ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆಯುವಿಕೆ ದೊಡ್ಡ ತಪ್ಪು: ಜನಾರ್ದನ ರೆಡ್ಡಿ

Published 28 ನವೆಂಬರ್ 2023, 5:57 IST
Last Updated 28 ನವೆಂಬರ್ 2023, 5:57 IST
ಅಕ್ಷರ ಗಾತ್ರ

ಗಂಗಾವತಿ: ‘ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೀರ್ಮಾನ ದೊಡ್ಡ ತಪ್ಪು. ಯಾವ ತಪ್ಪೂ ಮಾಡಿಲ್ಲ ಎಂದರೆ ಪ್ರಕರಣ ಏಕೆ ಹಿಂಪಡೆಯಬೇಕು’ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಪ್ರಶ್ನಿಸಿದರು.

ನಗರದ ಎಪಿಎಂಸಿಯಲ್ಲಿ ಸೋಮವಾರ ಪತ್ರಕರ್ತರ ಜೊತೆಗೆ ಮಾತನಾಡಿ, ‘ಈ ಹಿಂದೆ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ಸರ್ಕಾರ ತನಿಖೆ ನಡೆಸಲು ಸಿಬಿಐಗೆ ಶಿಫಾರಸ್ಸು ಮಾಡಿದರೆ ದ್ವೇಷದ ರಾಜಕಾರಣ ಎಂದೂ ಬಿಂಬಿಸಲಾಗಿತ್ತು’ ಎಂದರು.

‘ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜನಾರ್ದನ ರೆಡ್ಡಿ ವಿರುದ್ಧ ಗಣಿಹಗರಣ ಎಂಬ ಸುಳ್ಳಿನ ಕಂತೆಕಟ್ಟಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ, ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರಲ್ಲ. ಅದು ಸಹ ದ್ವೇಷವೇ ಎಂದು ಸ್ವತಃ ತಾವೇ ಒಪ್ಪಿಕೊಂಡಂತೆ ಈಗ ಆಗಿದೆ’ ಎಂದು ಹೇಳಿದರು.

ಗಣಿಹಗರಣಕ್ಕೆ ಸಂಬಂಧಪಟ್ಟ ಪ್ರಕರಣಗಳು ಜನಾರ್ದನ ರೆಡ್ಡಿ ವಿರುದ್ಧ ಐದಾರು ಇದ್ದರೆ, ಸಚಿವ ಬಿ.ನಾಗೇಂದ್ರ ಅವರು ವಿರುದ್ದ 20ಕ್ಕೂ ಹೆಚ್ಚಿವೆ. ಇವೆಲ್ಲವೂ ಸಿದ್ದರಾಮಯ್ಯನವರೇ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದು, ನಾಗೇಂದ್ರ ಅವರು ತಪ್ಪಿತಸ್ಥರು ಎಂದರಿತ ಸಿದ್ದರಾಮಯ್ಯನವರು ಸಂಪುಟದಲ್ಲಿ ಸಚಿವ ಸ್ಥಾನ ಏಕೆ ನೀಡಬೇಕು. ಒಂದು ವೇಳೆ ದ್ವೇಷ ಇಲ್ಲವಂದ್ರೆ ನಾಗೇಂದ್ರ ಅವರ ಪ್ರಕರಣಗಳನ್ನೂ ಸಹ ಹಿಂಪಡೆಯಬೇಕು. ಇಲ್ಲಿ ಡಿಕೆಶಿಗೆ ಒಂದು ನ್ಯಾಯ, ನಾಗೇಂದ್ರ ಅವರಿಗೆ ಒಂದು ನ್ಯಾಯನಾ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ನಾಗೇಂದ್ರ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಪ್ರಕರಣಗಳನ್ನು ಹಿಂಪಡೆಯುತ್ತಾರಾ? ಇಲ್ಲವೆ ಸಚಿವ ಸ್ಥಾನದಿಂದ ಕೆಳಗಿಳಿಸುತ್ತಾರಾ ಎಂಬುದು ರಾಜ್ಯದ ಜನತೆಯ ಪ್ರಶ್ನೆಯಾಗಿದೆ’ ಎಂದರು. ಈ ವೇಳೆ ಕೆಆರ್‌ಪಿಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT