ಗ್ವಾದಲಹಾರ (ಮೆಕ್ಸಿಕೊ): ಮೆಕ್ಸಿಕೊದ ಡ್ರಗ್ಸ್ ಜಾಲದ ಪಾತಕಿ, ‘ಹಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್’ (ಸಿಜೆಎನ್ಜಿ) ಮುಖ್ಯಸ್ಥ ‘ಎಲ್ ಮೆಂಚೊ’ನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಹಾಗೂ ಆತನ ಹತ್ಯೆ ನಂತರ ನಡೆದ ಹಿಂಸಾಚಾರದಲ್ಲಿ 74 ಮಂದಿ ಮೃತಪಟ್ಟಿದ್ದಾರೆ.

ಇವರಲ್ಲಿ ಭದ್ರತಾ ಪಡೆಯ 27 ಯೋಧರು, 46 ಶಂಕಿತ ಆರೋಪಿಗಳು ಹಾಗೂ ನಾಗರಿಕರೊಬ್ಬರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಿಂದಾಗಿ ಮೆಕ್ಸಿಕೊದ ಬಹುತೇಕ ಭಾಗಗಳಲ್ಲಿ ಮತ್ತಷ್ಟು ಹಿಂಸಾಚಾರ ನಡೆಯಬಹುದೆಂಬ ಭೀತಿ ಎದುರಾಗಿದೆ.

‘ಎಲ್ ಮೆಂಚೊ’ ಎಂದು ಕರೆಯುವ ನೆಮೆಸಿಯೊ ಒಸೆಗುರಾ ಸೆರ್ವಾಂಟೆಸ್ ಅಮೆರಿಕಕ್ಕೆ ಫೆಂಟಾನಿಲ್, ಮೆಥಾಂಫೆಟಮೈನ್ ಮತ್ತು ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ. ತನ್ನ ಕಾರ್ಯಾಚರಣೆಗೆ ವಿರುದ್ಧವಾಗಿರುವ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿದ್ದ. ಈ ಪಾತಕಿಯ ಹತ್ಯೆ ಬಳಿಕ, ಸಂಘಟನೆಯ ಸದಸ್ಯರು ರಸ್ತೆ ತಡೆ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರದಲ್ಲಿ ತೊಡಗಿದ್ದಾರೆ.

‘ಹಾಲಿಸ್ಕೊದ ಟಪಲ್ಪಾದಲ್ಲಿ ಭಾನುವಾರ ಬೆಳಿಗ್ಗೆ ಸೇನೆ ಹಾಗೂ ರಾಷ್ಟ್ರೀಯ ವಿಶೇಷ ಭದ್ರತಾ ಪಡೆ ದಾಳಿ ನಡೆಸಿದ್ದು, ಅಲ್ಲಿ ಎಂಟು ಮಂದಿ ಬಂದೂಕುಧಾರಿಗಳು ಹತರಾದರು. ಎಲ್ ಮೆಂಚೊ ಹಾಗೂ ಆತನ ಇಬ್ಬರು ಅಂಗರಕ್ಷಕರು ಅರಣ್ಯ ಪ್ರದೇಶಕ್ಕೆ ಓಡಿ ಹೋದರು. ಅಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡ ಎಲ್ ಮೆಂಚೊನನ್ನು ಮೆಕ್ಸಿಕೊ ಸಿಟಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟ’ ಎಂದು ರಕ್ಷಣಾ ಕಾರ್ಯದರ್ಶಿ ರಿಕಾರ್ಡೊ ಟ್ರೆವಿಲ್ಲಾ ಸೋಮವಾರ ತಿಳಿಸಿದ್ದಾರೆ.

ದೇಶದ ಜನರು ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಮೆಕ್ಸಿಕೊ ಅಧ್ಯಕ್ಷೆ ಕ್ಲಾಡಿಯಾ ಶೈನ್ಬಾಮ್ ಮನವಿ ಮಾಡಿದ್ದಾರೆ.

‘ಹತ್ತು ಸಾವಿರ ಯೋಧರ ನಿಯೋಜನೆ’

‘ಎಲ್ ಮೆಂಚೊ’ ಹತ್ಯೆ ಬಳಿಕ ಸಿಜೆಎನ್ಜಿ ಸಂಘಟನೆಯ 250ಕ್ಕೂ ಹೆಚ್ಚು ಸದಸ್ಯರು 20 ರಾಜ್ಯಗಳಲ್ಲಿ ರಸ್ತೆ ತಡೆ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರ ನಡೆಸಿದ್ದಾರೆ. ಇದನ್ನು ಹತ್ತಿಕ್ಕಲು ಹತ್ತು ಸಾವಿರ ಯೋಧರನ್ನು ನಿಯೋಜಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಹಾಲಿಸ್ಕೊದಲ್ಲಿರುವ ಕಾರಾಗೃಹದ ಮೇಲೂ ಸಿಜೆಎನ್ಜಿ ಸದಸ್ಯರು ದಾಳಿ ನಡೆಸಿದ್ದು, ಈ ವೇಳೆ 23 ಕೈದಿಗಳು ಪರಾರಿಯಾಗಿದ್ದಾರೆ’ ಎಂದಿದ್ದಾರೆ.

ಈ ವರ್ಷದ ಫಿಫಾ ವಿಶ್ವಕಪ್ನ ಆತಿಥ್ಯ ವಹಿಸಿರುವ ನಗರಗಳಲ್ಲಿ ಹಾಲಿಸ್ಕೊ ಒಂದು. ಈ ನಗರಕ್ಕೆ ಹೆಚ್ಚುವರಿಯಾಗಿ 2,500 ಯೋಧರನ್ನು ಕಳುಹಿಸಲಾಗಿದೆ. ಭಾನುವಾರದಿಂದ ಒಟ್ಟು ಹತ್ತು ಸಾವಿರ ಯೋಧರನ್ನು ನಿಯೋಜಿಸಲಾಗಿದೆ.

ಎಲ್ ಮೆಂಚೊ ಪ್ರೇಯಸಿಯ ಜಾಡು ಹಿಡಿದು...

ಮೆಕ್ಸಿಕೊದ ಕುಖ್ಯಾತ ಪಾತಕಿ ಎಲ್ ಮೆಂಚೊನನ್ನು ಪತ್ತೆ ಮಾಡಲು ಭದ್ರತಾ ಪಡೆಗಳು ಆತನ ಹಣದ ವಹಿವಾಟನ್ನಾಗಲಿ ಮಾದಕವಸ್ತುಗಳ ಜಾಡನ್ನಾಗಲಿ ಅನುಸರಿಸಲಿಲ್ಲ. ಬದಲಾಗಿ ಆತನ ಪ್ರೇಯಸಿಯ ಹಿಂದೆ ಬಿದ್ದರು. ಭದ್ರತಾ ಪಡೆಯ ಯೋಧರು ಆಕೆಯ ಮೇಲೆ ನಿಗಾ ಇಟ್ಟಿದ್ದರು. ಆಕೆ ಸಂಚರಿಸಿದ ಹಾದಿಯನ್ನೇ ಹಿಂಬಾಲಿಸಿದರು. ಆಕೆ ಹಾಲಿಸ್ಕೊ ರಾಜ್ಯದ ಅರಣ್ಯ ಪ್ರದೇಶದ ಪರ್ವತಗಳ ನಡುವೆ ಇದ್ದ ಮನೆಯೊಳಗೆ ಹೋದಳು. ಅಲ್ಲಿ ಎಲ್ ಮೆಂಚೊ ಶುಕ್ರವಾರದಿಂದ ಅಡಗಿ ಕುಳಿತಿದ್ದ. ಈ ವೇಳೆ ಯೋಧರು ದಾಳಿ ನಡೆಸಿದ್ದು ಪ್ರತಿಯಾಗಿ ಆತನ ಸಹಚರರು ಸಹ ಗುಂಡಿನ ದಾಳಿ ನಡೆಸಿದರು. ಇದು ಯಶಸ್ವಿ ಕಾರ್ಯಾಚರಣೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವಕನಾಗಿದ್ದಲೇ ಡ್ರಗ್ಸ್ ದಂಧೆ

ಯುವಕನಾಗಿದ್ದಲೇ ಡ್ರಗ್ಸ್ ದಂಧೆ ಆರಂಭಿಸಿದ್ದ ಎಲ್ ಮೆಂಚೊ 1966ರಲ್ಲಿ ಮೆಕ್ಸಿಕೊದ ಪಶ್ಚಿಮ ರಾಜ್ಯ ಅಗಿಲೀಲಾದಲ್ಲಿ ಎಲ್ ಮೆಂಚೊ ಜನಿಸಿದ. 1990ರ ದಶಕದಲ್ಲಿ ಮಾದಕವಸ್ತು ವ್ಯಾಪಾರ ಮತ್ತು ಕಳ್ಳಸಾಗಣೆಯಲ್ಲಿ ಭಾಗಿಯಾದ ಎಲ್ ಮೆಂಚೊ ಬಹುಬೇಗ ಮಾದಕ ವಸ್ತುಗಳ ಮಾರಾಟದಲ್ಲಿ ಗುರುತಿಸಿಕೊಂಡ. ಬಳಿಕ ಅಮೆರಿಕಕ್ಕೆ ತೆರಳಿ 1994ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಹೆರಾಯಿನ್ ಆಕ್ರಮ ಸಾಗಣೆಯ ಪಿತೂರಿ ನಡೆಸಿದ್ದಕ್ಕಾಗಿ ಶಿಕ್ಷೆಗೊಳಗಾದ. ಅಲ್ಲಿನ ನ್ಯಾಯಾಲಯ ಎಲ್ ಮೆಂಚೊನನ್ನು ಮೆಕ್ಸಿಕೊಕ್ಕೆ ಗಡಿಪಾರು ಮಾಡಿತು ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ಗಡಿಪಾರಿನ ನಂತರ ಮೆಕ್ಸಿಕೊದಲ್ಲಿ ನೆಲಸಿದ್ದ ಎಲ್ ಮೆಂಚೊ ಆ ಸಮಯದಲ್ಲಿ ಸಿನಾಲೋವಾ ಕಾರ್ಟೆಲ್ ಸಂಘಟನೆಯ ಹಿರಿಯ ಡ್ರಗ್ ಪೆಡ್ಲರ್ ನ್ಯಾಚೊ ಕರೋನಲ್ ಎಂದೇ ಖ್ಯಾತಿಯಾದ ಇಗ್ನಾಸಿಯೊ ಕರೋನಲ್ ವಿಲ್ದಾರಿಯಲ್ ಜೊತೆಗೆ ಸಂಪರ್ಕ ಸಾಧಿಸಿದ. ನಂತರ ಇಬ್ಬರು ಒಟ್ಟಾಗಿ ಮಾದಕವಸ್ತು ಕಳ್ಳಸಾಗಣೆಯನ್ನು ಮತ್ತೆ ಆರಂಭಿಸಿದ್ದರು. ಕರೋನಲ್ ಮರಣದ ನಂತರ ಎಲ್ ಮೆಂಚೊ 2009ರಲ್ಲಿ ಸಿಜೆಎನ್ಜಿ ಸಂಘಟನೆಯನ್ನು ಸ್ಥಾಪಿಸಿದ್ದ ಎಂದು ವರದಿಯಾಗಿದೆ.

ಎಲ್ ಮೆಂಚೊ ಮೇಲೆ ಹಲವು ಕೊಲೆ ಪ್ರಕರಣಗಳು ದಾಖಲಾಗಿವೆ. ಮೆಕ್ಸಿಕೊದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಬಂದ ಅಧಿಕಾರಿಗಳನ್ನು ಹತ್ಯೆ ಮಾಡಿರುವ ಆರೋಪಗಳೂ ಇವೆ. ಈ ಸಂಘಟನೆಯ ಸದಸ್ಯರಿಂದ ಹಲವು ಅಧಿಕಾರಿಗಳು ಹತ್ಯೆಯಾಗಿದ್ದಾರೆ ಎಂದು ಅಮೆರಿಕದ ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.