ಗೋಕರ್ಣ ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲತೀರದಲ್ಲಿ ಕೆಲ ತಿಂಗಳ ಹಿಂದೆ ಕುಮಟಾ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿದರು
ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಕಡಲತೀರದಲ್ಲಿ ನಡೆದ ಅತಿಕ್ರಮಣಕ್ಕೆ ಸಂಬಂಧ ಪಟ್ಟಂತೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಸೂಚಿಸಿದ್ದು ಕೋರ್ಟ್ ಆದೇಶ ಪಾಲಿಸುತ್ತೇವೆ
ಪ್ರವೀಣಕುಮಾರ ಬಸ್ರೂರು ಸಿಆರ್‌ಝಡ್ ಡಿಸಿಎಫ್
ಹರಿದು ಬಂದ ಜಾಗದ ಗೊಂದಲವೇ ವರ!
‘ಕಾಲಾಂತರದಲ್ಲಿ ಸಮುದ್ರ ನದಿ ಸೇರುವ ಪ್ರದೇಶದ ದಿಕ್ಕು ಬದಲಾದಾಗ ಮುಂಚೆ ನೀರು ಹರಿದಿದ್ದ ಜಾಗವನ್ನು ಹರಿದು ಬಂದ ಜಾಗ ಎಂದು ಪರಿಗಣಿಸಲಾಗುತ್ತದೆ. ಈ ಜಾಗದ ಒಡೆತನದ ಬಗ್ಗೆ ಬಂದರು ಕಂದಾಯ ಇಲಾಖೆಗಳ ನಡುವೆ ಗೊಂದಲಗಳಿವೆ. ಪಹಣಿ ಪತ್ರ ನಕ್ಷೆಯೂ ಇಲ್ಲದೇ ಸಮುದ್ರ ತೀರದಲ್ಲಿರುವ ಈ ಜಾಗವನ್ನೇ ಒತ್ತುವರಿ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಸ್ಥಳೀಯ ಮುಖಂಡರೊಬ್ಬರು. ‘ಮೀನುಗಾರಿಕೆಗೆ ಬಳಕೆಯಾಗುತ್ತಿದ್ದ ಜಾಗ ಕಾಲಕ್ರಮೇಣ ಒತ್ತುವರಿಯಾಗಿದೆ. ಕಡಲತೀರದ 200 ಮೀ ವ್ಯಾಪ್ತಿಯವರೆಗೂ ಸಿಆರ್‌ಝಡ್ ವಲಯಕ್ಕೆ ಒಳಪಡುತ್ತದೆ. ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರದಿದ್ದರೂ ಇಲ್ಲಿ ಅನೇಕ ಕಟ್ಟಡಗಳು ತಲೆಎತ್ತಿವೆ’ ಎನ್ನುತ್ತಾರೆ ಸ್ಥಳೀಯರು.