ವಾಷಿಂಗ್ಟನ್: ನಾಲ್ವರು ಇಂಡೊ–ಅಮೆರಿಕನ್ನರು ಸೇರಿದಂತೆ ಸುಮಾರು 1500 ಮಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕ್ಷಮಾದಾನ ನೀಡಿದ್ದಾರೆ.

ಮೀರಾ ಸಚ್ದೇವ, ಬಾಹುಬಲಿ ಪಟೇಲ್, ಕೃಷ್ಣ ಮೋಟೆ ಹಾಗೂ ವಿಕ್ರಂ ದತ್ತಾ ಎನ್ನುವವರಿಗೆ ಕ್ಷಮಾದಾನ ಸಿಕ್ಕಿದೆ.
.ಸಿರಿಯಾದಲ್ಲಿ ಅಸಾದ್ ಆಡಳಿತ ಅಂತ್ಯ | ದೇಶ ನಿರ್ಮಾಣಕ್ಕೆ ಉತ್ತಮ ಅವಕಾಶ: ಬೈಡನ್.
ಸಾಧ್ಯತೆ ಮತ್ತು ಎರಡನೇ ಅವಕಾಶಗಳ ಭರವಸೆಯ ಮೇಲೆ ಅಮೆರಿಕವನ್ನು ನಿರ್ಮಿಸಲಾಗಿದೆ. ಅಧ್ಯಕ್ಷರಾಗಿ, ಪಶ್ಚಾತ್ತಾಪ ಪ್ರದರ್ಶಿಸಿದ ಜನರಿಗೆ ಕರುಣೆಯನ್ನು ನೀಡುವ ಮಹತ್ತರವಾದ ಅವಕಾಶ ನನಗಿದೆ’ ಎಂದು ಬೈಡನ್ ಹೇಳಿದ್ದಾರೆ.

ಅಮೆರಿಕದ ಆಧುನಿಕ ಇತಿಹಾಸದಲ್ಲಿಯೇ ಒಂದೇ ದಿನ ಗರಿಷ್ಠ ಕ್ಷಮಾದಾನ ನೀಡಿದ ಪ್ರಕರಣ ಇದಾಗಿದೆ.

ಕನಿಷ್ಠ ಒಂದು ವರ್ಷಗಳ ಕಾಲ ಗೃಹಬಂಧನ ಶಿಕ್ಷೆ ಪೂರ್ಣಗೊಳಿಸಿದವರನ್ನು ಬಿಡುಗಡೆಗೊಳಿಸಲು ಗುರುವಾರ ಪ್ರಕಟಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.
.EXPLAINER: ಮಾದಕವ್ಯಸನ, ಬಂದೂಕು ಖರೀದಿ; ಪುತ್ರನಿಗೆ ಬೈಡನ್ ಕ್ಷಮಾದಾನ! ಮುಂದೇನು?.
ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿರುವ ಬೈಡನ್, ಮತ್ತಷ್ಟು ಕ್ಷಮಾದಾನ ಅರ್ಜಿಗಳ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. 2017ರಲ್ಲಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ಕೆಲವು ದಿನಗಳ ಮುನ್ನ ಬರಾಕ್ ಒಬಾಮಾ ಅವರು ಒಂದೇ ದಿನ 330 ಮಂದಿಗೆ ಕ್ಷಮಾದಾನ ನೀಡಿದ್ದರು.
.ಅಕ್ರಮ ಬಂದೂಕು ಖರೀದಿ ಪ್ರಕರಣ: ಪುತ್ರ ಹಂಟರ್ ಕ್ಷಮಾದಾನಕ್ಕೆ ಸಹಿ ಹಾಕಿದ ಬೈಡನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.