ಮಂಗಳೂರು: ದೇಶವೆಲ್ಲಾ ಬುಧವಾರ, ಮಂಗಳ ಗ್ರಹದ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಕಳುಹಿಸಿದ ಸಂಭ್ರಮದಲ್ಲಿ ತೇಲು ತ್ತಿರಬೇಕಾದರೆ, ನಗರದಲ್ಲೊಬ್ಬರು ಶನಿಗ್ರಹದ ಕಾಟ ತಪ್ಪಿಸಲು ಕೊರಗ ಕುಟುಂಬವೊಂದಕ್ಕೆ ಸೀರೆ ದಾನ ಮಾಡಲು ಹೋಗಿ ಪೊಲೀಸರ ಅತಿಥಿಯಾಗುವ ಆತಂಕ ಎದುರಿ ಸುತ್ತಿದ್ದಾರೆ.

ಉರ್ವದ ಜಗನ್ನಾಥ ಶೆಣೈ ಅವರು ಬುಧವಾರ ಉರ್ವ ಚರ್ಚ್ ಸಮೀಪದ ಕುದ್ಮುಲ್ ರಂಗರಾವ್ ನಗರದ ಮನೋಜ್ ಅವರ ಮನೆಯ ಅಂಗಳಕ್ಕೆ ಹೋಗಿ, ‘ನನಗೆ ಶನಿ ಕಾಟ ಇದೆ. ಕೊರಗರಿಗೆ ಸೀರೆ ದಾನ ಮಾಡಿದರೆ ನನಗೆ ಇದರಿಂದ ಮುಕ್ತಿ ಸಿಗುತ್ತದೆ’ ಎಂದು ಹೇಳಿ ಹಳೆ ಸೀರೆಗಳನ್ನು ನೀಡಲು ಮುಂದಾದರು.

‘ಕೊರಗ ಸಮುದಾಯವನ್ನು ಅವಮಾನ ಪಡಿಸುವ ಉದ್ದೇಶ ದಿಂದಲೇ ಜಗನ್ನಾಥ ಶೆಣೈ ಅವರು ಸೀರೆ ನೀಡಲು ಮುಂದಾಗಿದ್ದಾರೆ. ಇದರಿಂದ ನನ್ನ ಹಾಗೂ ತಾಯಿ ಮೀನಾ ಅವರ ಮನಸ್ಸಿಗೆ ತುಂಬಾ ನೋವಾಗಿದೆ’ ಎಂದು ಮನೋಜ್ ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೊರಗರ ಮೇಲೆ ದೌರ್ಜನ್ಯಕ್ಕೆ, ಅವಮಾನಕ್ಕೆ ಗುರಿಪಡಿಸುವ ಅಜಲು ಪದ್ಧತಿಯನ್ನು ಸರ್ಕಾರ ನಿಷೇಧಿಸಿದ ಬಳಿಕವೂ ಅವರನ್ನು ಅವಮಾನ ಪಡಿ ಸುವ ಘಟನೆಗಳು ಮುಂದುವರಿ ಯುತ್ತಿವೆ. ‘ಆರೋಪಿ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಉರ್ವ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.