ಜೆರುಸಲೇಂ: ದಕ್ಷಿಣ ಗಾಜಾದ ಖಾನ್ ಯೂನಿಸ್ನಲ್ಲಿ ಇಸ್ರೇಲ್ ಯೋಧರಿದ್ದ ಶಸ್ತ್ರಸಜ್ಜಿತ ವಾಹನದ ಮೇಲೆ ಹಮಾಸ್ ಬಂಡುಕೋರರು ಮಂಗಳವಾರ ನಡೆಸಿದ ದಾಳಿಯಲ್ಲಿ ಏಳು ಯೋಧರು ಮೃತಪಟ್ಟಿದ್ದಾರೆ.

‘ದಾಳಿಕೋರರು ಸೇನೆಯ ವಾಹನದಲ್ಲಿ ಬಾಂಬ್ ಇರಿಸಿದ್ದರು. ಅದು ಸ್ಫೋಟಗೊಂಡ ಪರಿಣಾಮ ಯೋಧರು ಮೃತಪಟ್ಟಿದ್ದಾರೆ’ ಎಂದು ಇಸ್ರೇಲ್ ಸೇನೆಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ನಡೆದ ಘಟನೆಯು ಗಾಜಾದಲ್ಲಿ ಇಸ್ರೇಲ್ ಸೈನಿಕರನ್ನು ಗುರಿಯಾಗಿಸಿ ನಡೆದ ದೊಡ್ಡ ದಾಳಿಗಳಲ್ಲಿ ಒಂದಾಗಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ಜತೆಗಿನ ಸಂಘರ್ಷ ಆರಂಭವಾದಾಗಿನಿಂದ ಇಸ್ರೇಲ್ನ 860 ಯೋಧರು ಮೃತಪಟ್ಟಿದ್ದಾರೆ. ಇದರಲ್ಲಿ 400 ಸೈನಿಕರು ಹಮಾಸ್ ಜತೆ ಗಾಜಾದಲ್ಲಿ ನಡೆದ ಹೋರಾಟದಲ್ಲಿ ಬಲಿಯಾಗಿದ್ದಾರೆ.

‘ಗಾಜಾ ಪಟ್ಟಿಯ ಕಟ್ಟಡವೊಂದರಲ್ಲಿ ಇದ್ದ ಇಸ್ರೇಲ್ ಸೈನಿಕರ ಮೇಲೂ ದಾಳಿ ನಡೆಸಿದ್ದೇವೆ’ ಎಂದು ಹಮಾಸ್ನ ಮಿಲಿಟರಿ ವಿಭಾಗ ಅಲ್ ಖಸ್ಸಾಂ ಬ್ರಿಗೇಡ್ ತನ್ನ ಟೆಲಿಗ್ರಾಂ ಚಾನೆಲ್ನಲ್ಲಿ ಹೇಳಿದೆ.

‘ಯಾಸಿನ್–105’ ಕ್ಷಿಪಣಿ ಬಳಸಿ ಕಟ್ಟಡದ ಮೇಲೆ ದಾಳಿ ನಡೆಸಿದಾಗ ಕೆಲವು ಸೈನಿಕರು ಮೃತಪಟ್ಟು, ಮತ್ತೆ ಕೆಲವರು ಗಾಯಗೊಂಡಿದ್ದಾರೆ. ಅಲ್ ಖಸ್ಸಾಂ ಹೋರಾಟಗಾರರು ಆ ಬಳಿಕ ಮೆಷಿನ್ ಗನ್ ಬಳಸಿ ಸೈನಿಕರಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದೆ.

ಖಾನ್ ಯೂನಿಸ್ನಲ್ಲಿ ಗುಂಡೇಟಿನಿಂದ ಒಬ್ಬ ಸೈನಿಕ ಗಂಭೀರವಾಗಿ ಗಾಯಗೊಂಡದ್ದಾಗಿ ಇಸ್ರೇಲ್ ಸೇನೆ ಹೇಳಿದೆ.

ಗಾಜಾದಲ್ಲಿ 79 ಸಾವು

ಇಸ್ರೇಲ್ ಸೇನೆ ಮಂಗಳವಾರ ರಾತ್ರಿಯಿಂದ ನಡೆಸಿದ ದಾಳಿಯಲ್ಲಿ ಗಾಜಾದಲ್ಲಿ 79 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಇದರಲ್ಲಿ 33 ಮಂದಿ ನೆರವು ಸಾಮಗ್ರಿ ಪಡೆಯುವ ಸ್ಥಳದಲ್ಲಿ ಇಸ್ರೇಲ್ ಸೇನೆಯ ಗುಂಡೇಟಿಗೆ ಬಲಿಯಾಗಿದ್ದಾರೆ. ಇಸ್ರೇಲ್ ಸೇನೆಯ ದಾಳಿಯಿಂದ ಗಾಜಾದಲ್ಲಿ ಮೃತಪಟ್ಟ ಪ್ಯಾಲೇಸ್ಟೀನಿಯರ ಸಂಖ್ಯೆ 56 ಸಾವಿರದ ಗಡಿ ದಾಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.