ಗೋಕರ್ಣ: ಇಲ್ಲಿನ ಬಂಗ್ಲೆಗುಡ್ಡದಲ್ಲಿನ ಮುರಳೀಧರ ಕಾಮತ್ ಎಂಬವರ ಮನೆಯಲ್ಲಿ ಗುರುವಾರ ನಸುಕಿನ ಜಾವ ಅಡುಗೆ ಸಿಲಿಂಡರ್ ಸ್ಪೋಟಗೊಂಡು, ಮನೆ ಸಂಪೂರ್ಣ ಸುಟ್ಟುಹೋಗಿದೆ.
.ಗೋಕರ್ಣ | ಗಾಂಜಾ ಸೇವನೆ: ಆರೋಪಿಗಳ ಬಂಧನ.
ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಜೀವಹಾನಿ ಉಂಟಾಗಿಲ್ಲ. ಮುರಳೀಧರ ಹೋಟೆಲ್ ಉದ್ಯಮಿಯಾಗಿದ್ದು, ಕುಡ್ಲೆ ಬೀಚ್ ಸಮೀಪದ ಚಿಕ್ಕ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಮನೆಯವರೆಲ್ಲಾ ರಾತ್ರಿ ಅಲ್ಲಿಯೇ ಉಳಿದಿದ್ದರು. ಯಾರೂ ಇಲ್ಲದ ಸಮಯದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಮನೆಯ ಮಾಲೀಕ ಆರೋಪಿಸಿದ್ದಾರೆ.
.ಗೋಕರ್ಣ | ಸಿಆರ್ಝಡ್ ನಿಯಮ ಉಲ್ಲಂಘನೆ: ‘ಒತ್ತುವರಿ’ಗೆ ನಾಡುಮಾಸ್ಕೇರಿ ಕಡಲತೀರ ಬಲಿ.
'ಸಿಲಿಂಡರ್ ಬಂದ್ ಇತ್ತು. ಆದರೂ ಸ್ಪೋಟವಾಗಲು ಹೇಗೆ ಸಾಧ್ಯ. ಇದು ಉದ್ದೇಶಪೂರ್ವಕವಾಗಿ ಯಾರೋ ಮಾಡಿರುವ ಕೃತ್ಯ' ಎಂದು ಮುರಳೀಧರ ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಮತ್ತು ಕುಮಟಾದಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋಕರ್ಣ ಠಾಣೆ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ
.ಗೋಕರ್ಣ | ಮುಗಿದ ಭತ್ತ ಕಟಾವು: ಗದ್ದೆಗಳಲ್ಲಿ ತರಕಾರಿ ಕೃಷಿ ಚುರುಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.