ಕೊಟ್ಟೂರು: ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆಯ ಮನೆಯೊಂದರಲ್ಲಿದ್ದ ಮೂವರು ನಿಗೂಢವಾಗಿ ನಾಪತ್ತೆಯಾಗಿರುವ ಕುರಿತು ಹರಿದಾಡಿದ ಸುದ್ದಿಯಿಂದ ಪಟ್ಟಣದ ಜನ ಬೆಚ್ಚಿ ಬಿದ್ದಿದ್ದು, ನಾಪತ್ತೆಯಾದವರು ಎಲ್ಲಿಗೆ ಹೋದರು, ಏನಾದರು ಎಂದು ತಮ್ಮ ತಮ್ಮಲ್ಲೇ ಮಾತನಾಡತೊಡಗಿದ್ದಾರೆ.

ಒಂದೂವರೆ ವರ್ಷದ ಹಿಂದೆ ಜಗಳೂರಿನಿಂದ ಇಲ್ಲಿಗೆ ಬಂದಿದ್ದ ಅಕ್ಷಯ ಕುಮಾರ್ ಟೈರ್ ರಿಪೇರಿ ಅಂಗಡಿಯನ್ನು ಹರಪನಹಳ್ಳಿ ರಸ್ತೆಯಲ್ಲಿ ತೆರೆದಿದ್ದ. ಆತನ ಕುಟುಂಬದವರು ನೆರೆಹೊರೆಯವರ ಜತೆಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲವಾದ ಕಾರಣ ಅವರ ಕುಟುಂಬ ಒಂದು ಪ್ರತ್ಯೇಕ ಬಿಡಾರ ಹೂಡಿದಂತೆ ಇತ್ತು. ಹೀಗಾಗಿ ಮನೆಯಲ್ಲಿ ನಾಲ್ಕು ದಿನಗಳ ಹಿಂದೆ ಅಡಗಿದ್ದ ಸದ್ದಿನ ಕುರಿತಂತೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಎಂದು ಹೇಳಲಾಗುತ್ತಿದೆ.

‘ಬೆಂಗಳೂರಿನ ತಿಲಕ ನಗರ ಠಾಣೆಯಲ್ಲಿ ಅಕ್ಷಯ ಕುಮಾರ್ ತನ್ನ ಅಪ್ಪ, ಅಮ್ಮ, ತಂಗಿ ನಾಪತ್ತೆಯಾಗಿದ್ದಾರೆ ಎಂಬ ದೂರು ನೀಡಿದ ಬಳಿಕ ಈ ಎಲ್ಲ ಪ್ರಕರಣ ಹೊರಬಿದ್ದಿದೆ. ಅತ ಹೇಳಿದಂತೆ ಈ ಮೂವರು ಜಯದೇವ ಆಸ್ಪತ್ತೆಗೆ ಚಿಕಿತ್ಸೆಗೆ ತೆರಳಿಲ್ಲದಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿತ್ತು. ಹೀಗಾಗಿ ಇದೀಗ ಅನುಮಾನ ಹೆಚ್ಚುವಂತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ತಂದೆ ಭೀಮರಾಜ್ (48), ತಾಯಿ ಜಯಮ್ಮ (44), ತಂಗಿ ಅಮೃತಾ (18) ಎಲ್ಲಿಗೆ ಹೋದರು? ಅವರ ಕೊಲೆ ನಡೆದಿದೆಯೇ? ಅಥವಾ ಅವರನ್ನು ಎಲ್ಲಾದರೂ ಬಚ್ಚಿಡಲಾಗಿದೆಯೇ ಎಂಬ ಸಂಶಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ, ದೂರು ನೀಡಿದ ಅಕ್ಷಯ್ ಕುಮಾರ್ ಸ್ಥಳಕ್ಕೆ ಬಂದು ಮಾಹಿತಿ ನೀಡುವ ತನಕ ಇದೆಲ್ಲವೂ ನಿಗೂಢವಾಗಿಯೇ ಇರುತ್ತದೆ’ ಎಂದು ಸಹ ಮೂಲಗಳು ಹೇಳಿವೆ.

ಈಗಾಗಲೇ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಙರನ್ನು ಕರೆಸಿ ಸ್ಥಳ ಪರಿಶಿಲನೆಗೆ ತೊಡಗಿದ್ದಾರೆ. ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.