ಬದಲಾವಣೆ ಇಲ್ಲ: ಬಿಎಂಆರ್‌ಸಿಎಲ್
‘ಶೇ 5ರಷ್ಟು ದರ ಹೆಚ್ಚಳ ಮಾಡಿ ಸೋಮವಾರ ಜಾರಿಗೊಳಿಸುವ ನಿರ್ಧಾರ ಬದಲಾಯಿಸಲು ಅಧಿಕೃತವಾಗಿ ಯಾವುದೇ ಸೂಚನೆಗಳು ಬಂದಿಲ್ಲ. ಹಾಗಾಗಿ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
‘ಜನಪ್ರತಿನಿಧಿಗಳ ಹೇಳಿಕೆಗೆ ನಾವು ಪ್ರತಿಕ್ರಿಯಿಸಲು ಆಗುವುದಿಲ್ಲ. ನಮಗೆ ಆದೇಶ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.