ವಾಷಿಂಗ್ಟನ್: ವಿಶ್ವದ ಹಲವು ದೇಶಗಳ ಮೇಲೆ ವಿಧಿಸಲಾಗುತ್ತಿರುವ ಪ್ರತಿ ಸುಂಕ ಹಾಗೂ ಶೇ 10ರಷ್ಟು ಸುಂಕ ಜಾರಿಯನ್ನು 90 ದಿನ ತಡೆ ಹಿಡಿಯಲು ಅನುಮೋದನೆ ನೀಡಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.

ಟ್ರಂಪ್ ಘೋಷಿಸಿರುವ ಈ ವಿಶೇಷ ಸವಲತ್ತಿನಿಂದ ಚೀನಾವನ್ನು ಹೊರಗಿಡಲಾಗಿದೆ. ಅಲ್ಲದೇ, ಚೀನಾದಿಂದ ಆಮದಾಗುವ ಸರಕುಗಳ ಮೇಲಿನ ಸುಂಕದ ಪ್ರಮಾಣವನ್ನು ಶೇ 125ಕ್ಕೆ ಹೆಚ್ಚಿಸಿದ್ದಾರೆ.

ಟ್ರಂಪ್ ಘೋಷಿಸಿರುವ ಈ ‘ವಿರಾಮ’ದಿಂದ ಚೀನಾ ಹೊರತುಪಡಿಸಿದಂತೆ ಇತರ ದೇಶಗಳಿಗೆ ವಿಧಿಸಿರುವ ಪ್ರತಿಸುಂಕದಲ್ಲಿ ಎಷ್ಟು ಇಳಿಕೆಯಾಗಲಿದೆ ಎಂಬ ಬಗ್ಗೆ ವಿವರಗಳು ತಕ್ಷಣಕ್ಕೆ ಗೊತ್ತಾಗಿಲ್ಲ.

ಪ್ರತಿಸುಂಕ ಜಾರಿಗೊಳಿಸಿದ ಕ್ರಮದಿಂದ, ಅಮೆರಿಕ ಹಾಗೂ ಇತರ ದೇಶಗಳ ನಡುವೆ ವ್ಯಾಪಾರ ಸಮರ ಆರಂಭವಾಗಿತ್ತು. ಅದರಲ್ಲೂ, ಅಮೆರಿಕ ಮತ್ತು ಚೀನಾ ನಡುವೆ ‘ಶಕ್ತಿ ಪ್ರದರ್ಶನ’ಕ್ಕೂ ಇದು ಕಾರಣವಾಗಿತ್ತು. ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಕಂದಕ ನಿವಾರಿಸುವ ನಿಟ್ಟಿನಲ್ಲಿ ಟ್ರಂಪ್ ಆಡಳಿತ ಈ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಟ್ರಂಪ್ ಅವರು ಈ ಕುರಿತು ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಅಮೆರಿಕ ಷೇರುಪೇಟೆಯಲ್ಲಿ ಚೇತರಿಕೆ ಕಂಡುಬಂದಿತು. ಎಸ್ ಅಂಡ್ ಪಿ ಸೂಚ್ಯಂಕ ಶೇ 6ಕ್ಕಿಂತಲೂ ಹೆಚ್ಚು ಗಳಿಕೆ ದಾಖಲಿಸಿದರೆ, ಡವ್ ಸೂಚ್ಯಂಕ 1,800 ಅಂಶಗಳಷ್ಟು ಏರಿಕೆ ಕಂಡಿತು.

ಜಪಾನ್ನ ಯೆನ್ ಸೇರಿ ಇತರ ಹಲವು ದೇಶಗಳ ಕರೆನ್ಸಿ ಎದುರು ಡಾಲರ್ ಬಲ ಹೆಚ್ಚಿಸಿಕೊಂಡರೆ, ಹಲವು ಷೇರುಗಳ ಮೌಲ್ಯ ಹೆಚ್ಚಾಗಿದೆ.

ಅಮೆರಿಕ ಮೇಲಿನ ಸುಂಕ ಹೆಚ್ಚಿಸಿದ ಚೀನಾ ಬ್ಯಾಂಕಾಕ್/ವಾಷಿಂಗ್ಟನ್: ಅಮೆರಿಕದ ಜೊತೆಗಿನ ವಾಣಿಜ್ಯ ಸಮರದಲ್ಲಿ ‘ಕೊನೆಯವರೆಗೂ ಹೋರಾಟ ನಡೆಸುವುದಾಗಿ’ ಚೀನಾ ಹೇಳಿದೆ. ಅಮೆರಿಕದಿಂದ ಆಮದಾಗುವ ಸರಕುಗಳ ಮೇಲೆ ತೆರಿಗೆ ಪ್ರಮಾಣವನ್ನು ಗುರುವಾರದಿಂದ ಶೇಕಡ 84ಕ್ಕೆ ಹೆಚ್ಚಿಸುವುದಾಗಿ ತಿಳಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದಿಂದ ಆಮದಾಗುವ ಸರಕುಗಳ ಮೇಲಿನ ತೆರಿಗೆಯನ್ನು ಶೇ 125ಕ್ಕೆ ಹೆಚ್ಚಿಸಿದ ನಂತರದಲ್ಲಿ ಹಲವು ಕ್ರಮಗಳನ್ನು ಚೀನಾ ಕೈಗೊಂಡಿದೆ. ಅಲ್ಲದೆ ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಅಮೆರಿಕದ ವಿರುದ್ಧ ಹೆಚ್ಚುವರಿಯಾಗಿ ಅರ್ಜಿಯೊಂದನ್ನು ಸಲ್ಲಿಸುವುದಾಗಿ ತಿಳಿಸಿದೆ.

ಅಮೆರಿಕದ ಕಂಪನಿಗಳು ಚೀನಾದ ಕಂಪನಿಗಳ ಜೊತೆ ವಹಿವಾಟು ನಡೆಸುವುದಕ್ಕೆ ಇನ್ನಷ್ಟು ನಿರ್ಬಂಧಗಳನ್ನು ವಿಧಿಸಿದೆ. ‘ಆರ್ಥಿಕ ಹಾಗೂ ವ್ಯಾಪಾರ ನಿರ್ಬಂಧಗಳನ್ನು ಹೆಚ್ಚಿಸುವ ವಿಚಾರವಾಗಿ ಅಮೆರಿಕವು ಹಟಮಾರಿತನ ತೋರಿಸಿದರೆ ಅದಕ್ಕೆ ಎದುರಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಸಾಕಷ್ಟು ಮಾರ್ಗಗಳು ಹಾಗೂ ಪ್ರಬಲ ಇಚ್ಛಾಶಕ್ತಿಯು ಚೀನಾಕ್ಕೆ ಇದೆ’ ಎಂದು ಚೀನಾದ ವಾಣಿಜ್ಯ ಸಚಿವಾಲಯವು ಹೇಳಿದೆ.

ಅಮೆರಿಕದ ಜೊತೆ ಮಾತುಕತೆ ನಡೆಸುವ ಇರಾದೆಯನ್ನು ಚೀನಾ ಇದುವರೆಗೆ ತೋರಿಲ್ಲ. ‘ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನಿಜವಾದ ಬಯಕೆ ಅಮೆರಿಕಕ್ಕೆ ಇದ್ದರೆ ಅದು ಸಮಾನತೆಯ ಗೌರವದ ಹಾಗೂ ಪರಸ್ಪರರಿಗೆ ಪ್ರಯೋಜನ ಮಾಡಿಕೊಡುವ ಧೋರಣೆಯನ್ನು ಅನುಸರಿಸಬೇಕು’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಅವರು ಬುಧವಾರ ಹೇಳಿದ್ದಾರೆ.

ಸಣ್ಣ ಪೊಟ್ಟಣದ ವಸ್ತುಗಳ ಮೇಲಿನ ತೆರಿಗೆ ಶೇ 90ಕ್ಕೆ ಏರಿಕೆ: ಚೀನಾದಿಂದ ಅಮೆರಿಕಕ್ಕೆ ಸಣ್ಣ ಪೊಟ್ಟಣಗಳಲ್ಲಿ ಕಳುಹಿಸುವ ವಸ್ತುಗಳ ಮೇಲಿನ ತೆರಿಗೆಯ ಪ್ರಮಾಣವು ಶೇ 30ರಷ್ಟು ಇರುವುದನ್ನು ಶೇ 90ಕ್ಕೆ ಹೆಚ್ಚಿಸುವ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದಾರೆ. ಅಮೆರಿಕದಲ್ಲಿ ಜನಪ್ರಿಯವಾಗಿರುವ ಅಗ್ಗದ ಬೆಲೆಯ ಕೆಲವು ಉತ್ಪನ್ನಗಳ ಆಮದಿನಲ್ಲಿ ಈ ಕ್ರಮದಿಂದಾಗಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಟ್ರಂಪ್ ಅವರ ಹೊಸ ಆದೇಶವು ಮೇ 2ರಿಂದ ಜಾರಿಗೆ ಬರಲಿದೆ. 800 ಡಾಲರ್ಗಿಂತ ಕಡಿಮೆ ಬೆಲೆಯ ಉತ್ಪನ್ನಗಳು ಚೀನಾದಿಂದ ಅಮೆರಿಕ ಪ್ರವೇಶಿಸಿದಾಗ ಸಿಗುತ್ತಿದ್ದ ಸುಂಕ ವಿನಾಯಿತಿಯನ್ನು ರದ್ದುಪಡಿಸುವ ಕ್ರಮಕ್ಕೆ ಟ್ರಂಪ್ ಕಳೆದ ವಾರ ಸಹಿ ಮಾಡಿದ್ದರು. ಚೀನಾದಿಂದ ಸುಂಕ ವಿನಾಯಿತಿಯ ಪ್ರಯೋಜನ ಪಡೆದು ಆಮದಾಗುತ್ತಿದ್ದ ಉತ್ಪನ್ನಗಳ ಮೇಲಿನ ಸುಂಕದ ಪ್ರಮಾಣವನ್ನು ಶೇ 30ಕ್ಕೆ (ಅಥವಾ 25 ಡಾಲರ್ಗೆ) ಹೆಚ್ಚಿಸುವುದಾಗಿ ಅಮೆರಿಕದ ಅಧಿಕಾರಿಗಳು ಕಳೆದ ವಾರ ಹೇಳಿದ್ದರು. ಆದರೆ ಈಗ ಆಮದು ಸುಂಕವನ್ನು ಇನ್ನಷ್ಟು ಹೆಚ್ಚಿಸಿರುವ ಅಮೆರಿಕವು ಅದನ್ನು ಶೇ 90ಕ್ಕೆ ತಂದಿರಿಸಿದೆ.

ದ್ವಿಪಕ್ಷೀಯ ಒಪ್ಪಂದಕ್ಕೆ ಆದ್ಯತೆ

ನವದೆಹಲಿ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಪ್ರತಿಸುಂಕದ ಪರಿಣಾಮಗಳು ಇನ್ನೂ ಗೊತ್ತಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಈ ವರ್ಷದ ಅಂತ್ಯದೊಳಗೆ ಅಮೆರಿಕದ ಜೊತೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಸಾಧ್ಯವಾಗಿಸುವುದು ಈಗಿನ ಪರಿಸ್ಥಿತಿಗೆ ಸ್ಪಂದಿಸಲು ಕೇಂದ್ರ ಸರ್ಕಾರ ಹೊಂದಿರುವ ಕಾರ್ಯಯೋಜನೆ ಯಾಗಿದೆ ಎಂದು ಹೇಳಿದ್ದಾರೆ. ‘ನಮ್ಮ ಕಾರ್ಯತಂತ್ರಕ್ಕೆ ಒಂದು ಗುರಿ ಇದೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದವೊಂದನ್ನು ಸಾಧ್ಯವಾಗಿಸಿಕೊಂಡು ಈಗಿನ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವೇ ಎಂದು ನೋಡುವುದು ಆ ಗುರಿ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಪ್ರತಿಸುಂಕ

ಬ್ರಸೆಲ್ಸ್: ಅಮೆರಿಕದಿಂದ ಆಮದಾಗುವ ಒಟ್ಟು 23 ಬಿಲಿಯನ್ ಡಾಲರ್ (ಅಂದಾಜು ₹1.99 ಲಕ್ಷ ಕೋಟಿ) ಮೌಲ್ಯದ ಉತ್ಪನ್ನಗಳಿಗೆ ಪ್ರತಿಸುಂಕ ವಿಧಿಸಲು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಶೇಕಡ 25ರಷ್ಟು ತೆರಿಗೆ ವಿಧಿಸಿರುವುದಕ್ಕೆ ಪ್ರತಿಯಾಗಿ ಒಕ್ಕೂಟದ ದೇಶಗಳು ಸುಂಕ ವಿಧಿಸಲು ತೀರ್ಮಾನಿಸಿವೆ. ಆದರೆ ಯಾವ ಉತ್ಪನ್ನಕ್ಕೆ ಎಷ್ಟು ಸುಂಕ ಎಂಬುದರ ನಿರ್ದಿಷ್ಟ ವಿವರವನ್ನು ಒಕ್ಕೂಟವು ಹಂಚಿಕೊಂಡಿಲ್ಲ. ಐರೋಪ್ಯ ಒಕ್ಕೂಟವು 27 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಸುಂಕ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ತನ್ನ ಆದ್ಯತೆ ಎಂಬುದನ್ನು ಒಕ್ಕೂಟವು ಪುನರುಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.