ಅಮೆರಿಕವು ರಾತ್ರಿಯೆಲ್ಲಾ ನಡೆಸಿದ ಮಾತುಕತೆಯ ಕಾರಣದಿಂದಾಗಿ ಸಂಪೂರ್ಣವಾಗಿ ಹಾಗೂ ತತ್‌ಕ್ಷಣದಿಂದಲೇ ಸಂಘರ್ಷ ಕೊನೆಗಾಣಿಸಲು ಭಾರತ–ಪಾಕ್‌ಒಪ್ಪಿಗೆ ಸೂಚಿಸಿವೆ ಎಂದು ಘೋಷಿಸುವುದಕ್ಕೆ ಅತೀವ ಖುಷಿಯಾಗುತ್ತಿದೆ. ವಿವೇಕ ಮತ್ತು ಬುದ್ಧಿಮತ್ತೆಯಿಂದ ವರ್ತಿಸಿದ್ದಕ್ಕೆ ಎರಡೂ ದೇಶಗಳನ್ನು ಅಭಿನಂದಿಸುತ್ತೇನೆ
ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಕಳೆದ 48 ಗಂಟೆಗಳಲ್ಲಿ ನಾನು ಮತ್ತು ಉಪಾಧ್ಯಕ್ಷ ವ್ಯಾನ್ಸ್ ಅವರು ಭಾರತದ ಪ್ರಧಾನಿ ಮೋದಿ, ಪಾಕಿಸ್ತಾನದ ಪ್ರಧಾನಿ ಶರೀಫ್ ಸೇರಿದಂತೆ ಆಯಾ ದೇಶಗಳ ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಮಾತುಕತೆ ನಡೆಸಿದೆವು. ಶಾಂತಿ ಮಾರ್ಗ ಆಯ್ಕೆ ಮಾಡಿದ ಎರಡೂ ದೇಶಗಳ ಪ್ರಧಾನಿಗಳ ನಿಲುವು ಅಭಿನಂದನಾರ್ಹ
ಮಾರ್ಕೊ ರುಬಿಯೊ,ಅಮೆರಿಕದ ವಿದೇಶಾಂಗ ಕಾರ್ಯದರ್ಶಿ
ಗುಂಡಿನ ದಾಳಿ ಮತ್ತು ಸೇವಾ ಕಾರ್ಯಾಚರಣೆಗಳನ್ನು ನಡೆಸದಿರಲು ಭಾರತ ಮತ್ತು ಪಾಕಿಸ್ತಾನ ಒಪ್ಪಂದ ಮಾಡಿಕೊಂಡಿವೆ. ಯಾವುದೇ ಸ್ವರೂಪದ ಭಯೋತ್ಪಾದನೆ ಮತ್ತು ಭಯೋತ್ಪಾದನಾ ಕೃತ್ಯಗಳ ಕುರಿತು ಭಾರತದ ನಿಲುವು ಯಾವಾಗಲೂ ಅಚಲ ಮತ್ತು ಈ ಬಗ್ಗೆ ರಾಜಿ ಇಲ್ಲ. ನಮ್ಮ ನಿಲುವು ಮುಂದೆಯೂ ಹೀಗೇ ಇರಲಿದೆ
ಎಸ್. ಜೈಶಂಕರ್, ಭಾರತದ ವಿದೇಶಾಂಗ ಸಚಿವ
ತಕ್ಷಣದಿಂದಲೇ ಜಾರಿಯಾಗುವಂತೆ ಪಾಕಿಸ್ತಾನ ಮತ್ತು ಭಾರತ ಸಂಘರ್ಷ ಶಮನಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ಎಂದಿಗೂ ಶಾಂತಿಗಾಗಿ ಮತ್ತು ದೇಶದ ಭದ್ರತೆಗಾಗಿ ಹೋರಾಡುತ್ತಲೇ ಬಂದಿದೆ. ಈ ಹೋರಾಟದಲ್ಲಿ ಎಂದಿಗೂ ನಾವು ನಮ್ಮ ಸಾರ್ವಭೌಮತ್ವ ಮತ್ತು ದೇಶದ ಸಮಗ್ರತೆಯ ಕುರಿತು ರಾಜಿ ಮಾಡಿಕೊಂಡಿಲ್ಲ