ನವದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಸಂಚುಕೋರ ಜಸೀರ್ ಬಿಲಾಲ್ ವಾನಿಯನ್ನು ದೆಹಲಿ ನ್ಯಾಯಾಲಯವು 10 ದಿನಗಳ ಕಾಲ ಎನ್ಐಎ ವಶಕ್ಕೆ ಒಪ್ಪಿಸಿದೆ.

ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ವಶಕ್ಕೆ ನೀಡುವಂತೆ ಕೋರಿ ಎನ್ಐಎ ಅಧಿಕಾರಿಗಳು ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಅಂಜು ಬಜಾಜ್ ಚಂದನಾ ಅವರ ಮುಂದೆ ಮನವಿ ಮಾಡಿದರು.

ಅನಂತನಾಗ್ ಜಿಲ್ಲೆಯ ಕಾಜಿಗುಂಡ್ನ ನಿವಾಸಿಯಾದ ವಾನಿಯನ್ನು ಕಳೆದ ಸೋಮವಾರ ಶ್ರೀನಗರದಲ್ಲಿ ಬಂಧಿಸಲಾಗಿತ್ತು. ಭಯೋತ್ಪಾದಕ ದಾಳಿ ನಡೆಸಲು ತಾಂತ್ರಿಕ ನೆರವು ಒದಗಿಸಿದ್ದ ಆರೋಪ ಈತನ ಮೇಲಿದೆ. ದಾಳಿಗೆ ರಾಕೆಟ್ಗಳ ನಿರ್ಮಾಣಕ್ಕೆ ಯತ್ನ ಹಾಗೂ ಡ್ರೋನ್ಗಳ ಪರಿವರ್ತನೆಗೂ ಮುಂದಾಗಿದ್ದ. ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ನಡೆಸಿದ್ದ ಉಮರ್–ಉನ್–ನಬಿಗೂ ಸಹಕರಿಸಿದ್ದ’ ಎಂದು ಎನ್ಐಎ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
.Delhi Red Fort Blast: ಶ್ರೀನಗರದಲ್ಲಿ ಸಹ ಸಂಚುಕೋರನ ಬಂಧಿಸಿದ ಎನ್ಐಎ.Delhi Red Fort Blast: ಪ್ರಮುಖ ಸಂಚುಕೋರ ಅಮೀರ್ 10 ದಿನ ಎನ್ಐಎ ಕಸ್ಟಡಿಗೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.