ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT
ಆಳ-ಅಗಲ | ಹುಸಿ ಬಾಂಬ್ ಕರೆ: ಸರ್ಕಾರ, ಸಂಸ್ಥೆಗೆ ಹೊರೆ
ಆಳ-ಅಗಲ | ಹುಸಿ ಬಾಂಬ್ ಕರೆ: ಸರ್ಕಾರ, ಸಂಸ್ಥೆಗೆ ಹೊರೆ
ಫಾಲೋ ಮಾಡಿ
Published 3 ಡಿಸೆಂಬರ್ 2024, 0:30 IST
Last Updated 3 ಡಿಸೆಂಬರ್ 2024, 0:30 IST
Comments
ಭಾರತೀಯ ವಿಮಾನಯಾನ ಸೇವೆಗೆ ಹೊಸ ಸಮಸ್ಯೆಯೊಂದು ಎದುರಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ಮತ್ತು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಕರೆಗಳು ತೀವ್ರವಾಗಿ ಹೆಚ್ಚಳವಾಗಿದ್ದವು. ಬಂದುವೆಲ್ಲ ಹುಸಿ ಕರೆಗಳೇ. ಆದರೆ, ಅವು ಹುಸಿ ಎಂದು ಪತ್ತೆಯಾಗುವ ವೇಳೆಗೆ ಬಹಳ ಸಮಯ, ಶ್ರಮ, ಹಣ ವೆಚ್ಚವಾಗಿತ್ತು. ಜತೆಗೆ ವಿಮಾನ ಟಿಕೆಟ್‌ಗಾಗಿ ದುಬಾರಿ ಬೆಲೆ ತೆರುವ ಪ್ರಯಾಣಿಕರೂ ತೊಂದರೆ, ಆತಂಕ ಎದುರಿಸುವಂತಾಯಿತು. ಒಂದು ವರದಿಯ ಪ್ರಕಾರ, ಒಂದು ಹುಸಿ ಕರೆಯಿಂದ ವಿಮಾನಯಾನ ಸಂಸ್ಥೆ ಮತ್ತು ಸರ್ಕಾರದ ಮೇಲೆ ಸುಮಾರು ₹3 ಕೋಟಿ ಹೊರೆ ಬೀಳುತ್ತದೆ.
ದೇಶದಲ್ಲಿ 150ಕ್ಕೂ
ಹೆಚ್ಚು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 33 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಇವುಗಳ ಮೂಲಕ ಪ್ರತಿ ದಿನ 3,000ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತಿದ್ದು, ಕಳೆದ ವರ್ಷ 15 ಕೋಟಿ ಮಂದಿ ಪ್ರಯಾಣಿಸಿದ್ದರು.
ಜೋಧಪುರ ವಿಮಾನ ನಿಲ್ದಾಣದ ಬಳಿ ಭದ್ರತಾ ಸಿಬ್ಬಂದಿ

ಜೋಧಪುರ ವಿಮಾನ ನಿಲ್ದಾಣದ ಬಳಿ ಭದ್ರತಾ ಸಿಬ್ಬಂದಿ 

ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT