ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್ 9ನೇ ಬಾರಿ ಮುಖ್ಯಮಂತ್ರಿ: ಪ್ರಮಾಣವಚನ ವರ್ಷಗಳ ಟೈಮ್‌ಲೈನ್‌ ಇಲ್ಲಿದೆ...

Published 28 ಜನವರಿ 2024, 16:03 IST
Last Updated 28 ಜನವರಿ 2024, 16:03 IST
ಅಕ್ಷರ ಗಾತ್ರ

ಪಟ್ನಾ: ಜೆಡಿ(ಯು) ನಾಯಕ ನಿತೀಶ್ ಕುಮಾರ್ 9ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಇಂದು (ಭಾನುವಾರ) ಪ್ರಮಾಣವಚನ ಸ್ವೀಕರಿಸಿದರು.

ಜನತಾ ಪಕ್ಷದ ಮೂಲಕ ನಿತೀಶ್ ಕುಮಾರ್ ರಾಜಕೀಯ ಜೀವನ ಆರಂಭಿಸಿದರು. 1985ರಲ್ಲಿ ಜನತಾ ಪರಿವಾರದ ಮೂಲಕ ಶಾಸಕರಾದರು. 1998ರಲ್ಲಿ ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸೇರಿ ಕೇಂದ್ರ ಸಚಿವರಾದರು. ನಂತರದ ದಿನಗಳಲ್ಲಿ ಬಿಹಾರದ ಮುಖ್ಯಮಂತ್ರಿಯಾದರು.

ಅವರು ಯಾವ ಯಾವ ವರ್ಷಗಳಲ್ಲಿ ಮುಖ್ಯಮಂತ್ರಿಯಾದರು ಎಂಬ ಮಾಹಿತಿ ಇಲ್ಲಿದೆ...

  • 2000 (ಮೊದಲ ಬಾರಿ ಮುಖ್ಯಮಂತ್ರಿ; ಮಾರ್ಚ್‌ 3, 2000 – ಮಾರ್ಚ್‌ 10, 2000): ಮಾರ್ಚ್ 3ರಂದು ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಜೆಡಿಯುಗೆ ಬಿಜೆಪಿ ಬೆಂಬಲ ನೀಡಿತ್ತು. ಆದರೆ, ಬಹುಮತ ಇರದ ಹಿನ್ನೆಲೆಯಲ್ಲಿ ಏಳು ದಿನಗಳಲ್ಲಿ ಅವರು ರಾಜೀನಾಮೆ ನೀಡಬೇಕಾಯಿತು.

  • 2005 (ಎರಡನೇ ಬಾರಿ ಮುಖ್ಯಮಂತ್ರಿ; ನವೆಂಬರ್‌ 24, 2005 – ನವೆಂಬರ್ 24, 2010 ): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ಬಹುಮತ ಗಳಿಸಿತು. ನಿತೀಶ್ ಕುಮಾರ್ ಎರಡನೇ ಬಾರಿ ಮುಖ್ಯಮಂತ್ರಿ ಆದರು.

  • 2010 (ಮೂರನೇ ಬಾರಿ ಮುಖ್ಯಮಂತ್ರಿ; ನವೆಂಬರ್‌ 26, 2010 – ಮೇ 17, 2014): 2010ರ ಚುನಾವಣೆಯಲ್ಲಿ ಜೆಡಿಯು–ಬಿಜೆಪಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದಿತು. ಆಗ ಅವರು ಮೂರನೇ ಸಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ 40 ಕ್ಷೇತ್ರಗಳ ಪೈಕಿ ಗೆದ್ದಿದ್ದು ಕೇವಲ 2 ಮಾತ್ರ. ನೈತಿಕ ಹೊಣೆ ಹೊತ್ತು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

  • 2015 (ನಾಲ್ಕನೇ ಬಾರಿ ಮುಖ್ಯಮಂತ್ರಿ; ಫೆಬ್ರುವರಿ 22, 2015 – ನವೆಂಬರ್‌ 19, 2015): ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಂತೆ ಸಿ.ಎಂ ಮಾಂಝಿ ಅವರಿಂದ ರಾಜೀನಾಮೆ ಪಡೆದು ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರು.

  • 2017 (ಐದನೇ ಬಾರಿ ಮುಖ್ಯಮಂತ್ರಿ; ನವೆಂಬರ್‌ 20, 2015 – ಜುಲೈ 26, 2017): ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಕಾಂಗ್ರೆಸ್ ಹಾಗೂ ಆರ್​ಜೆಡಿ ಜೊತೆ ಮೈತ್ರಿಕೂಟ ರಚನೆ ಮಾಡಿಕೊಂಡು ಚುನಾವಣೆಯಲ್ಲಿ ಬಹುಮತ ಪಡೆಯಿತು. ಆಗ ಫೆಬ್ರುವರಿಯಲ್ಲಿ ಐದನೇ ಬಾರಿ ಮುಖ್ಯಮಂತ್ರಿಯಾದರು. ಆರ್‌ಜೆಡಿಯ ತೇಜಸ್ವಿ ಉಪಮುಖ್ಯಮಂತ್ರಿಯಾದರು. 

  • 2017 (ಆರನೇ ಬಾರಿ ಮುಖ್ಯಮಂತ್ರಿ; ಜುಲೈ 27, 2017 – ನವೆಂಬರ್‌ 2020): ಉಪಮುಖ್ಯಮಂತ್ರಿ ತೇಜಸ್ವಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಾಗ ಕಾಂಗ್ರೆಸ್ ಹಾಗೂ ಆರ್​ಜೆಡಿ ಪಕ್ಷಗಳ ಮೈತ್ರಿಯಿಂದ ಹೊರಬಂದು ಮತ್ತೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದರು. ಆಗ 6ನೇ ಬಾರಿ ಮುಖ್ಯಮಂತ್ರಿಯಾದರು.

  • 2020 (ಏಳನೇ ಬಾರಿ ಮುಖ್ಯಮಂತ್ರಿ; ನವೆಂಬರ್‌ 16, 2020 – 2022): 2020ರಲ್ಲಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದು ಏಳನೇ ಬಾರಿ ಮುಖ್ಯಮಂತ್ರಿಯಾದರು. 

  • 2022 (ಎಂಟನೇ ಬಾರಿ ಮುಖ್ಯಮಂತ್ರಿ; ಆಗಸ್ಟ್‌ 9, 2022 - ಜನವರಿ 28, 2024): ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಮಹಾಘಟಬಂಧನ್ ಸೇರಿ ಎಂಟನೇ ಬಾರಿ ಮುಖ್ಯಮಂತ್ರಿಯಾದರು.

  • 2024 (ಒಂಬತ್ತನೇ ಬಾರಿ ಮುಖ್ಯಮಂತ್ರಿ; ಜನವರಿ 28, 2024): ಈಗ ಮಹಾಘಟಬಂಧನ್ ಮೈತ್ರಿಕೂಟದಿಂದ ಮತ್ತೊಮ್ಮೆ ಹೊರಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವ ಮೂಲಕ 9ನೇ ಬಾರಿ ಸಿ.ಎಂ ಆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT