ಅಮೆರಿಕಕ್ಕೆ ಯಾವ ಬಗೆಯ ವಿನಾಯಿತಿ?
ಬೇರೆ ದೇಶಗಳೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳಲ್ಲಿ ಯಾವ ಬಗೆಯಲ್ಲಿ ವಿನಾಯಿತಿಗಳನ್ನು ನೀಡಲಾಗಿದೆಯೋ ಅದೇ ಬಗೆಯಲ್ಲಿ ಅಮೆರಿಕದ ಉತ್ಪನ್ನಗಳಿಗೂ ವಿವಿಧ ವಲಯಗಳಲ್ಲಿ ಸುಂಕ ವಿನಾಯಿತಿ ನೀಡಲು ಭಾರತ ಒಪ್ಪಿದೆ ಎಂದು ಗೊತ್ತಾಗಿದೆ. ಭಾರತವು ತನ್ನ ಹೈನುಗಾರಿಕೆ, ಅಕ್ಕಿ, ಗೋಧಿ, ಮಾಂಸ, ಕೋಳಿ ಮಾಂಸ ಹಾಗೂ ಮೊಟ್ಟೆ, ಧಾನ್ಯಗಳು, ಕುಲಾಂತರಿ ಆಹಾರ ಉತ್ಪನ್ನಗಳು, ಜೋಳ ವಲಯವನ್ನು ವ್ಯಾಪಾರ ಒಪ್ಪಂದದ ವ್ಯಾಪ್ತಿಯಿಂದ ಯಾವಾಗಲೂ ಹೊರಕ್ಕೆ ಇರಿಸಿದೆ ಎನ್ನಲಾಗಿದೆ.