ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೂನ್ 30 ಭಾನುವಾರ 2024- ವ್ಯವಹಾರಗಳಿಂದ ಹೆಚ್ಚಿನ ಲಾಭ
Published 29 ಜೂನ್ 2024, 18:34 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೈಸರ್ಗಿಕ ಶಕ್ತಿ ಸಂಪನ್ಮೂಲಗಳನ್ನು ಬಳಸುವ ಯೋಚನೆ ಮಾಡುವಿರಿ. ಹೋಟೆಲ್‌ ವ್ಯಾಪಾರ ಮಾಡುವವರಿಗೆ ನಷ್ಟ ಸಂಭವಿಸಬಹುದು. ನಿಮ್ಮ ಸ್ವಕಾರ್ಯ ಹಾಗೂ ಸ್ವಪ್ರತಿಭೆಯಿಂದಲೆ ಪ್ರಭಾವಿತರಾಗುವಂತಾಗಲಿದೆ.
ವೃಷಭ
ಹಿರಿಯರ ಆಸ್ಪತ್ರೆ, ಔಷಧಿಗಳಿಗಾಗಿ ಖರ್ಚು ಮಾಡಬೇಕಾದರೂ ಆದಾಯಕ್ಕೇನೂ ಕೊರತೆ ಇರದು. ಖಿನ್ನತೆ ಹಾಗು ಋಣಾತ್ಮಕ ಚಿಂತನೆಗಳು ನಿಮ್ಮನ್ನು ಕಾಡಲಿದೆ. ದೇವರ ಧ್ಯಾನದಿಂದ ಅದನ್ನು ಹೋಗಲಾಡಿಸಿಕೊಳ್ಳಿ.
ಮಿಥುನ
ಪರೋಪಕಾರ ಸ್ವಭಾವದಿಂದಾಗಿ ಸ್ಥಾನ-ಮಾನಗಳು ಲಭಿಸುವುವು. ಸಾರ್ವಜನಿಕರ ಸೇವೆ ಮಾಡುವವರಿಗೆ ಕೆಲವು ಅನುಯಾಯಿಗಳಿಂದ ಸಹಕಾರ, ಮತ್ತೆ ಕೆಲವರಿಂದ ಅಸಹಕಾರ ಎದುರಾಗಲಿದೆ.
ಕರ್ಕಾಟಕ
ವಿಚಾರಗಳನ್ನು ವಾಸ್ತವಿಕವಾಗಿ ಸ್ವೀಕರಿಸುವಂತಹ ಮನೋಭಾವನೆ ಬೆಳೆಸಿಕೊಳ್ಳಿ. ಹಪ್ಪಳ, ಸಂಡಿಗೆಯಂತಹ ವಸ್ತುಗಳ ವ್ಯಾಪಾರಿಗಳಿಗೆ ಹೆಚ್ಚಿನ ಗ್ರಾಹಕರ ಸಂಪಾದನೆ ಆಗುತ್ತದೆ.
ಸಿಂಹ
ಧಾರ್ಮಿಕ ಕಾರ್ಯಗಳನ್ನು ಮಾಡಿದ ಫಲವಾಗಿ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು. ಹಲ್ಲುನೋವು ಬಾಧಿಸಲಿದೆ.
ಕನ್ಯಾ
ಸ್ವಯಂಕೃತ ಅಪರಾಧದ ಬಗ್ಗೆ ಎಚ್ಚರವಿರಲಿ. ಸರಿ ತಪ್ಪುಗಳನ್ನು ನಿರ್ಧರಿಸುವುದು ಕಷ್ಟಕರ ಎನಿಸುವುದು. ಮಧ್ಯಸ್ಥಿಕೆಯ ಕೆಲಸವನ್ನು ಮಾಡಲು ಹೋಗಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ಮೇಲೆ ನಿಗಾ ಇರಲಿ.
ತುಲಾ
ಮುಕ್ತವಾಗಿ ಮಾತನಾಡದ ನಿಮ್ಮ ಸ್ವಭಾವವು, ಸಭೆಯಲ್ಲಿ ನಿಮ್ಮನ್ನೇ ಉದ್ದೇಶಿಸಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದ ಸಂದರ್ಭ ತರಲಿದೆ. ಹೊಸ ಕೆಲಸ ಶುರುಮಾಡುವಾಗ ಸಾಧ್ಯತೆ ಬಾಧ್ಯತೆಗಳ ಬಗ್ಗೆ ಯೋಚಿಸಿ.
ವೃಶ್ಚಿಕ
ಚಿನ್ನ-ಬೆಳ್ಳಿ ವ್ಯಾಪಾರಿಗಳಿಗೆ ಕಣ್ತಪ್ಪಿನಿಂದ ದ್ರವ್ಯ ನಷ್ಟವಾಗುವ ಸಂಭವವಿದೆ. ಕಛೇರಿಗೆ ರಜೆ ಇರುವುದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ನವವಿವಾಹಿತೆಗೆ ಮುಖ್ಯ ವ್ಯಕ್ತಿಗಳ ಮರೆವು ತುಂಬಾ ಕಾಡ‌ಲಿದೆ.
ಧನು
ಮಳಿಗೆಯನ್ನು ಖರೀದಿಸುವಾಗ ವ್ಯಾವಹಾರಿಕವಾಗಿ ಜಾಗ ಎಷ್ಟು ಸೂಕ್ತ ಎನ್ನುವುದರ ಮೇಲೆ ಗಮನವಿಡಿ. ಭೂ ಸಂಬಂಧಿ ವ್ಯವಹಾರಗಳಿಂದ ಹೆಚ್ಚಿನ ಲಾಭ. ಆದರೆ ದಾಖಲೆಗಳಲ್ಲಿ ಮೋಸ ಹೋಗದಿರಿ.
ಮಕರ
ನಿಮ್ಮ ಸಿಟ್ಟು ಅಥವಾ ಆತುರದ ನಿರ್ಧಾರಗಳು ಏಕಾಂಗಿತನಕ್ಕೆ ಕಾರಣವಾಗುವುದು. ಪರರ ವಿಚಾರಗಳನ್ನು ಮಾತನಾಡಿ ವೈರತ್ವ ತಂದುಕೊಳ್ಳಬೇಡಿ. ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವುದು.
ಕುಂಭ
ಸಹೋದರರಲ್ಲಿ ಸಂಬಂಧಗಳು ಗಟ್ಟಿಯಾಗುವುದು. ಕೆಲಸದ ಒತ್ತಡದಿಂದ ದೂರಾಗಿ ಮಿತ್ರರೊಡನೆ ಉಲ್ಲಾಸದಿಂದ ಕಾಲ ಕಳೆಯುವಿರಿ. ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ.
ಮೀನ
ಇಷ್ಟವಸ್ತುವಿನ ಪ್ರಾಪ್ತಿಗಾಗಿ ಅವಿರತವಾಗಿ ಪ್ರಯತ್ನಿಸುವಿರಿ. ಸಂಜೆ ಆರಾಮವಾಗಿ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವಿರಿ. ಸಣ್ಣ ಮಕ್ಕಳೊಂದಿಗಿನ ಒಡನಾಟ ಮನಸ್ಸನ್ನು ಮುದಗೊಳಿಸುತ್ತದೆ.