ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಬದಲಾವಣೆಯ ಸಂಭವವಿದೆ
Published 8 ಏಪ್ರಿಲ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಲಹೆ ಸೂಚನೆಗಳನ್ನು ಹೆಚ್ಚು ಚರ್ಚಿಸದೆ ಮೇಲಧಿಕಾರಿಗಳು ಒಪ್ಪಿಕೊಳ್ಳುವರು. ಗದ್ದೆ ಅಥವಾ ತೋಟದ ಕೆಲಸಗಳಿಗೆ ಮಗನಿಂದ ದೈಹಿಕ ಮತ್ತು ಆರ್ಥಿಕ ಸಹಾಯ ಸಿಗುವುದು. ರುಚಿಯಾದ ಭರ್ಜರಿ ಊಟ ಸವಿಯುವಿರಿ.
ವೃಷಭ
ಹಿರಿಯರ ಆಶೀರ್ವಾದದೊಂದಿಗೆ ಕಾರ್ಯವನ್ನು ಆರಂಭಿಸಿ. ಒಳ್ಳೆಯದಾಗುತ್ತದೆ. ಸಮಸ್ಯೆಗಳನ್ನು ಶೀಘ್ರವಾಗಿ ಬಗೆ ಹರಿಸಿಕೊಳ್ಳಲು ಪ್ರಯತ್ನಿಸುವಿರಿ. ಸ್ವ ಉದ್ಯೋಗಿಗಳಿಗೆ ಪರಿಶ್ರಮದಿಂದ ಅಧಿಕ ಸಂಪಾದನೆ ಇರುವುದು.
ಮಿಥುನ
ಪೂರ್ವ ಆಲೋಚನೆಯ ಕೌಟುಂಬಿಕ ಅಭಿವೃದ್ಧಿಯ ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ಮಂಗಳ ಕಾರ್ಯಗಳು ಸುಗಮವಾಗಿ ನಡೆಯಲೆಂದು ಮನೆ ದೇವರಿಗೆ ಪೂಜೆ ಸಲ್ಲಿಸುವ ಬಗ್ಗೆ ವಿಚಾರ ಮಾಡಿ.
ಕರ್ಕಾಟಕ
ಉದ್ಯೋಗದಲ್ಲಿ ಬದಲಾವಣೆಯ ಸಂಭವವಿದೆ. ಆರ್ಥಿಕ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯುವುದು. ದುರ್ಗಾದೇವಿ ಯಲ್ಲಿ ಶರಣಾಗುವುದರಿಂದ ಸಂತೋಷ ಪ್ರಾಪ್ತಿ.
ಸಿಂಹ
ಮಗನಿಗೆ ಸಂಸ್ಥೆಯಿಂದ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು. ಖಾಸಗಿ ಗುಮಾಸ್ತ ಕೆಲಸದಲ್ಲಿದ್ದವರಿಗೆ ಬೇಜವಾಬ್ದಾರಿತನ ತೋರಿದಲ್ಲಿ ಪೂರ್ಣ ವಿರಾಮ ಸಿಗುವಂತಾಗಲಿದೆ.
ಕನ್ಯಾ
ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಪೂರ್ತಿಗೊಳಿಸುವುದಕ್ಕೆ ಸಹೋದ್ಯೋಗಿ ನೆರವಾಗುವರು. ಕಾರ್ಯಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಗುಪ್ತಚರ ದಳ ಮಂದಿಗೆ ಕಾರ್ಯಭಾರಗಳು ಹೆಚ್ಚಲಿವೆ.
ತುಲಾ
ಪೊಲೀಸ್‌ ವೃತ್ತಿಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರ ಸಂಚಾರ ಕಂಡುಬರಲಿದೆ. ಧೈರ್ಯದಿಂದ ಮತ್ತು ಅಧಿಕ ಪ್ರಯತ್ನ ಬಲದಿಂದ ಕಾರ್ಯದಲ್ಲಿ ಮುನ್ನುಗ್ಗಿ. ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿರುತ್ತದೆ .
ವೃಶ್ಚಿಕ
ಜನರ ಜೊತೆ ನಗು-ನಗುತ್ತಾ ಬೆರೆಯುವ ನಿಮ್ಮ ವರ್ತನೆಯಿಂದ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗುತ್ತೀರಿ. ನಿಜ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಹೆಚ್ಚಿನ ಅಭಿವೃದ್ಧಿ ಅನುಭವಕ್ಕೆ ಬರಲಿದೆ.
ಧನು
ಎಲ್ಲ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ನಿಮಗೆ ಬಂದಿದೆ. ಆದರೂ ಮುನ್ನೆಚ್ಚರಿಕೆ ಅಗತ್ಯ. ಆಡಿಟಿಂಗ್ ಕೆಲಸಗಳಿಂದ ಹೆಚ್ಚಿನ ವರಮಾನಗಳಿಸುವಿರಿ. ಇತರರ ಮಾತಿಗೆ ಕಿವಿಗೊಡದೆ ಇರುವುದು ಉತ್ತಮವಾಗಿರುತ್ತದೆ.
ಮಕರ
ಅನಗತ್ಯವಾಗಿ ಮಾಡುತ್ತಿರುವಂಥ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಅಮೂಲ್ಯವಾದ ವಸ್ತುವೊಂದನ್ನು ಉಡುಗೊರೆಯಾಗಿ ಪಡೆಯಲಿದ್ದೀರಿ.
ಕುಂಭ
ಸ್ನೇಹಿತರು ಹಾಗೂ ಹಿತಚಿಂತಕರು ನಿಮ್ಮ ಸಹಾಯಕ್ಕೆ ಎಂದಿಗೂ ಇರುವರೆಂಬ ನಂಬಿಕೆ ಬರುವುದು. ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವ ಸಂಭವವಿದೆ. ಹುಟ್ಟೂರಿನಿಂದ ಶುಭ ಸುದ್ದಿಯನ್ನು ಕೇಳುವಿರಿ.
ಮೀನ
ಮೇಲಧಿಕಾರಿಗಳಲ್ಲಿ ವೇತನದ ಬಗ್ಗೆ ನಿಮ್ಮ ಮನೋಭಿಲಾಷೆಗಳನ್ನು ವ್ಯಕ್ತ ಪಡಿಸಲು ಹಿಂಜರಿಯಬೇಡಿ. ಪುಸ್ತಕ ಮುದ್ರಣಾಲಯದವರಿಗೆ ಅಥವಾ ಪುಸ್ತಕದ ವ್ಯಾಪಾರಿಗಳಿಗೆ ಒಳ್ಳೆಯ ಲಾಭವಾಗುವ ಸಂಭವವಿದೆ.