ದಿನ ಭವಿಷ್ಯ: ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ವ್ಯವಹರಿಸಿ
Published 7 ಸೆಪ್ಟೆಂಬರ್ 2025, 23:36 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ ಸಂತೋಷವಾಗುವುದು. ಆಡಳಿತಾತ್ಮಕ ವಿಚಾರದಲ್ಲಿ ಭಾರಿ ಬದಲಾವಣೆಗಳ ಅಗತ್ಯಗಳನ್ನು ಸಂಸ್ಥಾಪಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗುವಿರಿ.
ವೃಷಭ
ಕಾರ್ಯ ಪ್ರಗತಿಯಲ್ಲಿ ಆಗಾಗ ಹೆಚ್ಚಿನ ಜವಾಬ್ದಾರಿ ಎದುರಾಗಿ ಸವಾಲು ಬರಲಿದೆ. ಕಟ್ಟಡ ಗುತ್ತಿಗೆದಾರರಿಗೆ ಬಿಡುವಿಲ್ಲದಂತಾದೀತು. ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ. ಏಕಾಗ್ರತೆಯನ್ನು ಕಾಯ್ದುಕೊಳ್ಳಿ.
ಮಿಥುನ
ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ವ್ಯವಹರಿಸಿ. ಎದುರಾಳಿಗಳನ್ನು ಮಾತಿನಲ್ಲಿ ಸುಲಭವಾಗಿ ಕಟ್ಟಿಹಾಕುವಿರಿ. ಗೃಹದಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಯಶಸ್ಸಿನ ಮಾರ್ಗಗಳು ಗೋಚರಿಸಲಿವೆ.
ಕರ್ಕಾಟಕ
ಆರ್ಥಿಕವಾಗಿ ಮುಂದೆ ಬರುವ ಉದ್ದೇಶವನ್ನು ಇಟ್ಟುಕೊಂಡು ವಾಮಮಾರ್ಗವನ್ನು ಅನುಸರಿಸಬೇಡಿ. ಗುತ್ತಿಗೆ ವ್ಯವಹಾರಗಳಲ್ಲಿ ಎಡವಬಹುದು, ಜಾಗ್ರತರಾಗಿರಿ. ಶನೈಶ್ಚರನ ಆರಾಧನೆ ಮಾಡಿ.
ಸಿಂಹ
ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸನ್ನು ಕಾಣುವರು. ಸ್ನೇಹಿತರ ಬಳಗದಲ್ಲಿ ಅವರವರ ಸ್ವಾರ್ಥಕ್ಕಾಗಿ ವಂಚನೆಯ ಕಡೆಗೆ ಕರೆದೊಯ್ಯುವ ಪ್ರಯತ್ನ ನಡೆಯಲಿದೆ.
ಕನ್ಯಾ
ಪ್ರವಾಸದಿಂದ ಅನಿರೀಕ್ಷಿತವಾದ ಲಾಭದ ಅನುಭವ ಉಂಟಾಗುವುದು. ಅವಿವಾಹಿತರಿಗೆ ವಿವಾಹ ಯೋಗವು ಇದೆ. ಅಪರೂಪದ ಮೃದು ಧೋರಣೆಯಿಂದ ಇತರರಿಗೆ ಸಂತೋಷವೆನಿಸುವುದು.
ತುಲಾ
ವೈದ್ಯರಿಗೆ ಬಿಡುವಿಲ್ಲದ ಅಭ್ಯಾಸದ ಉನ್ನತ ಜವಾಬ್ದಾರಿಯ ಸ್ಥಾನಕ್ಕೆ ವರ್ಗಾವಣೆಯಾಗುವುದು. ಪಿತ್ರಾರ್ಜಿತ ಆಸ್ತಿಯ ಹಂಚಿಕೆಯ ವಿಷಯದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುವ ಪರಿಸ್ಥಿತಿ ಬರಲಿದೆ.
ವೃಶ್ಚಿಕ
ಆಫೀಸಿನ ಆಗು ಹೋಗುಗಳ ಬಗ್ಗೆ ಗಮನವಿಟ್ಟುಕೊಳ್ಳಿ. ಅಪರಿಚಿತರ ಹತ್ತಿರ ಗೌಪ್ಯತೆಯನ್ನು ಹಂಚಿಕೊಳ್ಳಬೇಡಿ. ಹೊಸತನದಲ್ಲಿ ಜಯ ಕಾಣುವಿರಿ. ಹಿರಿಯರ ಆರೋಗ್ಯದ ವಿಷಯದಲ್ಲಿ ಮುತುವರ್ಜಿ ವಹಿಸಿ.
ಧನು
ಸತ್ಯ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ರಕ್ತದೊತ್ತಡ ಸ್ಥಿತಿ ಸಮತೋಲನಕ್ಕೆ ಬರುವಂತೆ ಮಾಡಿಕೊಳ್ಳಿ. ಮಗನಿಗೆ ಉದ್ಯೋಗ ದೊರೆಯಲಿದೆ.
ಮಕರ
ಮಾಡಿದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗ ದಿನವಿದೆ. ರಫ್ತು ವ್ಯಾಪಾರ ಮಾಡುವವರಿಗೆ ಸಂಪರ್ಕದಲ್ಲಿ ಅಡೆತಡೆಗಳು ಉಂಟಾಗಲಿವೆ. ಹೊಸ ವಸ್ತ್ರಗಳ ಖರೀದಿಯನ್ನು ಮಾಡುವಿರಿ.
ಕುಂಭ
ಇತ್ತೀಚಿನ ದಿನಗಳಲ್ಲಿ ನೀವು ಮಾಡಿಕೊಂಡ ಹೊಸ ಪರಿಚಯ ಒಂದು ತರಹದಿಂದ ನಿಮಗೆ ಪ್ರಯೋಜನಕ್ಕೆ ಬರಲಿದೆ. ನಿಮ್ಮ ಪ್ರತಿಭೆ ಮತ್ತು ಕೌಶಲಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ.
ಮೀನ
ಯುವಕ ಯುವತಿಯರಿಗೆ ಕಾಲೇಜಿನ ಶಿಸ್ತುಬದ್ಧವಾದ ಜೀವನವು ಉಸಿರುಗಟ್ಟಿಸುವಂತಹ ಅನುಭವವನ್ನು ತರಿಸಬಹುದು. ಯೋಗಿಗಳ ದರ್ಶನ ಹಾಗೂ ಮಾರ್ಗದರ್ಶನದ ಅಗತ್ಯವಿರುತ್ತದೆ.