ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

‘ಜಾತ್ಯತೀತ’, ‘ಸಮಾಜವಾದ’ ಪದ ತೆಗೆಯಬೇಕು: ಹೊಸಬಾಳೆ ಹೇಳಿಕೆಗೆ ವಿಪಕ್ಷಗಳು ಕಿಡಿ

ಆರ್‌ಎಸ್‌ಎಸ್‌ನ ಕರೆ ಸಂವಿಧಾನ ಮೇಲಿನ ದಾಳಿ: ವಿಪಕ್ಷಗಳ ಆಕ್ರೋಶ
Published : 27 ಜೂನ್ 2025, 16:01 IST
Last Updated : 27 ಜೂನ್ 2025, 16:01 IST
ಫಾಲೋ ಮಾಡಿ
Comments
ದತ್ತಾತ್ರೇಯ ಹೊಸಬಾಳೆ 
ದತ್ತಾತ್ರೇಯ ಹೊಸಬಾಳೆ 
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ
ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಿದ್ಧಾಂತವು ದೇಶದ ಸಂವಿಧಾನ ಪ್ರತಿಪಾದಿಸುವ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿವೆ
ಕಾಂಗ್ರೆಸ್‌ (ಪಕ್ಷದ ‘ಎಕ್ಸ್‌’ ಖಾತೆಯಲ್ಲಿನ ಪೋಸ್ಟ್‌)
ಆರ್‌ಎಸ್‌ಎಸ್‌ನ ಕರೆ ನಮ್ಮ ಗಣತಂತ್ರದ ಮುಖ್ಯ ಆಶಯಗಳನ್ನು ನಾಶ ಮಾಡುವುದೇ ಆಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತನ್ನ ಅಸ್ತಿತ್ವಕ್ಕಾಗಿ ಆರ್‌ಎಸ್‌ಎಸ್‌ ಇಂದಿರಾ ಗಾಂಧಿ ಅವರ ಜೊತೆ ಕೈಜೋಡಿಸಿತ್ತು. ಸಂವಿಧಾನವನ್ನು ಬುಡಮೇಲು ಮಾಡುವುದಕ್ಕಾಗಿ ತುರ್ತು ಪರಿಸ್ಥಿತಿ ಹೇರಿದ್ದ ಆಗಿನ ಸಂದರ್ಭವನ್ನು ಬಳಸಿಕೊಳ್ಳುವುದು ಅದರ ಬೂಟಾಟಿಕೆ ಮತ್ತು ರಾಜಕೀಯ ಅವಕಾಶವಾದಿತನವನ್ನು ತೋರಿಸುತ್ತದೆ
ಪಿಣರಾಯಿ ವಿಜಯನ್ ಕೇರಳ ಮುಖ್ಯಮಂತ್ರಿ
ನಾಗ್ಪುರದಲ್ಲಿ (ಆರ್‌ಎಸ್‌ಎಸ್‌ ಕೇಂದ್ರ ಕಚೇರಿ) ಮುದ್ರಿತವಾದದ್ದು ಕಾರ್ಯರೂಪಕ್ಕೆ ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ನೀವು ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳನ್ನು ಓದಬೇಕು. ಸಮಾಜವಾದ ಮತ್ತು ಜಾತ್ಯತೀತ ಮೌಲ್ಯಗಳು ಸಂವಿಧಾನದ ಅವಿಭಾಜ್ಯ ಭಾಗಗಳೇ ಆಗಿವೆ. ಬಹುಶಃ ಈ ಬಗ್ಗೆ ಅವರು ಓದಿಲ್ಲ
ಮನೋಜ್‌ಕುಮಾರ್‌ ಝಾ ಆರ್‌ಜೆಡಿ ಸಂಸದ
ತ್ರಿವರ್ಣ ಧ್ವಜದ ಬದಲಾಗಿ ಕೇಸರಿ ಬಾವುಟವನ್ನು ಹಾರಿಸಬೇಕು ಎಂಬುದಾಗಿ ಕೇರಳದಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್‌ ಮುಖಂಡರೊಬ್ಬರು ಬೇಡಿಕೆ ಇಟ್ಟಿದ್ದರು. ಇದು ರಾಷ್ಟ್ರೀಯ ಚಿಹ್ನೆಗಳಿಗೆ ಅವರು ತೋರುವ ಅಗೌರವವನ್ನು ಬಹಿರಂಗಪಡಿಸಿದೆ. ಸಂವಿಧಾನದ ಮೂಲಭೂತ ಮೌಲ್ಯಗಳ ಮೇಲಿನ ಈ ನಿರಂತರ ದಾಳಿಗೆ ಅಚಲ ಪ್ರತಿರೋಧ ಒಡ್ಡುವುದು ಅಗತ್ಯ
ಜಾನ್‌ ಬ್ರಿಟ್ಟಾಸ್ ಸಿಪಿಎಂ ರಾಜ್ಯಸಭಾ ಸಂಸದ
  ಸಂವಿಧಾನವನ್ನು ಬುಡಮೇಲು ಮಾಡಬೇಕು ಹಾಗೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದು ಆರ್‌ಎಸ್‌ಎಸ್‌ನ ಬಹುದಿನದ ಗುರಿ. ದತ್ತಾತ್ತೇಯ ಹೊಸಬಾಳೆ ಅವರ ಹೇಳಿಕೆ ಈ ಪಿತೂರಿಯನ್ನು ಬಹಿರಂಗಪಡಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ಆರ್‌ಎಸ್‌ಎಸ್‌ ಈಗ ಸಂವಿಧಾನದಲ್ಲಿನ ಮೂಲಭೂತ ತತ್ವಗಳನ್ನು ತೆಗೆದುಹಾಕಲು ಸಲಹೆ ನೀಡುತ್ತಿದೆ.
ಸಿಪಿಎಂ ಪಾಲಿಟ್‌ ಬ್ಯುರೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT