ನನ್ನ ವಿರುದ್ಧ ಸುಳ್ಳು ಆರೋಪ: ಅಲ್ಲು ಅರ್ಜುನ್
ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮಾಡಿರುವ ಆರೋಪಗಳನ್ನು ನಟ ಅಲ್ಲು ಅರ್ಜುನ್ ತಳ್ಳಿ ಹಾಕಿದ್ದಾರೆ. ’ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಈ ರೀತಿಯ ಹೇಳಿಕೆಗಳಿಂದ ಚಾರಿತ್ರ್ಯವಧೆಯಾಗುತ್ತದೆ’ ಎಂದಿರುವ ಅಲ್ಲು, ‘ಮಹಿಳೆ ಸಾವಿಗೀಡಾಗಿರುವುದು ದುರದೃಷ್ಟಕರ ಘಟನೆ’ ಎಂದಿದ್ದಾರೆ.