ನವದೆಹಲಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಜ ಬಣ್ಣ ಬಯಲಾಗಿದ್ದು, ವಾಲ್ಮೀಕಿ ಹಗರಣ ಹಾಗೂ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಬಿಡಿಎನಲ್ಲಿ ರಿಡೂ ಮಾಡಿ ಸಿಲುಕಿಕೊಂಡಿದ್ದರು. ಆಗ ಕೆಂಪಣ್ಣ ಆಯೋಗ ರಚನೆ ಮಾಡಿ ಪ್ರಕರಣ ಮುಚ್ಚಿ ಹಾಕಿದರು. ಈ ಮಧ್ಯೆ ಮಂಡ್ಯದಲ್ಲಿ ಮುಡಾ ಹಗರಣ ಆಯಿತು. ಆಗ ಸಿದ್ದರಾಮಯ್ಯ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಟ್ಟರು. ಈಗ ಮೈಸೂರಿನಲ್ಲಿ ಮುಡಾ ಹಗರಣ ಆಗಿದೆ. ಅದನ್ನು ಯಾಕೆ ಸಿಬಿಐಗೆ ವಹಿಸಿಲ್ಲ’ ಎಂದು ಪ್ರಶ್ನಿಸಿದರು.

‘ಮಂಡ್ಯದಲ್ಲಿ ನಡೆದ ಅಕ್ರಮದ ಆರೋಪ ಪ್ರತಿಪಕ್ಷದವರ ಮೇಲೆ ಇತ್ತು ಎಂಬ ಕಾರಣಕ್ಕೆ ಸಿಬಿಐಗೆ ವಹಿಸಿದರು. ಮೈಸೂರಿನ ಮುಡಾದಲ್ಲಿ ನಡೆದ ಹಗರಣದಲ್ಲಿ ನಿಮ್ಮ ಹೆಸರಿದೆ ಎಂಬ ಕಾರಣಕ್ಕೆ ತನಿಖೆಗೆ ಆಯೋಗ ರಚನೆ ಮಾಡಿದ್ದೀರಿ. ರಾಜ್ಯದಲ್ಲಿ ಯಾವ ನ್ಯಾಯಾಂಗ ಆಯೋಗ ಯಾವ ಹಗರಣವನ್ನು ಬಯಲಿಗೆಳೆದಿದೆ’ ಎಂದು ಅವರು ಪ್ರಶ್ನಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ರಾಜ್ಯದಲ್ಲಿ ಬಹುದೊಡ್ಡ ಹಗರಣಗಳು ನಡೆದಿವೆ. ಆದರೆ, ಈ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೌನ ತಾಳಿದ್ದಾರೆ. ಅವರ ಜೇಬಿಗೆ ಹೋಗಿರುವ ಹಣವೆಷ್ಟು’ ಎಂದು ಪ್ರಶ್ನಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ಹೈಕಮಾಂಡ್ಗೆ ₹150 ಕೋಟಿ ಕೊಡಬೇಕಿದೆ. ಹೀಗಾಗಿ, ಸರ್ಕಾರ ಹಲವು ಹಗರಣಗಳಲ್ಲಿ ಭಾಗಿಯಾಗಿದೆ. ದಲಿತರ ಹಾಗೂ ಹಿಂದುಳಿದವರ ಪರ ಎಂದು ಬಿಂಬಿಸಿಕೊಂಡಿದ್ದ ಕಾಂಗ್ರೆಸ್ನ ಮುಖವಾಡ ಕಳಚಿ ಬಿದ್ದಿದೆ’ ಎಂದು ವಾಗ್ದಾಳಿ ನಡೆಸಿದರು.

ಸುಧಾಕರ್, ಕೋಟ ಗೈರು: ಪ್ರತಿಭಟನೆಗೆ ಬಿಜೆಪಿ ಸಂಸದರಾದ ಕೆ.ಸುಧಾಕರ್, ಕೋಟ ಶ್ರೀನಿವಾಸ ಪೂಜಾರಿ ಹಾಗೂ ತೇಜಸ್ವಿ ಸೂರ್ಯ ಗೈರುಹಾಜರಾಗಿದ್ದರು.

ಕೋವಿಡ್ ಹಗರಣದಲ್ಲಿ ಸುಧಾಕರ್ ಹಾಗೂ ಭೋವಿ ನಿಗಮದ ಅಕ್ರಮದಲ್ಲಿ ಕೋಟ ಭಾಗಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರು ಸದನದಲ್ಲಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.