ಶನಿವಾರ, 30 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಲು ಇದು ಸಕಾಲ
Published 9 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹುಟ್ಟೂರಿನಲ್ಲಿ ಕೃಷಿ ಮಾಡುವ ಅಥವಾ ಕೃಷಿ ಭೂಮಿ ಖರೀದಿಸುವ ಆಲೋಚನೆ ನೆರವೇರುವುದು. ವ್ಯಾಪಾರ ವಿಸ್ತರಿಸಲು ಬೇಕಾದ ತಯಾರಿಯನ್ನು ಮಾಡಿಕೊಳ್ಳಿ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನರಕ್ಕೇರಲು ಇದು ಸಕಾಲವಾಗಿದೆ.
ವೃಷಭ
ನಿಮ್ಮ ಪ್ರಗತಿಯನ್ನು ಎಲ್ಲೆಡೆಯೂ ಪ್ರಶಂಸಿಸುತ್ತಿರುವುದರಿಂದ ಕಾರ್ಯ ಕ್ಷೇತ್ರದಲ್ಲಿ ಹೊಸದೊಂದು ಹುಮ್ಮಸ್ಸು ಬರುವುದರ ಜೊತೆಗೆ ವೃತ್ತಿಪರ ಶತ್ರುಗಳ ಸಂಖ್ಯೆಯು ಗಗನ ಮುಟ್ಟಲಿದೆ. ವಾಹನ ರಿಪೇರಿಗಾಗಿ ಖರ್ಚು ಸಂಭವಿಸಲಿದೆ.
ಮಿಥುನ
ನೀವು ನಂಬಿರುವ ವ್ಯಕ್ತಿಗಳ ಬಗ್ಗೆ ನಿಮ್ಮ ನಿಲುವುಗಳನ್ನು ಬದಲಾಯಿಸಿ ಕೊಳ್ಳಬೇಕೆನಿಸಿದ್ದರೂ ಹಾಗೆ ಮಾಡದಿರಿ, ಅದು ಈ ದಿನಕ್ಕೆ ಫಲ ಪ್ರದವಲ್ಲ. ಆರಕ್ಷಕ ಸಿಬ್ಬಂದಿಗೆ ಕೆಲಸದ ಒತ್ತಡ ಅಥವಾ ಕೆಲಸದ ಸಮಯ ಹೆಚ್ಚಲಿದೆ.
ಕರ್ಕಾಟಕ
ಸಂಘ ಸಂಸ್ಥೆಗಳ ಸಭೆಗಳಲ್ಲಿ ನಿಮ್ಮ ಮಾತಿಗೆ ಬೆಲೆ ಇಲ್ಲದಂತೆ ಅಥವಾ ನಿಮ್ಮ ಮಾತನ್ನು ಅಪಾರ್ಥವಾಗಿ ಕಲ್ಪಿಸಿಕೊಂಡು ನಿಮ್ಮನ್ನು ದೂಷಿಸುವಂತಹ ಘಟನೆಗಳು ಸಂಭವಿಸಬಹುದು. ಆರೊಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ.
ಸಿಂಹ
ನಿಮ್ಮೆದುರಿಗಿರುವ ಸವಾಲನ್ನು ಎದುರಿಸುವ ಶಕ್ತಿ ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವವು ನಿಮ್ಮಲ್ಲಿದೆ. ಎಲ್ಲಾ ವಿಷಯಗಳಲ್ಲಿಯೂ ಸಮಾಧಾನದಿಂದಿರುವುದು ಉತ್ತಮ.
ಕನ್ಯಾ
ಉತ್ತಮ ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸುವಲ್ಲಿ ಪತ್ನಿಯ ಸಹಾಯವನ್ನು, ಸಲಹೆಯನ್ನು ಸ್ವೀಕರಿಸಿ. ದಾಂಪತ್ಯದಲ್ಲಿ ಹೊಂದಾಣಿಕೆಯ ಮನೋಭಾವದಿಂದ ಸಾಮರಸ್ಯ ವೃದ್ಧಿಯಾಗುವುದು.
ತುಲಾ
ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ವೃದ್ಧಿಯಾಗುವುದು. ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ಸಮಾಧಾನ ಕಂಡುಕೊಳ್ಳಬಹುದು.
ವೃಶ್ಚಿಕ
ಮನೆಯವರ ಸಹಾಯದಿಂದ ನಿಮ್ಮ ಹಣಕಾಸಿನ ತೊಂದರೆಗಳು ದೂರಾಗಿ ಈ ದಿನ ಹೊಸ ಯೋಜನೆಗೆ ಚಾಲನೆಯು ದೊರೆಯಲಿದೆ. ನಿಮ್ಮನ್ನು ಅವಲಂಬಿಸಿರುವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಚ್ಚಲಿದೆ.
ಧನು
ಬರುವ ಅವಕಾಶಗಳನ್ನು ನಿಮ್ಮತ್ತ ತಿರುಗಿಸಿಕೊಂಡು ಸದುಪಯೋಗ ಪಡೆದುಕೊಳ್ಳುವುದು ನಿಮಗೆ ಬಿಟ್ಟ ವಿಷಯಗಳಗಿರುತ್ತದೆ. ಷೇರುಪೇಟೆಯ ವ್ಯವಹಾರಗಳಲ್ಲಿ ಲಾಭಾಂಶ ಕಡಿಮೆ ಇರುವುದು.
ಮಕರ
ನಿಮ್ಮ ಶತ್ರುಗಳಿಗೂ ಶುಭವನ್ನು ಹಾರೈಸುವ ರೀತಿಯಲ್ಲಿ ನಿಮ್ಮ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ನಿಮಗೆ ಶ್ರೇಯಸ್ಸು ಉಂಟಾಗುವುದು. ಬರಬೇಕಾಗಿದ್ದ ಹಣ ವಸೂಲು ಮಾಡಿಕೊಳ್ಳಲು ನಿಷ್ಠುರವಾಗಿ ವರ್ತಿಸಬೇಕಾಗುವುದು.
ಕುಂಭ
ಆಲೋಚಿಸಿದಂತೆ ಕೆಲಸಗಳು ನಡೆಯದೇ ಹಿನ್ನಡೆ ಎಂಬಂತೆ ನಿಮ್ಮ ಮನಸ್ಸಿಗೆ ಕಾಣಬಹುದು, ಆದರೆ ದೇವರ ಆಶೀರ್ವಾದ ನಿಮ್ಮ ಮೇಲಿರುವ ಕಾರಣ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತವೆ.
ಮೀನ
ಮಳೆಯಲ್ಲಿ ನೆನೆಯುವುದು ಅಥವಾ ನಿಮ್ಮ ದೇಹಕ್ಕೆ ಅಹಿತಕರವಾದ ಕೆಲಸದ ಕಾರಣದಿಂದ ಜ್ವರಾದಿ ಬಾಧೆಗಳು ಕಾಣಿಸಿಕೊಳ್ಳಬಹುದು. ಇಂದು ನಿಮ್ಮ ಗ್ರಹಗತಿಗಳು ಉತ್ತಮವಾಗಿದ್ದು ಅದೃಷ್ಟ ಹುಡುಕಿಕೊಂಡು ಬರಲಿದೆ.
ADVERTISEMENT
ADVERTISEMENT