ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಇಸ್ರೊ ಮುಖ್ಯಸ್ಥ

Published 28 ಸೆಪ್ಟೆಂಬರ್ 2023, 9:42 IST
Last Updated 28 ಸೆಪ್ಟೆಂಬರ್ 2023, 9:44 IST
ಅಕ್ಷರ ಗಾತ್ರ

ಗುಜರಾತ್‌: ಚಂದ್ರಯಾನ–3ರ ಯಶಸ್ಸಿನ ಬಳಿಕ ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್‌ ಅವರು ಗುಜರಾತ್‌ನ ಸೌರಾಷ್ಟ್ರದಲ್ಲಿರುವ ಆದಿ ಜ್ಯೋತಿರ್ಲಿಂಗ ಶ್ರೀ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸಾಂಪ್ರದಾಯಿಕವಾಗಿ ಕಚ್ಚೆ ಪಂಚೆ ಮತ್ತು ಶಲ್ಯ ಧರಿಸಿ ದೇವಾಲಯಕ್ಕೆ ಭೇಟಿ ನೀಡಿದ ಸೋಮನಾಥ್‌ ಅವರು ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ ನಂತರ ಆರತಿ ಬೆಳಗಿದ್ದಾರೆ. ಬಳಿಕ ಸೋಮನಾಥ ಅವರಿಗೆ ದೇವಾಲಯದ ಆಡಳಿತ ಮಂಡಳಿ ಜ್ಯೋತಿರ್ಲಿಂಗ ನೀಡಿ ಗೌರವಿಸಿದೆ.

ಇದನ್ನೂ ಓದಿ: ISRO | Chandrayaan-3: ಚಂದ್ರಯಾನ 3ರ ಪಯಣದ ಹಾದಿ

ಈ ಹಿಂದೆ ಚಂದ್ರಯಾನಕ್ಕೂ ಮುನ್ನ ಸೋಮನಾಥ್‌ ಅವರನ್ನು ಒಳಗೊಂಡ ಇಸ್ರೊ ಅಧಿಕಾರಿಗಳ ತಂಡ ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿತ್ತು.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಈಗ ಮಂಗಳನ ಮೇಲ್ಮೈಯಲ್ಲಿ ಇಳಿಯುವುದರ ಜೊತೆಗೆ ಮಾನವಸಹಿತ ಬಾಹ್ಯಾಕಾಶ ಕಾರ್ಯಾಚರಣೆಗೆ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT