ತ್ರಿಶೂರ್: ಕೇರಳದ ಪ್ರಖ್ಯಾತ ಕಲೆ ಮತ್ತು ಸಾಂಸ್ಕೃತಿಕ ವಿಶ್ವವಿದ್ಯಾಲಯ ‘ಕಲಾಮಂಡಲಂ’ನಲ್ಲಿ ಮುಸ್ಲಿಂ ಸಮುದಾಯದ ಬಾಲಕಿಯೊಬ್ಬಳು ಕಥಕ್ಕಳಿ ಶಾಸ್ತ್ರೀಯ ನೃತ್ಯ ಪ್ರದರ್ಶನದ ಮೂಲಕ ರಂಗಪ್ರವೇಶಿಸಲು ಸಜ್ಜುಗೊಂಡಿದ್ದಾರೆ.

ವಿಶ್ವವಿದ್ಯಾಲಯ ಸ್ಥಾಪನೆಯಾದ 95 ವರ್ಷಗಳಲ್ಲಿ ಮುಸ್ಲಿಂ ಸಮುದಾಯದ ಕಲಾವಿದೆಯೊಬ್ಬರು ಇಲ್ಲಿ ರಂಗಪ್ರವೇಶ ಮಾಡುತ್ತಿರುವುದು ಇದೇ ಮೊದಲು. ಕೊಲ್ಲಂನ ನಿವಾಸಿ, ಛಾಯಾಚಿತ್ರಕಾರ ನಿಜಾಂ ಅಮ್ಮಾಸ್ ಅವರ ಪುತ್ರಿ ಸಬ್ರಿ (16) ರಂಗಪ್ರವೇಶಕ್ಕೆ ಸಜ್ಜಾಗಿರುವ ಕಲಾವಿದೆ.

1930ರಲ್ಲೇ ಸ್ಥಾಪನೆಯಾದ ಈ ವಿಶ್ವವಿದ್ಯಾಲಯವು ಮಹಿಳೆಯರ ಕಲಿಕೆಗೆ ತೆರೆದುಕೊಂಡಿದ್ದು 2021ರಲ್ಲಿ. ಆ ಬಳಿಕ ಈ ವಿಶ್ವವಿದ್ಯಾಲಯಕ್ಕೆ ದಾಖಲಾದ ಮೊದಲ ಮುಸ್ಲಿಂ ಬಾಲಕಿ ಸಬ್ರಿ. ಇದೀಗ ಅವರು ‘ಕೃಷ್ಣ ವೇಷಂ’ ಮೂಲಕ ತನ್ನ ಸಹಪಾಠಿಗಳೊಂದಿಗೆ ರಂಗಪ್ರವೇಶ ಮಾಡುತ್ತಿದ್ದು, ‘ನನ್ನ ಬಹುಕಾಲದ ಕನಸು ಈ ಮೂಲಕ ನನಸಾಗುತ್ತಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಸಬ್ರಿ ಅವರ ತಂದೆ ನಿಜಾಂ ಕೂಡ ಈ ಬಗ್ಗೆ ಮಾತನಾಡಿ,‘ ನಾನು ಛಾಯಾಚಿತ್ರಕಾರನಾಗಿದ್ದು, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರಳುತ್ತಿದ್ದೆ. ಆಗ ನನ್ನೊಂದಿಗೆ ಬರುತ್ತಿದ್ದ ಸಬ್ರಿಗೂ ನೃತ್ಯದಲ್ಲಿ ಆಸಕ್ತಿ ಮೂಡಿತು. ಅದನ್ನು ಗಮನಿಸಿ, ಕಲಾಮಂಡಲಂನ ನೃತ್ಯ ಶಿಕ್ಷಕ ಗೋಪಿ ಅವರ ನೆರವಿನೊಂದಿಗೆ ಮಗಳನ್ನು ಇದೇ ವಿಶ್ವವಿದ್ಯಾಲಯಕ್ಕೆ ಸೇರಿಸಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.