‘ನಾವು ಜಾಟ್ ಮಕ್ಕಳು. ಹುಟ್ಟುವಾಗಲೇ ಅಫೀಮನ್ನು ಆಹಾರವಾಗಿ ಸೇವಿಸುತ್ತೇವೆ’ ಎಂಬ ಸಾಹಿತ್ಯವುಳ್ಳ ಗೀತೆಯನ್ನು ರಚಿಸಿದ್ದ ಪಂಜಾಬಿ ಪಾಪ್ ಗಾಯಕ ಗುರು ರಾಂಧವಗೆ ನ್ಯಾಯಾಲಯ ಚಾಟಿ ಬೀಸಿದೆ.

ರಾಂಧವ ಅವರ ಇತ್ತೀಚಿನ 'ಸಿರ್ರಾ' ಹಾಡಿನ ಸಾಹಿತ್ಯವು ಮಾದಕ ವಸ್ತುಗಳ ಸಂಸ್ಕೃತಿಯನ್ನು ಉತ್ತೇಜಿಸುವುದರ ಜತೆಗೆ ಜಾಟ್ ಸಮುದಾಯವನ್ನು ಅಪಮಾನಿಸುವಂತೆ ಇದೆ ಎಂದು ಸಾಮ್ರಾಲಾದ ರಾಜ್ದೀಪ್ ಸಿಂಗ್ಮಾನ್ ದೂರು ನೀಡಿದ್ದರು.
.ನಟಿ ಸಾಯಿ ಧನ್ಸಿಕಾ ಜತೆ ವಿಶಾಲ್ ನಿಶ್ಚಿತಾರ್ಥ; ಜನ್ಮ ದಿನದಂದೇ ಸಂತಸ ಹಂಚಿಕೊಂಡ ನಟ.
ದೂರಿನ ಆಧಾರದ ಮೇಲೆ ಗುರು ರಾಂಧವ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಸೆಕ್ಷನ್ 223 ರ ಅಡಿಯಲ್ಲಿ ದೂರು ದಾಖಲಾಗಿದ್ದು, ಸೆಪ್ಟೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.

ಈ ಪ್ರಕರಣ ಸಂಬಂಧ ಆಪಲ್ ಮ್ಯೂಸಿಕ್, ಯೂಟ್ಯೂಬ್, ಅಮೆಜಾನ್ ಮ್ಯೂಸಿಕ್, ಇನ್ಸ್ಟಾಗ್ರಾಮ್, ಸ್ಪಾಟಿಫೈ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿವಾದದ ಹೊರತಾಗಿ ‘ಸಿರ್ರಾ‘ ಹಾಡು ಯೂಟ್ಯೂಬ್ನಲ್ಲಿ 6 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.