ಬೆಂಗಳೂರು: ಬೆಸ್ಕಾಂ ಮತ್ತು ಇತರ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಟೆಂಡರ್ನಲ್ಲಿ ಸುಮಾರು ₹15,568 ಕೋಟಿ ಅವ್ಯವಹಾರ ನಡೆದಿದೆ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಆರೋಪಿಸಿದ್ದಾರೆ.

ಈ ಅವ್ಯವಹಾರದ ಗಾತ್ರ ಇನ್ನೂ ದೊಡ್ಡದೇ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.

ಎಸ್ಕಾಂಗಳು ಕೆಇಆರ್ಸಿ ನಿಯಮಗಳಿಗೆ ಬದ್ಧವಾಗಿರಬೇಕು. ಕೆಇಆರ್ಸಿ ನಿಯಮಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ. ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಬಹುದೇ ಹೊರತು ಕಾಯಂ ಗ್ರಾಹಕರು, ಹೊಸ ಗ್ರಾಹಕರಿಗೆ ಈ ಸ್ಮಾರ್ಟ್ ಮೀಟರ ಅನ್ನು ಕಡ್ಡಾಯ ಮಾಡುವಂತಿಲ್ಲ. ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ನಿಯಮಾವಳಿ ಪ್ರಕಾರವೂ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ ಎಂದರು.

ಕೆಟಿಪಿಪಿ ಕಾಯ್ದೆಯಡಿ ಬಿಡ್ ಸಾಮರ್ಥ್ಯವನ್ನು ಟೆಂಡರ್ನಲ್ಲಿ ತಿಳಿಸಿಲ್ಲ. ಅದು ₹6,800 ಕೋಟಿ ಇರಬೇಕಿತ್ತು. ಬಿಡ್ಡಿಂಗ್ ಸಾಮರ್ಥ್ಯ ಇಲ್ಲದಿರುವುದೇ ಮೊದಲ ಹಗರಣ. ಕೆಟಿಪಿಪಿ ಕಾಯ್ದೆ ಪ್ರಕಾರ ವ್ಯವಹಾರವು ₹1,920 ಕೋಟಿ ಇರಬೇಕಾಗಿತ್ತು. ಟೆಂಡರ್ನಲ್ಲಿ ಬರೀ ₹107 ಕೋಟಿ ಎಂದು ನಮೂದಿಸಿದ್ದಾರೆ. ಕಪ್ಪುಪಟ್ಟಿಗೆ ಸೇರಿದ ಕಂಪೆನಿಗೆ ಕೊಡುವುದಕ್ಕೆ ಅವಕಾಶ ಇಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಕಪ್ಪುಪಟ್ಟಿಗೆ ಸೇರಿರುವ ಬಿಸಿಐಟಿಎಸ್ ಕಂಪನಿಯನ್ನು ಪರಿಗಣಿಸಿದ್ದಾರೆ ಎಂದು ಅವರು ದೂರಿದರು.

ಈ ಯೋಜನೆಯ ಅಂದಾಜು ವೆಚ್ಚ ₹571 ಕೋಟಿ ಎಂದು ತಿಳಿಸಿ ನಂತರ ತಿದ್ದುಪಡಿ ಮಾಡಿದ್ದಾರೆ. ಟೆಂಡರ್ನ ಒಟ್ಟು ಮೊತ್ತ ತಿಳಿಸದೇ ಟೆಂಡರ್ ಕರೆಯಲಾಗಿದೆ ಎಂದು ಅವರು ಟೀಕಿಸಿದರು.

ಕೆಟಿಪಿಪಿ ಕಾಯ್ದೆಯೂ ಇಲ್ಲ; ಕೇಂದ್ರ ಸರಕಾರದ ನಿಯಮಾವಳಿಯನ್ನೂ ಜಾರಿ ಮಾಡಿಲ್ಲ; ಸ್ಮಾರ್ಟ್ ಮೀಟರ್ ತಯಾರಿಸದ, ಅಳವಡಿಸದ, ಕೇವಲ ಡಿಜಿಟಲ್ ಮೀಟರ್ ಅಳವಡಿಸಿದ ವ್ಯಕ್ತಿಯನ್ನು ಪರಿಗಣಿಸಿದ್ದಾರೆ. ಪ್ರಿಬಿಡ್ನಲ್ಲಿ ರಾಜಶ್ರೀ ಯಾಕೆ ಬಂದಿಲ್ಲ? ಅರ್ಹರನ್ನು ಹೊರಗಿಟ್ಟು ಬರೀ ಫೋನ್ ತಯಾರಕರನ್ನು ಆಯ್ಕೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಕೇಂದ್ರ ಸರಕಾರದ ನಿಯಮಗಳ ಪ್ರಕಾರ 1 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸಿದ ಅನುಭವ ಇರಬೇಕು. ಅದನ್ನು ಬಿಟ್ಟು ಉತ್ಪಾದನೆಯೇ ಮಾಡದ 10 ಲಕ್ಷ ಸಾಮಾನ್ಯ ಮೀಟರ್ ಅಳವಡಿಕೆ ಮಾಡಿರುವುದನ್ನೇ ಮಾನದಂಡ ಮಾಡಿದ್ದಾರೆ. ಮೊದಲು ಟ್ರಾನ್ಸ್ಫಾರ್ಮರ್, ಫೀಡರ್ಗಳಿಗೆ ಇದನ್ನು ಅಳವಡಿಸಿ ಸಾಗಾಟದಲ್ಲಿ ಆಗುವ ನಷ್ಟವನ್ನು ತಿಳಿಯಬೇಕಿತ್ತು. ಬಳಿಕ ರಾಜ್ಯದ ಗ್ರಾಹಕರಿಗೆ ಇದನ್ನು ಅಳವಡಿಸಬೇಕಿತ್ತು. ಕೇಂದ್ರದ ಆರ್ಡಿಎಸ್ಎಸ್ ಅಡಿ ಸಿಗುವ ₹3 ಸಾವಿರ ಕೋಟಿಯನ್ನು ಬಳಸಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಆಳ್ವಿಕೆಯ ಹಿಮಾಚಲ ಪ್ರದೇಶದಲ್ಲಿ, ತೆಲಂಗಾಣ, ಕೇರಳದಲ್ಲಿ ಕಡಿಮೆ ಮೊತ್ತಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಒಂದೊಂದು ಮೀಟರ್ಗೆ ₹ 17 ಸಾವಿರ ಆಗುತ್ತದೆ. ಅದೇ ಬೇರೆ ರಾಜ್ಯದಲ್ಲಿ ಪ್ರತಿ ಮೀಟರ್ಗೆ ₹7,740 ವೆಚ್ಚ ಮಾಡಲಾಗಿದೆ. ಬೆಸ್ಕಾಂ ಮತ್ತಿತರ ಎಸ್ಕಾಂಗೆ ಹೋಲಿಸಿದರೆ ಇದು ₹9,260 ಹೆಚ್ಚು ಎಂದು ತಿಳಿಸಿದರು.

ಬಿಹಾರದಲ್ಲೂ ಇದೇ ಮಾದರಿಯ ಹಗರಣ ನಡೆದಿದ್ದು, ಐಎಎಸ್ ಅಧಿಕಾರಿ, ಸಚಿವರು ಬಂಧಿತರಾಗಿದ್ದಾರೆ ಎಂದು ಅವರು ಗಮನ ಸೆಳೆದರು.

ಸ್ಮಾರ್ಟ್ ಮೀಟರ್, ಸಾಫ್ಟ್ವೇರ್, ಔಟ್ಲೆಟ್, ಸಿಬ್ಬಂದಿ ಸಂಬಳವನ್ನು ವೆಚ್ಚವಾಗಿ ತೋರಿಸಿದ್ದಾರೆ. ಕೆಟಿಪಿಪಿ ಕಾಯ್ದೆಯನ್ನು ಎಲ್ಲ ಹಂತದಲ್ಲೂ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಇಂಧನ ಇಲಾಖೆ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಏನೂ ತಪ್ಪಾಗಿಲ್ಲ ಎಂದಿದ್ದಾರೆ. ಸ್ಮಾರ್ಟ್ ಮೀಟರ್ ಮತ್ತು ಇದರ ಸಾಫ್ಟ್ವೇರ್ ವಿಷಯದಲ್ಲಿ ಭ್ರಷ್ಟಾಚಾರದ ಕುರಿತು ದಾಖಲೆ ಸಮೇತ ತಿಳಿಸುತ್ತೇನೆ. ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಅವರು, ಇಂಧನ ಸಚಿವರು ಉತ್ತರ ನೀಡುವುದಾಗಿ ಹೇಳಿದ್ದರು. ಈವರೆಗೂ ಉತ್ತರ ಕೊಟ್ಟಿಲ್ಲ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಆರ್ ವಿಶ್ವನಾಥ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಅವರು ಭಾಗವಹಿಸಿದ್ದರು.

ಸ್ಮಾರ್ಟ್ ಮೀಟರ್ ಭಾರಿ ಅಕ್ರಮ: ನಿಖಿಲ್

‘ವಿದ್ಯುತ್ ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿದೆ. ಇದು ₹ 15,000 ಕೋಟಿ ಮೊತ್ತದ ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಗುತ್ತಿಗೆ ನೀಡಲಾಗಿದೆ. ರಾಜಶ್ರೀ ಎಲೆಕ್ಟ್ರಿಕ್ ಕಂಪನಿಗೆ ಅರ್ಹತೆಯೇ ಇಲ್ಲ. ಉತ್ತರ ಪ್ರದೇಶದಲ್ಲಿ ಈ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಉಪಗುತ್ತಿಗೆ ಹೆಸರಿನಲ್ಲಿ ಅದೇ ಕಂಪನಿಗೆ ಅಕ್ರಮವಾಗಿ ಗುತ್ತಿಗೆಗೆ ನೀಡಲಾಗಿದೆ’ ಎಂದರು.

ಈಗ ನೀಡಿರುವ ಗುತ್ತಿಗೆ ಆದೇಶವನ್ನು ರದ್ದುಪಡಿಸಿ, ಪಾರದರ್ಶಕ ರೀತಿಯಲ್ಲಿ ಮರು ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
.ಸ್ಮಾರ್ಟ್ ಮೀಟರ್ | ₹7000 ಕೋಟಿ ಹಗರಣ: ಅಶ್ವತ್ಥನಾರಾಯಣ .ಬೆಸ್ಕಾಂ, ಸೆಸ್ಕ್ನಿಂದ ದೇಶದಲ್ಲಿಯೇ ಪ್ರಥಮ ಬಾರಿಗೆ ಸ್ಮಾರ್ಟ್ ಮೀಟರ್ ಜಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.