ಬುಧವಾರ, 27 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಬುಧವಾರ, 27 ಆಗಸ್ಟ್ 2025: ಅನಾಯಾಸದ ಗಳಿಕೆಯಿಂದ ಸಂತೋಷ...
Published 26 ಆಗಸ್ಟ್ 2025, 23:23 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲಸಗಳ ಬಗ್ಗೆ ಪುನರಾವಲೋಕನ ಮಾಡಿ, ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳ ಆಪಾದನೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುವಿರಿ. ರಫ್ತು ವ್ಯವಹಾರ ಲಾಭ ನೀಡುವುದು.
ವೃಷಭ
ಆಗಾಗ ಮನಸ್ಸಿನಲ್ಲಿ ಕಾಡುವ ಭಯಕ್ಕೆ ಹೆದರುವ ಅವಶ್ಯಕತೆ ಇಲ್ಲ. ಕಷ್ಟಗಳು ಏನೇ ಬಂದರೂ ಎದುರಿಸುತ್ತೇನೆ ಎಂಬ ಆತ್ಮಸ್ಥೈರ್ಯ ತಂದುಕೊಳ್ಳಿ. ಅನಾಯಾಸದ ಗಳಿಕೆಯಿಂದ ಸಂತೋಷ ಉಂಟಾಗುವುದು.
ಮಿಥುನ
ಇತರರ ವೈಯಕ್ತಿಕ ವಿಚಾರದಲ್ಲಿ ಅನವಶ್ಯಕವಾಗಿ ಸಲಹೆಯನ್ನು ಕೊಡದಿರಿ. ದುರಾಸೆಯಿಂದಾಗಿ ಅಕ್ಕಪಕ್ಕದವರಿಂದ, ಸಂಬಂಧಿಗಳಿಂದ ನಿಂದನೆಗೆ ಒಳಗಾಗುವಿರಿ.
ಕರ್ಕಾಟಕ
ಆಲೋಚನೆಯಂತೆ ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆಯಾಗಲಿದೆ. ಶ್ರೀಸಿದ್ಧಿವಿನಾಯಕನನ್ನು ಸ್ತುತಿಸುವುದರಿಂದ ಮಂಗಳವಾಗುವುದು. ಮಧುರ ಘಟನೆ ಸಂಭವಿಸಲಿದೆ.
ಸಿಂಹ
ನೂತನ ವಾಹನ ಖರೀದಿಯ ಯೋಜನೆಗೆ ತಂದೆಯಿಂದ ಒಪ್ಪಿಗೆ ಮತ್ತು ಸಹಾಯ ಸಿಗಲಿದೆ. ಉನ್ನತ ಶಿಕ್ಷಣ ಪಡೆಯುವ ಗುರಿಗೆ ಇನ್ನೂ ಹೆಚ್ಚಿನ ಪರಿಶ್ರಮ ಅಗತ್ಯ. ಮಕ್ಕಳೊಡನೆ ಸಂತಸದಲ್ಲಿ ಪಾಲ್ಗೊಳ್ಳುವಿರಿ.
ಕನ್ಯಾ
ವಿಮರ್ಶಾತ್ಮಕ ಆಲೋಚನೆಗೆ ಹಾಗೂ ಸಂದರ್ಭೋಚಿತ ಮಾತುಗಳಿಗೆ ಎಲ್ಲರೂ ಪ್ರಶಂಸಿಸುವರು. ನಿರಂತರ ಪ್ರಯತ್ನದಿಂದ ಕಾರ್ಯಸಿದ್ಧಿ . ಸ್ವತ್ತು ವಿವಾದಗಳ ಇತ್ಯರ್ಥಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಲಿದೆ.
ತುಲಾ
ವಯಸ್ಸು ಹಾಗೂ ಉತ್ಸಾಹ ಇರುವಾಗ ಮಾತ್ರ ಸಮಾಜ ಸೇವೆ ಮಾಡಬಹುದೆನ್ನುವುದನ್ನು ಗಮನದಲ್ಲಿಟ್ಟು ಸೇವೆ ಸಲ್ಲಿಸಿ. ತಂದೆ ತಾಯಿಯರ ಸಂತೋಷವು ಸಂತಸಕ್ಕೆ ಕಾರಣವಾಗಲಿದೆ.
ವೃಶ್ಚಿಕ
ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಪ್ರಯತ್ನದ ಅವಶ್ಯಕತೆಯ ಮನವರಿಕೆ ಆಗುತ್ತದೆ. ಸಿದ್ಧಿಸಿದ ಕಲೆಯನ್ನು ಹಣದ ಮುಖ ನೋಡಿ ಅನರ್ಥಕಾರಿಯನ್ನಾಗಿ ಮಾಡಿಕೊಳ್ಳಬೇಡಿ.
ಧನು
ವರಾನ್ವೇಷಣೆಯ ಹಂತದಲ್ಲಿರುವ ಕನ್ಯೆಗೆ ಬಂದ ಸಂಬಂಧದ ಬಗ್ಗೆ ಕೂಲಂಕಷವಾಗಿ ಯೋಚಿಸದೆಯೆ ಮದುವೆಯ ಮಾತುಕತೆ ಮಾಡದಿರಿ. ದುರ್ಲಭವಾದಂಥ ವಸ್ತುಗಳ ಸಂಪಾದನೆಯಲ್ಲಿ ಸಮಯ ಸವೆಸದಿರಿ.
ಮಕರ
ದೂರದ ಪ್ರಯಾಣದ ಆಯಾಸವನ್ನು ಆರಾಮವಾಗಿ ಇರುವುದರಿಂದ ನೀಗಿಸಿಕೊಳ್ಳುವಿರಿ. ವಿಚಾರಗಳು ನೀವೆಷ್ಟೇ ತಲೆಕೆಡಿಸಿಕೊಂಡು ಮಾಡಿದರೂ ಅದು ಸರಿಯಾಗಿ ಆಗುವುದಿಲ್ಲ.
ಕುಂಭ
ಸಜ್ಜನರ ಹಾಗೂ ದುರ್ಜನರ ಸಹವಾಸಗಳು ಅವವೇ ಫಲಗಳನ್ನು ಕೊಡುವುದು ಅನುಭವಕ್ಕೆ ಸರಿಯಾಗಿ ಬರುತ್ತವೆ. ಹೂವು ಹಣ್ಣುಗಳ ಬೆಳೆಗಾರರಿಗೆ ಲಾಭ ನಷ್ಟಗಳೆರೆಡರ ಅನುಭವವೂ ಆಗಬಹುದು.
ಮೀನ
ಖರ್ಚುವೆಚ್ಚಗಳು ನಿಯಂತ್ರಣದಲ್ಲಿ ಇರಲಿಕ್ಕಾಗಿ ಹರಸಾಹಸ ಪಡಬೇಕಾಗುವುದು. ದುಃಖಕರ ವಿಚಾರವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗಲಿದೆ.
ADVERTISEMENT
ADVERTISEMENT