿವೃತ್ತಿ ಜೀವನವನ್ನು ಸುಖಕರವಾಗಿ ಕಳೆಯಲು ಹೆಚ್ಚು ಶ್ರಮವಹಿಸಿ ಕೆಲಸ ಮಾಡುವ ಯೋಜನೆಯನ್ನು ಮಾಡುವಿರಿ.
ಮೀನ
ಉದ್ಯೋಗದ ವಿಷಯದಲ್ಲಿ ಉತ್ತಮ ಅವಕಾಶಗಳು ಕೈತಪ್ಪುವ ಸಂದರ್ಭಗಳು ಎದುರಾಗಬಹುದು. ಈ ದಿನ ನೀವು ಆಡಿದ ಮಾತುಗಳು ತಿರುಗಿ ಮುಳ್ಳಾಗುವ ರೀತಿಯಲ್ಲಿ ಇರಲಿದೆ.