ನಂಜನಗೂಡು: ‘ದೇಶದ ಜನತೆ ಇವಿಎಂ ಮತಯಂತ್ರ ವ್ಯವಸ್ಥೆಯ ಚುನಾವಣೆ ಮೇಲೆ ವಿಶ್ವಾಸವಿಟ್ಟಿದ್ದಾರೆ. ಆದರೆ ಬಿಜೆಪಿ ತನ್ನ ಗೆಲುವಿಗೆ ಅನುಕೂಲವಾಗುವಂತೆ ಮತದಾರರ ಪಟ್ಟಿಯನ್ನು ರೂಪಿಸಿ ಮತಗಳ್ಳತನ ಮಾಡುತ್ತಿದೆ’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಆರೋಪಿಸಿದರು.

ನಗರದ ಅಂಬೇಡ್ಕರ್ ವೃತ್ತದ ಬಳಿ ಶುಕ್ರವಾರ ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ನಡೆಸತ್ತಿರುವ ಜನಜಾಗೃತಿ ಅಭಿಯಾನವನ್ನು ಬೆಂಬಲಿಸಿ, ಸಹಿ ಸಂಗ್ರಹ ಅಭಿಯಾನ ನಡೆಸಿದರು.

‘ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ 2004ರಲ್ಲಿ ಇವಿಎಂ ಮತಯಂತ್ರ ವ್ಯವಸ್ಥೆ ಅಳವಡಿಸಿಕೊಳ್ಳಲಾಯಿತು. 2004ರಲ್ಲಿ ನನ್ನ ತಂದೆ ದಿ.ಆರ್.ಧ್ರುವನಾರಾಯಣ ಅವರು ಒಂದು ಮತದ ಅಂತರದಿಂದ ಗೆದ್ದು ಇಡೀ ದೇಶಕ್ಕೆ ಒಂದು ಮತದ ಬೆಲೆಯ ಸಂದೇಶವನ್ನು ರವಾನಿಸಿದ್ದರು. ಒಬ್ಬರು 20 ಮತಗಟ್ಟೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಮತ ನೋಂದಣಿ ಮಾಡಿಕೊಂಡಿರುವುದು ಜಗಜ್ಜಾಹೀರಾಗಿದೆ. ಹರಿಯಾಣ ರಾಜ್ಯದ ಚುನಾವಣೆಯಲ್ಲಿ 25 ಲಕ್ಷ ಮತ ಕಳ್ಳತನ ನಡೆದಿದೆ, ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಹಲವು ಕಡೆ ಮತ ಕಳ್ಳತನ ಮಾಡಿರುವ ಬಗ್ಗೆ ರಾಹುಲ್ ಗಾಂಧಿ ಅವರು ಪ್ರಾತ್ಯಕ್ಷಿಕೆ ಮೂಲಕ ಸಾಬೀತುಪಡಿಸಿದ್ದಾರೆ’ ಎಂದರು.

‘ಮತ ಕಳ್ಳತನವನ್ನು ತಡೆಯಬೇಕಿದ್ದ ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷವನ್ನು ಸಾಕ್ಷಿ ಕೇಳುತ್ತಿರುವುದು ವಿಪರ್ಯಾಸ, ಬಿಜೆಪಿ ಚುನಾವಣೆ ಆಯೋಗದ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಯನ್ನು ಪಕ್ಷದ ಪರವಾಗಿ ತಿರುಗಿಸುವ ಪ್ರಯತ್ನ ನಡೆಯುತ್ತಿರುವುದು ಪ್ರಜಾತಂತ್ರದ ಮೂಲತತ್ವಗಳ ಮೇಲಿನ ನೇರ ದಾಳಿಯಾಗಿದೆ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ 25 ಸಾವಿರ ಮತದಾರರ ಸಹಿ ಸಂಗ್ರಹದ ಮೂಲಕ ಜನಜಾಗೃತಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠ ನಾಯಕ, ಮುಖಂಡರಾದ ಶ್ರೀಕಂಠಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಮಾರುತಿ, ರವಿಪ್ರಕಾಶ್, ಉಪ್ಪಿನಹಳ್ಳಿ ಶಿವಣ್ಣ, ದೊರೆಸ್ವಾಮಿ ನಾಯಕ, ಕರಳಪುರ ನಾಗರಾಜು, ವಿಜಯ್ ಕುಮಾರ್, ಶ್ರೀನಿವಾಸ ಮೂರ್ತಿ, ಎನ್.ಟಿ.ಗಿರೀಶ್, ಕಳಲೆ ರಾಜೇಶ್, ಚಂದ್ರು, ಗಂಗಾಧರ್, ಪ್ರದೀಪ್, ಎಸ್.ಪಿ. ಮಹೇಶ್, ಗಾಯತ್ರಿ, ದೊರೆಸ್ವಾಮಿ, ವಿಜಯ್ ಕುಮಾರ್, ಲತಾಸಿದ್ದಶೆಟ್ಟಿ, ಶಶಿರೇಖ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.