ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

CET-2025 | ಸಿಇಟಿ: ಸಿಬಿಎಸ್‌ಇ, ಬಾಲಕರೇ ಮೇಲುಗೈ

Published : 24 ಮೇ 2025, 22:41 IST
Last Updated : 24 ಮೇ 2025, 22:41 IST
ಫಾಲೋ ಮಾಡಿ
Comments
ಸಹಾಯವಾಣಿ ಸಂಖ್ಯೆ ದ್ವಿಗುಣ
‘ಕೆಇಎ ಕಚೇರಿಯಲ್ಲಿ ವಿದ್ಯಾರ್ಥಿಗಳ ಸಹಾಯವಾಣಿಗೆ ಐದು ಫೋನ್‌ಗಳಿದ್ದವು. ಈಗ ಆ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಎಲ್ಲ 10 ಫೋನ್‌ಗಳಲ್ಲಿ ಕರೆ ಸ್ವೀಕರಿಸಲು ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ವಾರದ ಎಲ್ಲ ದಿನಗಳೂ ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸಲಿದೆ’ ಎಂದರು.
ನೀಟ್‌ ಫಲಿತಾಂಶದ ನಂತರ ಕೌನ್ಸೆಲಿಂಗ್‌
‘ನೀಟ್‌ ಫಲಿತಾಂಶದ ನಂತರ ವೈದ್ಯಕೀಯ ಸೀಟು ಹಂಚಿಕೆಯ ಕೌನ್ಸೆಲಿಂಗ್‌ ದಿನಾಂಕ ನೋಡಿಕೊಂಡು ಸಿಇಟಿ ಸೀಟು ಹಂಚಿಕೆಗೆ ಕೌನ್ಸೆಲಿಂಗ್‌ ಆರಂಭಿಸಲಾಗುವುದು’ ಎಂದು ಸಚಿವ ಸುಧಾಕರ್‌ ಹೇಳಿದರು. ‘ಕೆಇಎ ಸೀಟು ಹಂಚಿಕೆ ಆರಂಭಿಸಿದ ನಂತರ ಕಾಮೆಡ್‌–ಕೆ ಪ್ರವೇಶ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ. ನೀಟ್‌ ಅಂಕಗಳ ಆಧಾರದಲ್ಲಿ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಲಾಗುವುದು’ ಎಂದರು.
ಅರ್ಹ ವಿದ್ಯಾರ್ಥಿಗಳ ಸಂಖ್ಯೆ ಕುಸಿತ
ಹಿಂದಿನ ವರ್ಷಕ್ಕೆ ಹೋಲಿಸಿದರೆ, ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. 2024ರ ಸಿಇಟಿ 2.75 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ಗೆ ಅರ್ಹತೆ ಪಡೆದಿದ್ದರು. ಈ ಬಾರಿ 2.62 ಲಕ್ಷಕ್ಕೆ ಕುಸಿದಿದೆ. ಅರ್ಹತೆ ಪಡೆದವರ ಸಂಖ್ಯೆ ಎಲ್ಲ ವಿಭಾಗಗಳಲ್ಲೂ ಕಡಿಮೆಯಾಗಿದೆ. ‘ದ್ವಿತೀಯ ಪಿಯು ವಿಜ್ಞಾನ ಉತ್ತೀರ್ಣತೆಯ ಪ್ರಮಾಣ ಕುಸಿತ ಇದಕ್ಕೆ ಮುಖ್ಯ ಕಾರಣ. ಕಳೆದ ವರ್ಷಕ್ಕೆ ಹೋಲಿಸಿದರೆ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇದು ಸಿಇಟಿ ಅರ್ಹತೆಯ ಮೇಲೂ ಪರಿಣಾಮ ಬೀರಿದೆ’ ಎಂದು ಸಚಿವ ಸುಧಾಕರ್‌ ಪ್ರತಿಕ್ರಿಯೆ ನೀಡಿದರು.
ವಿವಿಧ ವಿಭಾಗಗಳಲ್ಲಿ ರ‍್ಯಾಂಕ್ ಪಡೆದವರ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT