ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನವೇ ಪ್ರಧಾನಿ ಮೋದಿ ಅವರ ಇಂಥ ಹೇಳಿಕೆ ಬೂಟಾಟಿಕೆಯಲ್ಲದೆ ಮತ್ತೇನೂ ಅಲ್ಲ. ದೊಡ್ಡ ನಾಟಕಕಾರರೇ ನಾಟಕದ ಬಗ್ಗೆ ಮಾತನಾಡುತ್ತಾರೆ
ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ)
ಸಂಸತ್ತಿನಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನಾಟಕವಲ್ಲ; ಪ್ರಜಾಸತ್ತಾತ್ಮಕ ಚರ್ಚೆಗೆ ಅವಕಾಶ ನೀಡದಿರುವುದೇ ನಾಟಕ
ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ನಾಯಕಿ
ಎಸ್‌ಐಆರ್ ಕುರಿತ ಚರ್ಚೆಗೆ ಸರ್ಕಾರವು ಸಿದ್ಧವಿದೆ. ಆದರೆ, ಹೇಳಿದ ಸಮಯಕ್ಕೇ ಚರ್ಚೆ ಆಗಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿಯುವುದು ಸರಿಯಲ್ಲ
ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ
ಒಂದೇ ಮಸೂದೆಗೆ ಅಂಗೀಕಾರ:
ಆಡಳಿತ ಮತ್ತು ವಿಪಕ್ಷಗಳ ಜಟಾಪಟಿ ಮಧ್ಯೆಯೇ ಮಣಿಪುರದಲ್ಲಿ ಜಿಎಸ್‌ಟಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಯಿತು. 12 ನಿಮಿಷಗಳ ಶೂನ್ಯ ಅವಧಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಅಬಕಾರಿ ತಿದ್ದುಪಡಿ ಮಸೂದೆ 2025 ಮತ್ತು ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆ ಸೆಸ್ ಮಸೂದೆ 2025 ಮಂಡಿಸಿದರು. ಇವರೆಡು ಮಸೂದೆಗಳು ಮುಖ್ಯವಾಗಿ ‘ಅನಾರೋಗ್ಯಕಾರಿ ಸರಕು’ಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿವೆ.