ಚೆನ್ನೈ : ಮದುರೈನಿಂದ ಚೆನ್ನೈಗೆ ಬರುತ್ತಿದ್ದ ಇಂಡಿಗೊ ವಿಮಾನದ ಕಾಕ್ಪೀಟ್ ವಿಂಡ್ಶೀಲ್ಡ್ ಬಿರುಕುಬಿಟ್ಟಿರುವುದು ಪತ್ತೆಯಾಗಿ, ಪ್ರಯಾಣದ ನಡುವೆಯೇ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಆದರೆ, ಸಿಬ್ಬಂದಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ದುರಂತವೊಂದನ್ನು ತಪ್ಪಿಸಿದ್ದಾರೆ.

74 ಮಂದಿ ಪ್ರಯಾಣಿಕರಿದ್ದ ಇಂಡಿಗೊ ವಿಮಾನವು ಶುಕ್ರವಾರ ರಾತ್ರಿ 10 ಗಂಟೆ 7ನಿಮಿಷಕ್ಕೆ ಮದುರೈನಿಂದ ಹೊರಟು 11.30ಕ್ಕೆ ಚೆನ್ನೈಗೆ ಬರಬೇಕಿತ್ತು. ಈ ನಡುವೆ ವಿಂಡ್ಶೀಲ್ಡ್ನಲ್ಲಿ ಬಿರುಕು ಮೂಡಿರುವುದನ್ನು ಪೈಲಟ್ ಗಮನಿಸಿ, ಏರ್ ಟ್ರಾಫಿಕ್ ಕಂಟ್ರೋಲರ್ಗೆ (ಎಟಿಸಿ) ಮಾಹಿತಿ ನೀಡಿದ್ದಾರೆ.

ತಕ್ಷಣವೇ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ತುರ್ತು ಭೂ ಸ್ಪರ್ಶಕ್ಕೆ ಸಿದ್ದತೆ ನಡೆಸಿದ್ದಾರೆ. ಅದರಂತೆ ರಾತ್ರಿ ನಿಗದಿತ ಸಮಯಕ್ಕಿಂತಲೂ 18 ನಿಮಿಷ ಮುಂಚಿತವಾಗಿ, 11.12ಕ್ಕೆ ಪ್ರತ್ಯೇಕ ಸ್ಥಳದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿ, ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ.

ವಿಂಡ್ಶೀಲ್ಡ್ ಬಿರುಕಿಗೆ ಕಾರಣ ಪತ್ತೆ ಮಾಡಿ, ಎಲ್ಲ ಸುರಕ್ಷತಾ ಕ್ರಮಗಳನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಸಂಪೂರ್ಣ ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.