ವಾರ ಭವಿಷ್ಯ | ಸೆ.28 ರಿಂದ ಅ.04ರವರೆಗೆ; ಈ ರಾಶಿಯವರಿಗೆ ಆದಾಯವು ಕಡಿಮೆ ಇರುತ್ತದೆ
Published 27 ಸೆಪ್ಟೆಂಬರ್ 2025, 21:46 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಹಿರಿಯರೊಂದಿಗೆ ಶಾಂತತೆಯಿಂದ ವ್ಯವಹರಿಸುವುದು ಉತ್ತಮ. ಆದಾಯವು ಕಡಿಮೆ ಇರುತ್ತದೆ. ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ನಿಮ್ಮ ಪ್ರತಿಭೆಗೆ ತಕ್ಕ ಅವಕಾಶಗಳು ಒದಗಿಬರುತ್ತವೆ. ಕೃಷಿಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ನವೀನ ರೀತಿಯ ಕೃಷಿಯನ್ನು ಮಾಡುವವರೆಗೆ ಸಾಕಷ್ಟು ಸಲಹೆ ಮತ್ತು ಮಾರ್ಗದರ್ಶನ ದೊರೆತು ಕೆಲಸ ಸುಗಮವಾಗುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ಬೇರೆಯವರ ಕಷ್ಟಕ್ಕೆ ನೆರವಾಗುವುದು ಒಳ್ಳೆಯದು.
ವೃಷಭ
ಲಲಿತ ಕಲೆಯತ್ತ ಹೆಚ್ಚು ಗಮನಹರಿಸುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ವಿದೇಶಿ ವ್ಯವಹಾರಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಮುಂದಾಲೋಚನೆಯಿಂದ ಹೂಡಿದ ಹಣದಲ್ಲಿ ನಿರೀಕ್ಷಿತ ಲಾಭವನ್ನು ಕಾಣಬಹುದು. ಸ್ವಂತ ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಉತ್ತಮ ಬೆಳವಣಿಗೆ ಇರುತ್ತದೆ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಬಿಡುವಿಲ್ಲದ ಕೆಲಸಗಳು ಬರಬಹುದು. ವಾತ ಸಂಬಂಧಿ ಕಾಯಿಲೆ ಇರುವವರು ಸ್ವಲ್ಪಮಟ್ಟಿನ ಎಚ್ಚರವಹಿಸುವುದು ಒಳ್ಳೆಯದು. ರಾಜಕಾರಣಿಗಳಿಗೆ ಶುಭ ಸಮಾಚಾರಗಳು ಕೇಳಿ ಬರುತ್ತವೆ.
ಮಿಥುನ
ಅತ್ಯಂತ ಗಂಭೀರ ನಡವಳಿಕೆಯನ್ನು ಈಗ ಕಾಣಬಹುದು. ಆದಾಯವು ಕಡಿಮೆ ಇರುತ್ತದೆ. ಬಂಧುಗಳ ನಡುವೆ ಕೆಲವು ಜಿಜ್ಞಾಸೆಗಳು ಮೂಡಬಹುದು. ಕೃಷಿ ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಇರುತ್ತದೆ. ಕೃಷಿ ಭೂಮಿಯನ್ನು ಕೊಳ್ಳುವ ಎಲ್ಲಾ ಅವಕಾಶಗಳಿವೆ. ಲಲಿತ ಕಲಾವಿದರುಗಳಿಗೆ ಹೆಚ್ಚಿನ ಕೆಲಸ ಒದಗಿಬರುತ್ತದೆ. ನೃತ್ಯಗಾರರಿಗೆ ಕಲೆಯ ಸೂಕ್ಷ್ಮತೆಯನ್ನು ತಿಳಿಸುವ ಗುರು ದೊರೆಯುತ್ತಾರೆ. ವೃತ್ತಿ ಬದಲಾವಣೆಯನ್ನು ಮಾಡಬೇಕೆನ್ನುವವರು ಈಗ ಮಾಡಬಹುದು. ಸರ್ಕಾರಿ ಕಂಪನಿಗಳಿಗೆ ಹೆಚ್ಚಿನ ಪೂರೈಕೆಗೆ ಆದೇಶಗಳು ದೊರೆಯುತ್ತವೆ.
ಕರ್ಕಾಟಕ
ತಾಯಿಯ ಕಡೆಗೆ ಹೆಚ್ಚಿನ ಗಮನ ಹರಿಯುತ್ತದೆ. ಆರ್ಥಿಕ ಸಂಕಷ್ಟಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತವೆ. ಬಂಧುಗಳಿಂದ ಸಹಕಾರವನ್ನು ನಿರೀಕ್ಷೆ ಮಾಡಬಹುದು. ಭೂಮಿಯ ವ್ಯಾಪಾರವನ್ನು ಮಾಡುವವರಿಗೆ ಸಾಮಾನ್ಯ ಆದಾಯವಿರುತ್ತದೆ. ಉದ್ಯೋಗದಲ್ಲಿರುವವರಿಗೆ ಅಧಿಕಾರ ವರ್ಗದವರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಕೃಷಿಕರು ತಾವು ಬೆಳೆಯುವ ಬೆಳೆಯನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ವ್ಯವಹಾರ ವಿಸ್ತರಣೆಗೆ ಅನುಕೂಲಕರವಾದ ವಾತಾವರಣ ದೊರೆಯುವ ಸಾಧ್ಯತೆ ಇದೆ. ಸರ್ಕಾರಿ ದಾಖಲೆಗಳನ್ನು ಪಡೆಯಲು ಹೆಚ್ಚು ಹಣ ಖರ್ಚಾಗುವ ಸಾಧ್ಯತೆಗಳಿವೆ.
ಸಿಂಹ
ನಿಮ್ಮ ಗೌರವ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಒಡಹುಟ್ಟಿದವರ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಬಹುದು. ಹೈನುಗಾರಿಕೆ ಮಾಡುವವರಿಗೆ ಉತ್ತಮ ಆದಾಯವಿರುತ್ತದೆ. ಮಕ್ಕಳಿಂದ ಸಂಸಾರದಲ್ಲಿ ಸಂತೋಷವಿರುತ್ತದೆ. ವಾತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಗೆ ವಿದೇಶಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ನೌಕರಸ್ಥರಿಗೆ ಉದ್ಯೋಗದ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ.
ಕನ್ಯಾ
ವ್ಯಕ್ತಿಗತ ಗೌರವಕ್ಕೆ ಹೆಚ್ಚು ಗಮನ ಕೊಡುವಿರಿ. ಕೃಷಿ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಇದ್ದು ಹೆಚ್ಚಿನ ಲಾಭಾಂಶವನ್ನು ಕಾಣಬಹುದು. ಇತರೆ ಆದಾಯಗಳು ಕಡಿಮೆ ಇರುತ್ತವೆ. ನ್ಯಾಯಾಲಯದ ತೀರ್ಪುಗಳು ನಿಮ್ಮ ಪರವಾಗಿ ಬರುವ ಸಾಧ್ಯತೆಗಳಿವೆ. ಉದ್ಯೋಗ ಸ್ಥಳದಲ್ಲಿ ಅನುಕೂಲಕರ ವಾತಾವರಣವಿದ್ದರೂ ಒಳಗೊಳಗೆ ನಿಮಗೆ ಅತೃಪ್ತಿ ಇರುತ್ತದೆ. ಕಾಡುತ್ತಿದ್ದ ಒಂದೆರಡು ಸಮಸ್ಯೆಗಳು ಪರಿಹಾರವಾಗಿ ಮನಸ್ಸಿಗೆ ಸಂತೋಷವಾಗುವುದು. ಗಣಿಗಾರಿಕೆಯನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ.
ತುಲಾ
ಕೃಷಿಕರ ಸ್ಥಿತಿಯಲ್ಲಿ ಪ್ರಗತಿಯನ್ನು ಕಾಣಬಹುದು. ಆದಾಯವು ಚೇತರಿಕೆಯ ಹಾದಿಯನ್ನು ಕಾಣುತ್ತದೆ. ಹಿರಿಯರಿಂದ ನಿಮಗೆ ಹೆಚ್ಚು ಅನುಕೂಲವಾಗುತ್ತದೆ. ಪ್ರಿಯ ವ್ಯಕ್ತಿಗಳ ಆಗಮನದಿಂದ ಮನಸ್ಸಿಗೆ ಉಲ್ಲಾಸವಾಗುವುದು. ಕೆಲವು ಶತ್ರುಗಳು ಈಗ ತಾವಾಗಿಯೇ ಬಯಸಿ ಮಿತ್ರರಾಗುವರು. ಬಂಧುಗಳ ಆಸ್ತಿಯನ್ನು ಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಯ ಅವಕಾಶ ಒದಗಿ ಬರುತ್ತದೆ. ಮೂಳೆಯ ತೊಂದರೆ ಇರುವವರು ಎಚ್ಚರವಹಿಸುವುದು ಒಳ್ಳೆಯದು. ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ಇರಲಿ.
ವೃಶ್ಚಿಕ
ವಾರದ ಆರಂಭ ಬಹಳ ಆನಂದದಾಯಕವಾಗಿರುತ್ತದೆ. ಆದಾಯವು ಕಡಿಮೆ ಇದ್ದರೂ ತೊಂದರೆ ಇರುವುದಿಲ್ಲ. ನಿಮ್ಮ ಕೆಲಸಗಳಿಗೆ ಬಂಧುಗಳ ವಿರೋಧವಿರುತ್ತದೆ. ವಿದೇಶದಲ್ಲಿರುವವರಿಗೆ ಆಸ್ತಿ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. ಆಸ್ತಿ ವಿವಾದಗಳಿಂದ ಮುಕ್ತಿ ದೊರೆಯಬಹುದು. ಹಿರಿಯರ ಆರೋಗ್ಯದಲ್ಲಿ ಏರುಪೇರಾದರೂ ಭಯವಿಲ್ಲ. ಸಹವರ್ತಿಗಳಿಗೆ ಉತ್ಸಾಹ ತುಂಬಿ ಕೆಲಸ ಮಾಡಿಸುವಿರಿ. ವಾಹನ ಮಾರಾಟಗಾರರ ಆದಾಯ ಹೆಚ್ಚುತ್ತದೆ. ವೃತ್ತಿಯಲ್ಲಿ ಸ್ವಲ್ಪ ವೇತನ ಹೆಚ್ಚಳವನ್ನು ಕಾಣಬಹುದು.
ಧನು
ನಿಮ್ಮ ಪಾಡಿಗೆ ನೀವು ಇರುವಿರಿ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಸಾಂಪ್ರದಾಯಿಕ ಕೃಷಿಯನ್ನು ಮಾಡುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಮಂದಗತಿಯಲ್ಲಿ ಇದ್ದ ನಿಮ್ಮ ಕೆಲಸ ಕಾರ್ಯಗಳು ವೇಗ ಪಡೆಯುತ್ತವೆ. ಹಿರಿಯರು ತಮ್ಮ ಸ್ವಯಂಕೃತ ಅಪರಾಧಗಳಿಂದ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆಗಳಿವೆ. ಕೃಷಿಯಿಂದ ಆದಾಯ ಹೆಚ್ಚಾಗುತ್ತದೆ. ಅಧ್ಯಯನದಲ್ಲಿ ಆಸಕ್ತಿ ಮೂಡಿ ಹೊಸ ವಿಚಾರಗಳನ್ನು ಕಲಿಯಲು ಯತ್ನಿಸುವಿರಿ.
ಮಕರ
ಉದ್ಯೋಗದಲ್ಲಿ ಬಹಳ ಶಿಸ್ತನ್ನು ಮೂಡಿಸಿಕೊಳ್ಳುವಿರಿ. ಆದಾಯವು ಕಡಿಮೆ ಇರುತ್ತದೆ. ಆಮದು ಮತ್ತು ರಫ್ತನ್ನು ಮಾಡುವವರ ಆದಾಯ ಹೆಚ್ಚುತ್ತದೆ. ಶತ್ರುಗಳನ್ನು ಹುಡುಕಿ ನಿಗ್ರಹ ಮಾಡುವ ಯೋಗ ನಿಮಗಿದೆ. ಲೇವಾದೇವಿ ವ್ಯವಹಾರಗಳು ಬೇಡ. ಮಹತ್ತರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೂಲಂಕಶವಾಗಿ ಅವಲೋಕಿಸಿ. ದೂರದಲ್ಲಿರುವ ಮಕ್ಕಳ ಓದಿಗಾಗಿ ಹಣ ಕಳಿಸಬೇಕಾಗಬಹುದು.
ಕುಂಭ
ಯುವಕರಲ್ಲಿ ಉದ್ಧಟತನ ಹೆಚ್ಚಾಗುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಮಂದಗತಿಯನ್ನು ಕಾಣಬಹುದು. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಭಾಷಾಂತರ ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆತು ಈಗ ಸಂಪಾದನೆ ಹೆಚ್ಚುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿರುತ್ತದೆ. ಖರ್ಚು–ವೆಚ್ಚಗಳ ಮೇಲೆ ಹಿಡಿತವನ್ನು ಹೊಂದುವುದು ಬಹಳ ಒಳ್ಳೆಯದು.
ಮೀನ
ವಾರದ ಆರಂಭದಲ್ಲಿ ಆಲಸಿತನ ಇರುತ್ತದೆ. ಆದಾಯವು ಮಂದಗತಿಯಲ್ಲಿರುತ್ತದೆ. ಬಂಧುಗಳ ನಡುವಿನ ಹಣಕಾಸಿನ ವ್ಯವಹಾರ ನಷ್ಟಕ್ಕೆ ಕಾರಣವಾಗುತ್ತದೆ. ಸ್ಥಿರಾಸ್ತಿಯನ್ನು ಕೊಳ್ಳಬಹುದು. ಮಕ್ಕಳ ಅಭಿವೃದ್ಧಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಸ್ವಂತ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ. ಸಂಗಾತಿಯ ಸಹಾಯದಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಈಗ ವೃತ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪುನಃ ವೃತ್ತಿಗೆ ಹೋಗುವಿರಿ. ಸಂಗಾತಿಯಿಂದ ನಿಮ್ಮ ಕಾರ್ಯಗಳಿಗೆ ಹೆಚ್ಚು ಪ್ರೋತ್ಸಾಹವನ್ನು ನಿರೀಕ್ಷಿಸಬಹುದು.