ಶುಕ್ರವಾರ, 11 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವ್ಯಾಪಾರಿಗಳು ಪತ್ರಿಕೆಯವರ ಸಹಕಾರದಿಂದ ಪ್ರಚಾರ ತೆಗೆದುಕೊಳ್ಳಬಹುದು
Published 28 ಅಕ್ಟೋಬರ್ 2024, 23:53 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ವಾರ್ಥದ ಕೆಲವು ನಿರ್ಧಾರದ ಫಲವಾಗಿ ಬಂಧುಗಳು ಅಥವಾ ಆತ್ಮೀಯರು ದೂರವಾಗುವ ಲಕ್ಷಣಗಳಿವೆ. ವಂಶಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ ಏಳಿಗೆ ಕಾಣುವಿರಿ.
ವೃಷಭ
ಬಟ್ಟೆ ವ್ಯಾಪಾರಿಗಳು ಪತ್ರಿಕೆಯವರ ಸಹಕಾರದಿಂದ ಹೆಚ್ಚಿನ ಪ್ರಚಾರ ತೆಗೆದುಕೊಳ್ಳಬಹುದು. ನೆಮ್ಮದಿ ಪಡೆಯಲು ಜಗವನ್ನು ಬೆಳಗುವ ಸೂರ್ಯ ನಾರಾಯಣನನ್ನು ನಮಸ್ಕರಿಸಿ, ಪ್ರಾರ್ಥಿಸಿ. ಆರೋಗ್ಯದ ಬಗ್ಗೆ ಕಾಳಜಿ ತೋರಿ.
ಮಿಥುನ
ಉಳಿತಾಯ ಯೋಜನೆಯಲ್ಲಿ ಆಸಕ್ತಿ ಇದ್ದರೂ ಖರ್ಚು ಅಧಿಕವಾಗಿರುತ್ತದೆ. ಆಫೀಸಿನಲ್ಲಿಂದು ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುವುದು ಉತ್ತಮ. ಕಾರ್ಯ ಒಪ್ಪಂದದ ಬಗ್ಗೆ ದೃಢ ನಿರ್ಧಾರ ಮಾಡಿರಿ.
ಕರ್ಕಾಟಕ
ಶ್ರಮದ ಜೀವನದಿಂದ ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗಲಿವೆ. ಮಾತಿನಿಂದ ಕಾರ್ಯ ಸಾಧಿಸುವ ಗುಣದಿಂದ ಲಾಭ ಕಾಣಲಿದ್ದೀರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಪ್ರಾಪ್ತಿ.
ಸಿಂಹ
ವ್ಯವಹಾರದ ಪ್ರಯುಕ್ತ ಇರುವ ಪ್ರವಾಸವು ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನೂ ಅನಿರೀಕ್ಷಿತ ಲಾಭವನ್ನೂ ತಂದು ಕೊಡುವುದು. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ ಇರುವುದು.
ಕನ್ಯಾ
ವ್ಯಾಪಾರದಲ್ಲಿ ಸ್ವಂತ ತೀರ್ಮಾನದಿಂದ ಮುಂದುವರಿದರೆ ಧನಾದಾಯ ಹೆಚ್ಚಲಿದೆ. ಸ್ಥಿರ ಆಸ್ತಿ ಖರೀದಿಸುವ ಬಗ್ಗೆ ಯೋಚನೆ ಮಾಡಿ. ಸುಬ್ರಹ್ಮಣ್ಯನನ್ನು ಆರಾಧಿಸುವುದರಿಂದ ಆರೋಗ್ಯಭಾಗ್ಯವು ಉಂಟಾಗುತ್ತದೆ.
ತುಲಾ
ದೂರ ದೃಷ್ಟಿ ಇಟ್ಟುಕೊಂಡು ಈಗಿನ ಪ್ರಪಂಚದ ಓಟಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತರಾಗುವುದು ಉತ್ತಮ. ಮನೆಯಲ್ಲಿ ಶುಭ ಸಮಾರಂಭವು ಸುಸೂತ್ರವಾಗಿ ನಡೆದುದಕ್ಕೆ ಸಮಾಧಾನಗೊಳ್ಳುವಿರಿ. .
ವೃಶ್ಚಿಕ
ಈಗಾಗಲೇ ಒಪ್ಪಿಕೊಂಡಿರುವ ಒಪ್ಪಂದವೊಂದು ಮುರಿದು ಬೀಳದಂತೆ ಎಚ್ಚರವಹಿಸುವುದರಿಂದ ಗೌರವವು ಉಳಿಯುವುದು. ಆಡಿದ ಮಾತಿನಿಂದ ಶುಭ ಮತ್ತು ಅಶುಭದ ಮಿಶ್ರಣ ಫಲ ಅನುಭವಿಸುವಂತಾಗಲಿದೆ.
ಧನು
ಸ್ಟುಡಿಯೊದವರಿಗೆ ಅಧಿಕ ಕಾರ್ಯಕ್ರಮದಿಂದ ಲಾಭ ಇರಲಿದೆ. ಉತ್ಸಾಹವನ್ನು ಹೆಚ್ಚಿಸಿಕೊಳ್ಳುವ ಸಮಯವಾಗಿದೆ. ಸ್ವ ಉದ್ಯೋಗಿಗಳಿಗೆ ಉದ್ಯೋಗ ನಿಮಿತ್ತವಾಗಿ ಪ್ರಯಾಣ ಸಂಭವ ಇರುವುದು.
ಮಕರ
ವಾಹನದ ಅನಿವಾರ್ಯತೆ ಹೆಚ್ಚಿರುವುದರಿಂದ ನೂತನ ವಾಹನ ಖರೀದಿಸುವ ಬಗ್ಗೆ ಗಮನಹರಿಸಿ. ಅಧಿಕ ಹಣದ ಹರಿವು ನಿಧಾನವಾಗಿ ಅನುಭವಕ್ಕೆ ಬರಲಿದೆ. ಚಿತ್ರಕಲೆ ಮತ್ತು ಸಾಹಿತ್ಯಕಾರರಿಗೆ ಶುಭವಾರ್ತೆ ಬರಲಿದೆ.
ಕುಂಭ
ದಿನಸಿ ವರ್ತಕರಿಗೆ, ಹೋಟೆಲ್ ಉದ್ಯಮದವರಿಗೆ ಜೋರಿನ ವ್ಯಾಪಾರ ಇರಲಿದೆ. ಗುರುಗಳ ಮಾರ್ಗದರ್ಶನದ ಮಹತ್ವ ತಿಳಿಯುವುದು. ಸಾಂಸಾರಿಕ ಸಮಸ್ಯೆಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮೀನ
ಹೊಸ ಹೂಡಿಕೆ , ಒಪ್ಪಂದಗಳು ನಿಶ್ಚಿತ ಹಂತ ತಲುಪಿದ್ದಕ್ಕೆ ಸಂತೃಪ್ತಿಯ ಭಾವವಿರುವುದು. ಆಭರಣ ಮಾರಾಟಗಾರರು, ವಕೀಲ ವೃತ್ತಿ ಯವರಿಗೆ ಹೆಚ್ಚಿನ ಕೆಲಸವಿರುವುದು. ನಿರೀಕ್ಷಿತ ಕಡೆಗಳಿಂದ ಧನ ಒದಗಿ ಬರುವುದು.
ADVERTISEMENT
ADVERTISEMENT