ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಏಪ್ರಿಲ್ 19 ಶುಕ್ರವಾರ 2024– ಪಾಪದ ಫಲ ಅನುಭವಕ್ಕೆ ಬರಲಿದೆ
Published 18 ಏಪ್ರಿಲ್ 2024, 19:04 IST
ಪ್ರಜಾವಾಣಿ ವಿಶೇಷ
author
ಮೇಷ
ಬ್ಯಾಂಕ್ ಉದ್ಯೋಗಿಗಳಿಗೆ ಮೇಲಧಿಕಾರಿಗಳೊಂದಿಗೆ ಹೊಸ ಯೋಜನೆ ಕುರಿತು ಗಹನ ಚರ್ಚೆ ನಡೆಯುವ ಸಾಧ್ಯತೆಗಳಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫಲವನ್ನು ಕಾಣುವಿರಿ.
ವೃಷಭ
ಉಂಟಾದ ಹತಾಶೆಯಿಂದಾಗಿ ಮನಸ್ಸು ಅಧ್ಯಾತ್ಮದ ಕಡೆಗೆ ಎಳೆಯುತ್ತದೆ. ಇಂದಿನ ಖರ್ಚು ವೆಚ್ಚಗಳು ಹೆಚ್ಚಿರುವುದರಿಂದ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ. ಕೃಷಿಗಾಗಿ ಪರಿಶ್ರಮ ವಹಿಸುವಿರಿ.
ಮಿಥುನ
ತಂದೆ ತಾಯಿಯ ಜತೆ ಆಸ್ತಿ ಪಾಲುದಾರಿಕೆಯ ವಿಷಯವಾಗಿ ಮಾತನಾಡುವುದಿದ್ದಲ್ಲಿ ಮಾತಿನ ಮೇಲೆ ಹಿಡಿತವಿರಲಿ. ಬರಲು ಬಾಕಿ ಇದ್ದಂಥ ಹಳೇ ಸಾಲಗಳು ತೀರಿಸುವ ಬಗ್ಗೆ ಮಾತು ಕೇಳುವಿರಿ.
ಕರ್ಕಾಟಕ
ಉತ್ತಮ ಪ್ರಯತ್ನದಿಂದಾಗಿ ನೀವು ಬಯಸಿದ ಕಡೆ ಕೆಲಸ ಸಿಗುವ ಸಾಧ್ಯತೆ ಇದೆ. ಹೊಸ ವೃತ್ತಿ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿರುವವರಿಗೆ ಹೊಸ ಜೊತೆಗಾರರೊಬ್ಬರು ಸಿಕ್ಕು ಸಮಾಧಾನವಾಗುತ್ತದೆ.
ಸಿಂಹ
ಸರಕು ಸಾಗಾಣೆದಾರರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬಂದರೂ ಕಾರ್ಯದ ಒತ್ತಡದಿಂದ ವೃತ್ತಿಯಲ್ಲಿ ನಿರಾಶೆಯಾಗುವುದು. ಬೃಹತ್ ಮಟ್ಟದ ವಾಹನವನ್ನು ಖರೀದಿಸುವವರಿಗೆ ಇದು ಸೂಕ್ತ ಸಮಯವವಲ್ಲ.
ಕನ್ಯಾ
ಕುಟುಂಬದವರಿಗೆ ಹೆಚ್ಚಿನ ಸಮಯವನ್ನು ನೀಡುವ ಬಗ್ಗೆ ಯೋಚನೆ ನಡೆಸಿ, ಸಮಯ ಎಂದಾಗ ಅವರ ಸಹಾಯವೇ ಮುಖ್ಯ. ಮಂದಗತಿಯಲ್ಲಿ ಕೆಲಸ ಕಾರ್ಯಗಳು ನಡೆದು ಸಮಯದ ಕೊರತೆ ಎದುರಾಗಲಿದೆ.
ತುಲಾ
ಹಲವು ವಿಚಾರಗಳು ಒಂದೇ ಬಾರಿಗೆ ತಲುಪುವುದರಿಂದ ಒಮ್ಮೆ ತಳಮಳವಾಗಬಹುದು. ನಿಮ್ಮ ಹೂಡಿಕೆಯ ಬಗ್ಗೆ ಎಚ್ಚರಿಕೆಯಿಂದ ತೀರ್ಮಾನವನ್ನು ಕೈಗೊಳ್ಳುವುದು ಉತ್ತಮ. ಬೂದು ಬಣ್ಣ ಶುಭಪ್ರದ.
ವೃಶ್ಚಿಕ
ಮಕ್ಕಳಲ್ಲಿ ವಿದ್ಯೆಯ ಹೊರತಾಗಿ ಅವರಲ್ಲಿರುವ ಇತರ ಆಸಕ್ತಿಕರ ಕ್ಷೇತ್ರಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಆರೋಗ್ಯದ ಬಗೆಗಿನ ಕಾಳಜಿಯು ಅನಾರೋಗ್ಯದಿಂದ ದೂರವಿರಿಸುತ್ತದೆ. ಪಾರ್ವತಿಯನ್ನು ಭಜಿಸಿ.
ಧನು
ವ್ಯವಹಾರದಲ್ಲಿ ಇಂದು ಎಲ್ಲವೂ ಸಕಾರಾತ್ಮಕವಾಗಿ ಇರುವುದರಿಂದ ನೆಮ್ಮದಿಯ ದಿನವಾಗಿರುತ್ತದೆ. ಸಾಗರ ಸಮೀಪದ ಪ್ರವಾಸಗಳನ್ನು ನಿಶ್ಚಯಿಸಿದ್ದರೆ ತಾತ್ಕಾಲಿಕವಾಗಿ ಅದನ್ನು ಮುಂದೂಡಿ.
ಮಕರ
ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ವ್ಯಕ್ತಿಯ ಬಗ್ಗೆ ಸ್ನೇಹಿತರಿಂದ ತಿಳಿಯಬಹುದು. ಹೆಚ್ಚಿನ ಕಾರ್ಯಗಳಲ್ಲಿ ಅನುಕೂಲ ಇರುವುದು. ಜ್ಞಾನವನ್ನು ಸಂಪಾದಿಸಿ .
ಕುಂಭ
ಸಹೋದ್ಯೋಗಿಯೊಬ್ಬರು ವೃತ್ತಿಗೆ ಅನುಕೂಲವಾಗುವಂತಹ ಉತ್ತಮ ಉಪಾಯಗಳನ್ನು ನೀಡಲಿದ್ದು, ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಪರಿಣಿತರಿಗೆ ಶಿಕ್ಷಣ ವೃತ್ತಿ ದೊರೆಯುವ ಸಂಭವವಿದೆ.
ಮೀನ
ಮನೆಗೆ ಬರುವ ಹೊಸ ವ್ಯಕ್ತಿಯೊಂದಿಗೆ ಉತ್ತಮ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವಿರಿ. ಪ್ರಶ್ನಿಸಿಕೊಳ್ಳುವ ಸಮಯ ಎದುರಾಗುವುದು. ಮಾಡಿದ ಪಾಪದ ಫಲ ಅನುಭವಕ್ಕೆ ಬರಲಿದೆ.