ನವದೆಹಲಿ: ಆಹಾರ ಡೆಲಿವರಿ ಸೇರಿ ಹಲವು ಉದ್ಯಮಗಳನ್ನು ನಡೆಸುತ್ತಿರುವ ಜೊಮ್ಯಾಟೊ ತನ್ನ ಹೆಸರು ಬದಲಿಸಲು ಮುಂದಾಗಿದೆ. ಕಂಪನಿಯ ಹೆಸರನ್ನು ಎಟರ್ನಲ್ (Eternal) ಎಂದು ಬದಲಾಯಿಸಲು ಕಂಪನಿಯ ಬೋರ್ಡ್ ಗುರುವಾರ ಅನುಮತಿ ನೀಡಿದೆ.
.ಉದ್ಯಮದ ಯಶಸ್ಸು ಉದ್ದೇಶದಲ್ಲಿ ಅಡಗಿದೆ: ಜೊಮ್ಯಾಟೊ ಸ್ಥಾಪಕ ದೀಪಿಂದರ್ ಗೋಯಲ್.
ಈ ಬದಲಾವಣೆಗೆ ಕಂಪನಿಯ ಷೇರುದಾರರ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಸೇರಿ ಇನ್ನಿತರ ಅಗತ್ಯ ಶಾಸನಬದ್ಧ ಸಂಸ್ಥೆಗಳ ಒಪ್ಪಿಗೆ ಬೇಕು ಎಂದು ಷೇರು ಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಕಂಪನಿ ಹೇಳಿದೆ.

ಅದಾಗ್ಯೂ ಕಂಪನಿಯ ಫುಡ್ ಡೆಲಿವರಿ ಉದ್ಯಮ ಜೊಮ್ಯಾಟೊದ ಹೆಸರು, ಆ್ಯಪ್ ಹಾಗೆ ಇರಲಿದೆ.

‘ಈ ಬದಲಾವಣೆಗೆ ನಮ್ಮ ಬೋರ್ಡ್ ಇಂದು ಒಪ್ಪಿಗೆ ನೀಡಿದೆ. ಇದನ್ನು ಬೆಂಬಲಿಸಬೇಕು ಎಂದು ನಾನು ಷೇರುದಾರರಿಗೆ ಮನವಿ ಮಾಡುತ್ತೇನೆ. ಬದಲಾವಣೆಗೆ ಒಪ್ಪಿಗೆ ಸಿಕ್ಕರೆ ನಮ್ಮ ವೆವ್ಸೈಟ್ zomato.com ನಿಂದ eternal.comಗೆ ಬದಲಾಗಲಿದೆ. ನಮ್ಮ ಸ್ಟಾಕ್ ಟಿಕರ್ ಅನ್ನು ಕೂಡ ಬದಲಾಯಿಸಲಿದ್ದೇವೆ’ ಎಂದು ಜೊಮ್ಯಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಷೇರುದಾರರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
.‘ಆಹಾರ ಧರ್ಮ’ ಮೆರೆದ ಜೊಮ್ಯಾಟೊ ಕಂಪನಿ.
ಎಟರ್ನಲ್ ಅಡಿಯಲ್ಲಿ ಜೊಮ್ಯಾಟೊ, ಬ್ಲಿಂಕಿಂಟ್, ಡಿಸ್ಟ್ರಿಕ್ಟ್ ಹಾಗೂ ಹೈಪರ್ಪ್ಯೂರ್ ಎನ್ನುವ ನಾಲ್ಕು ಉದ್ಯಮಗಳು ಇರಲಿವೆ ಎಂದು ಅವರು ತಿಳಿಸಿದ್ದಾರೆ.

‘ನಾವು ಬ್ಲಿಂಕಿಟ್ ಅನ್ನು ಸ್ವಾಧೀನಪಡಿಸಿಕೊಂಡಾಗಲೇ, ಬ್ರ್ಯಾಂಡ್ ಹಾಗೂ ಕಂಪನಿಯ ಹೆಸರಿನ ನಡುವೆ ವ್ಯತ್ಯಾಸ ಗುರುತಿಸಲು ಎಟರ್ನಲ್ ಎನ್ನುವ ಹೆಸರು ಬಳಸಲು ಆರಂಭಿಸಿದೆವು. ಹೀಗಾಗಿ ಕಂಪನಿಯ ಹೆಸರನ್ನು ಎಟರ್ನಲ್ ಎಂದು ಬದಲಾಯಿಸಲು ತೀರ್ಮಾನಿಸಿದೆವು. ಈಗ ನಾವು ಕಂಪನಿಯ ಹೆಸರನ್ನು Zomato Ltd ನಿಂದ (ಆ್ಯಪ್/ ಬ್ರ್ಯಾಂಡ್ ಹೆಸರು ಬದಲಾವಣೆ ಇಲ್ಲ) Eternal Ltd ಗೆ ಬದಲಾಯಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
.ಜೊಮ್ಯಾಟೊ ಆ್ಯಪ್ ಅನ್ಇನ್ಸ್ಟಾಲ್ ಮಾಡಿ ಟ್ವೀಟಿಗರ ಪ್ರತಿಭಟನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.