ನವದೆಹಲಿ: ಆಯುಷ್ಮಾನ್ ಭಾರತ ಯೋಜನೆ ಬಹುದೊಡ್ಡ ಹಗರಣ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಕೇಂದ್ರ ಸರ್ಕಾರದೊಂದಿಗೆ ದೆಹಲಿ ಸರ್ಕಾರ ಒಪ್ಪಂದ ಮಾಡಿಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ನೀಡಿದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬೆನ್ನಲ್ಲೇ ಕೇಜ್ರಿವಾಲ್ ಹೀಗೆ ಹೇಳಿದ್ದಾರೆ.
.ಕೇಜ್ರಿವಾಲ್ ಎದುರು ಶೀಲಾ ದೀಕ್ಷಿತ್ ಮಗ ಕಣಕ್ಕೆ; ಸೋಮವಾರ ರಾಹುಲ್ ಗಾಂಧಿ ಪ್ರಚಾರ.
ದೆಹಲಿಯಲ್ಲಿ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಅದೊಂದು ನಕಲಿ ಯೋಜನೆ ಎಂದು ಸುಪ್ರೀಂ ಕೋರ್ಟ್ ಖಚಿತಪಡಿಸಿದ್ದು ನನಗೆ ಸಂತೋಷ ತಂದಿದೆ. ಆಯುಷ್ಮಾನ್ ಭಾರತ್ ಯೋಜನೆಯು ದೇಶದ ಅತಿದೊಡ್ಡ ಹಗರಣ. ಕೇಂದ್ರ ಸರ್ಕಾರ ಬದಲಾಗಿ, ತನಿಖೆ ನಡೆಸಿದ್ದೇ ಆದಲ್ಲಿ ಆಯುಷ್ಮಾನ್ ಭಾರತ ಎಷ್ಟು ದೊಡ್ಡ ಹಗರಣ ಎಂಬುದು ಜನರಿಗೆ ತಿಳಿಯಲಿದೆ’ ಎಂದು ಅವರು ಹೇಳಿದ್ದಾರೆ.
.ದೆಹಲಿ ಮೆಟ್ರೊದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಕೋರಿ PMಗೆ ಕೇಜ್ರಿವಾಲ್ ಪತ್ರ.
ಆಯುಷ್ಮಾನ್ ಭಾರತ ಯೋಜನೆ ಸಂಬಂಧ ಜ.5ರ ಒಳಗಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಜೊತೆ ದೆಹಲಿಯ ಎಎಪಿ ಸರ್ಕಾರವು ಒಡಂಬಡಿಕೆ ಮಾಡಿಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಇದಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಇದೇ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಮೆಟ್ರೊದಲ್ಲಿ ಶೇ 50 ರಿಯಾಯಿತಿ ನೀಡುವ ಘೋಷಣೆಯನ್ನೂ ಮಾಡಿದರು.
.ಕೇಜ್ರಿವಾಲ್ ಬಂಧನ ಕಾನೂನು ಬಾಹಿರ; ಮೋದಿ, ಶಾ ಕ್ಷಮೆ ಯಾಚಿಸಬೇಕು: ಸಂಜಯ್ ಸಿಂಗ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.