ಬುಧವಾರ, 1 ಅಕ್ಟೋಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಹಳದಿ ಬಣ್ಣ ಅಶುಭ ತರಲಿದೆ
Published 30 ಸೆಪ್ಟೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿಜೀವನದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ. ಷೇರು ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತಾಗಲಿದೆ. ಅದರಿಂದ ಲಾಭ ಪಡೆಯುವಿರಿ. ವಿನಾಯಕನ ದರ್ಶನದಿಂದ ಅನುಕೂಲವಿರುವುದು.
ವೃಷಭ
ಸ್ನೇಹಿತರ ಹಾಗೂ ಕುಟುಂಬದವರ ಸಲಹೆ ಮೇರೆಗೆ ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳುವಿರಿ. ತಂದೆಯ ಆರೋಗ್ಯ ಉತ್ತಮವಾಗಲಿದೆ. ಸಹೋದರನ ವಿದ್ಯಾಭ್ಯಾಸಕ್ಕೆ ನೆರವಾಗುವಿರಿ. ಆದಾಯದಲ್ಲಿ ಕೊರತೆ ಇಲ್ಲ.
ಮಿಥುನ
ಹಿರಿಯರ ಮಾರ್ಗದರ್ಶನದಂತೆ ನಡೆದು ಕೆಲಸಗಳನ್ನು ಮಾಡುವುದರಿಂದ ಅಡೆತಡೆಗಳು ಇರುವುದಿಲ್ಲ. ಬದಲಾಗಿ ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಂಡಂತೆ ಆಗುವುದು.
ಕರ್ಕಾಟಕ
ಹೂಡಿಕೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಿ. ಕಾರ್ಯ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಸ್ವಂತವಾಗಿ ವ್ಯವಹಾರ ಮಾಡುವವರು ಪ್ರಗತಿ ಸಾಧಿಸುವರು.
ಸಿಂಹ
ಸಣ್ಣ ಪುಟ್ಟ ವಿಚಾರಗಳನ್ನೂ ಉಪೇಕ್ಷಿಸದೆ ಮನೆಯವರೊಂದಿಗೆ ಮಾತನಾಡುವಿರಿ. ದೈವಾನುಕೂಲದಿಂದ ನಡೆಯಬೇಕಾದ ಶುಭ ಕಾರ್ಯ ಗಳನ್ನು ನಿಶ್ಚಯ ಮಾಡಬಹುದು. ದೇವರ ದರ್ಶನ ಆತ್ಮವಿಶ್ವಾಸ ಹೆಚ್ಚಿಸಲಿದೆ.
ಕನ್ಯಾ
ಸ್ವಂತ ಉದ್ಯೋಗದವರು ಅಧಿಕ ಬಂಡವಾಳವನ್ನು ಹಾಕುವುದರಿಂದ ಕೈ ಸುಡುವಂತಾಗುವುದು. ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸ ಬೇಕಾಗುವುದು. ಹೊಸ ಗೆಳೆತನ ಬೆಳೆಸಿಕೊಳ್ಳುವಿರಿ.
ತುಲಾ
ಸರ್ಕಾರಿ ಅಧಿಕಾರಿಗಳಿಗೆ ಕೆಲಸ ಹೆಚ್ಚಾದರೂ ಉನ್ನತ ಸ್ಥಾನ ದೊರೆಯಲಿದೆ. ಆರ್ಥಿಕ ಮುನ್ನಡೆ ಸಾಧ್ಯ. ವೈಯಕ್ತಿಕ ಕೆಲಸಗಳಿಗೆ ಯಾವುದೇ ರೀತಿಯ ಅಡಚಣೆ ಇರುವುದಿಲ್ಲ.
ವೃಶ್ಚಿಕ
ನಾಲ್ಕೈದು ದಿನಗಳ ಕಾಲ ಆಹಾರದಲ್ಲಿ ಪಥ್ಯವಿರಲಿ. ಆರೋಗ್ಯ ಸುಧಾರಿಸಲಿದೆ. ಒತ್ತಡ ತರುವ ಕೆಲಸಗಳಿಂದ ದೂರ ಉಳಿಯುವ ಯೋಚನೆಯು ಸರಿಯಾಗಿರುವುದು. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ.
ಧನು
ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕು ನಿವಾರಿಸಿಕೊಳ್ಳುವುದನ್ನು ಸ್ವಂತವಾಗಿ ಅಭ್ಯಸಿಸಿ. ದೇವಸ್ಥಾನದಲ್ಲಿನ ವಿಶೇಷ ಕಾರ್ಯಕ್ರಮಗಳಿಗೆ ಸಹಾಯ ಅಪೇಕ್ಷಿಸುವವರ ವಿಚಾರದಲ್ಲಿ ಮುಂಜಾಗ್ರತೆ ಇರಲಿ. ಹಳದಿ ಬಣ್ಣ ಅಶುಭ ನೀಡುವುದು.
ಮಕರ
ಸಾರ್ವಜನಿಕ ಸ್ಥಳಗಳಲ್ಲಿ  ಮನೆಯ ವಿಚಾರಗಳನ್ನು ಚರ್ಚಿಸುವಂಥ ಕೆಲಸ ಮಾಡದಿರಿ. ಆಕಸ್ಮಿಕವಾಗಿ ಹೊಸ ವ್ಯಕ್ತಿಯ ಪರಿಚಯವಾಗಲಿದೆ. ಗಣಕಯಂತ್ರದ ತಯಾರಕರಿಗೆ ಈ ದಿನ ಉತ್ತಮ ದಿನವಾಗಲಿದೆ.
ಕುಂಭ
ಉಪಯುಕ್ತ ಮಾಹಿತಿಗಳನ್ನು ಬಂಧು ಮಿತ್ರರೊಂದಿಗೆ ಹಂಚಿಕೊಳ್ಳುವುದರಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗುವಿರಿ. ಅಪರಾತ್ರಿಯ ವೇಳೆ ಸಂಚರಿಸುವಾಗ ನಿಶಾಚರಿಗಳಿಂದ ತೊಂದರೆಗೊಳಗಾಗುವ ಸಾಧ್ಯತೆಗಳಿವೆ.
ಮೀನ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಇಂದೊಬ್ಬರ ದಿನದ ಚಟುವಟಿಕೆಗಳನ್ನು ನೋಡಿ ನಿಮ್ಮ ಕಲ್ಪನೆಯ ವಿರುದ್ಧ ರೀತಿಯಲ್ಲಿರುವುದ ಕಂಡು ಆಶ್ಚರ್ಯ ಹೊಂದುವಿರಿ. ಇಂಧನ ವ್ಯಾಪಾರಸ್ಥರಿಗೆ ಬೇಡಿಕೆ ಹೆಚ್ಚಲಿದೆ.
ADVERTISEMENT
ADVERTISEMENT