ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಅಮೆರಿಕ ಸುಪರ್ದಿಗೆ ಗಾಜಾ ಪಟ್ಟಿ, ಸಮಗ್ರ ಅಭಿವೃದ್ಧಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ

Published : 5 ಫೆಬ್ರುವರಿ 2025, 4:33 IST
Last Updated : 5 ಫೆಬ್ರುವರಿ 2025, 4:33 IST
ಫಾಲೋ ಮಾಡಿ
Comments
ಪ್ಯಾಲೆಸ್ಟೀನಿಯರನ್ನು ಆ ನೆಲದಿಂದ ಕದಲಿಸದೇ ಗಾಜಾಪಟ್ಟಿ ಮರು ನಿರ್ಮಾಣ ಈಗಿನ ಅಗತ್ಯ.
–ವಿದೇಶಾಂಗ ಸಚಿವಾಲಯ, ಈಜಿಪ್ಟ್‌
ಸ್ವತಂತ್ರ ಪ್ಯಾಲೆಸ್ಟೀನ್‌ ರಾಷ್ಟ್ರದ ನಿರ್ಮಾಣ ಆಗಲಿ ಎಂಬುದು ನಮ್ಮ ನಿಲುವು. ಪ್ಯಾಲೆಸ್ಟೀನಿಯರ ಕಾನೂನುಬದ್ಧ ಹಕ್ಕು ಕಸಿಯುವುದು ಸರಿಯಲ್ಲ.
–ಮೊಹಮ್ಮದ್ ಬಿನ್‌ ಸಲ್ಮಾನ್, ಸೌದಿ ಅರೇಬಿಯದ ರಾಜ
ಮಧ್ಯ ಪೂರ್ವ ಪ್ರಾಂತ್ಯದಲ್ಲಿ ಎರಡು ರಾಷ್ಟ್ರಗಳ ನಿರ್ಮಾಣವೇ ಈಗಿನ ಸಮಸ್ಯೆಗೆ ಪರಿಹಾರ. ನಮ್ಮ ಈ ನಿಲುವಿನಲ್ಲಿ ಬದಲಾವಣೆ ಇಲ್ಲ.
–ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಚೀನಾ
ಪ್ಯಾಲೆಸ್ಟೀನಿಯರ ಜನ್ಮಸಿದ್ಧ ಹಕ್ಕುಗಳನ್ನು ರಕ್ಷಿಸಬೇಕು. ಟ್ರಂಪ್‌ ಅವರು ಏನು ಮಾಡಬೇಕು ಎಂದಿದ್ದಾರೋ ಅದು ಅಂತರರಾಷ್ಟ್ರೀಯ ಕಾಯ್ದೆಯ ಗಂಭೀರ ಉಲ್ಲಂಘನೆ.
–ಮಹಮೂದ್ ಅಬ್ಬಾಸ್‌. ಅಧ್ಯಕ್ಷ ಪ್ಯಾಲೆಸ್ಟೀನ್
ಗಾಜಾ ಪಟ್ಟಿ ಪ್ಯಾಲೆಸ್ಟೀನಿಯರಿಗೇ ಸೇರಿದ್ದು. ಅಲ್ಲಿಂದ ಅವರನ್ನು ಒಕ್ಕಲೆಬ್ಬಿಸುವುದು ಸ್ವೀಕಾರಾರ್ಹವಲ್ಲ ಮತ್ತು ಅಂತರರಾಷ್ಟ್ರೀಯ ಕಾಯ್ದೆಗೆ ವಿರುದ್ಧವಾದುದು.
–ಅನ್ನಾಲೆನಾ ಬೇರ್ಬಾಕ್, ವಿದೇಶಾಂಗ ಸಚಿವರು ಜರ್ಮನ್.
ಇತಿಹಾಸ ಬದಲಿಸುವ ನಡೆ –ನೇತನ್ಯಾಹು
‘ಇದು ಇತಿಹಾಸ ಬದಲಿಸುವ ನಡೆ ಹಾಗೂ ಮೌಲ್ಯಯುತವಾದ ಕ್ರಮ ಎಂದು ನಾನು ಭಾವಿಸುತ್ತೇನೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪ್ರತಿಕ್ರಿಯಿಸಿದ್ದಾರೆ. ‘ಗಾಜಾಪಟ್ಟಿ ಭವಿಷ್ಯದಲ್ಲಿ ಎಂದಿಗೂ ಬೆದರಿಕೆ ಒಡ್ಡಬಾರದು ಎಂಬುದಷ್ಟೇ ಇಸ್ರೇಲ್‌ನ ಗುರಿ’ ಎಂದು ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಟ್ರಂಪ್‌ ಅವರಿಗೆ ಭಿನ್ನ ಚಿಂತನೆಯಿದೆ. ಬದಲಾವಣೆ ಸಾಧ್ಯತೆಗಳನ್ನು ನಾವು ಚರ್ಚಿಸುತ್ತಿದ್ದೆವು. ಅವರು ಕಾರ್ಯರೂಪಕ್ಕೆ ಇಳಿಸುತ್ತಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT