ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಮ್ಯಾಟೊ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ ಟ್ವೀಟಿಗರ ಪ್ರತಿಭಟನೆ

Last Updated 1 ಆಗಸ್ಟ್ 2019, 13:45 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂವಲ್ಲದ ಡೆಲಿವರಿ ಬಾಯ್‌ನಿಂದ ಆಹಾರ ಸ್ವೀಕರಿಸುವುದಿಲ್ಲ ಎಂದು ಹೇಳಿ ಜೊಮ್ಯಾಟೊ ಗ್ರಾಹಕರೊಬ್ಬರು ಫುಡ್ ಆರ್ಡರ್ ರದ್ದು ಮಾಡಿದ್ದರು. ಈ ವಿಷಯವನ್ನು ಅವರು ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜೊಮ್ಯಾಟೊ ಆಹಾರಕ್ಕೆ ಧರ್ಮವಿಲ್ಲ, ಆಹಾರವೇ ಧರ್ಮ ಎಂದಿತ್ತು.ಜೊಮ್ಯಾಟೊದ ಈ ಟ್ವೀಟ್‌ಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿತ್ತು.

ಇದೀಗ ಗ್ರಾಹಕರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕು ಇದೆ ಎಂದು ಹೇಳಿ ಫುಡ್ ಆರ್ಡರ್ ರದ್ದು ಮಾಡಿದ್ದ ಜೊಮ್ಯಾಟೊ ಗ್ರಾಹಕರಿಗೆ ಬೆಂಬಲ ಸೂಚಿಸಿ ಟ್ವೀಟಿಗರು ಜೊಮ್ಯಾಟೊ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ ಪ್ರತಿಭಟಿಸಿದ್ದಾರೆ. ಗುರುವಾರ ಟ್ವಿಟರ್‌ನಲ್ಲಿ #ZomatoUninstalled,#boycottzomatoಟಾಪ್ ಟ್ರೆಂಡ್ ಆಗಿದೆ.

ಅದೇ ವೇಳೆ ಹಿಂದೂ ಅಲ್ಲದ ಡೆಲಿವರಿ ಬಾಯ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜಬಲ್ಪುರ್‌ನ ಟ್ವೀಟಿಗರ ವಿರುದ್ಧನೊಟೀಸ್ ಕಳುಹಿಸಲು ಮಧ್ಯಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜಬಲ್ಪುರ್ ಎಸ್‌ಪಿ ಅಮಿತ್ ಸಿಂಗ್, ನಾವು ಟ್ವೀಟ್ ಮಾಡಿದ ವ್ಯಕ್ತಿಗೆ ನೋಟಿಸ್ ಕಳಿಸಲಿದ್ದೇವೆ. ಅದು ನಿಜವೇ ಆಗಿದ್ದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ವಿಷಯ ಇದಾಗಿದೆ. ಇದೊಂದು ಅಪರಾಧ ಎಂದಿದ್ದಾರೆ.
ಟ್ವೀಟ್ ಬಗ್ಗೆ ಯಾರೊಬ್ಬರೂ ದೂರು ನೀಡಿಲ್ಲ ಆದರೆ ಮಧ್ಯ ಪ್ರದೇಶದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ನೋಟಿಸ್ ಕಳಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT