ರಷ್ಯಾಕ್ಕೆ ನೆರವಾಗಲಿದೆಯೇ ಚೀನಾ?
ಭಾರತವು ಖರೀದಿಯನ್ನು ತಗ್ಗಿಸಿದರೆ, ಚೀನಾದ ತೈಲ ಸಂಸ್ಕರಣ ಕಂಪನಿಗಳು ರಷ್ಯಾದ ನೆರವಿಗೆ ನಿಲ್ಲಬಹುದು ಎಂದು ವಿಶ್ಲೇಷಿಸಲಾಗಿದೆ. ಜಾಗತಿಕ ಮಾರುಕಟ್ಟೆ ದರಕ್ಕಿಂತ ಅಗ್ಗದ ಬೆಲೆಯಲ್ಲಿ ತೈಲ ಮಾರಾಟ ಮಾಡುವುದನ್ನು ರಷ್ಯಾ ಮುಂದುವರಿಸಿದರೆ ಚೀನಾದ ಕಂಪನಿಗಳು ಖರೀದಿ ಪ್ರಮಾಣ ಹೆಚ್ಚಿಸುವ ಸಾಧ್ಯತೆಯಿದೆ. ರಷ್ಯಾದಿಂದ ಅತಿಹೆಚ್ಚು ಕಚ್ಚಾತೈಲ ಖರೀದಿಸುವ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು, ಈ ವರ್ಷದ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಪ್ರತಿದಿನ 21 ಲಕ್ಷ ಬ್ಯಾರಲ್‌ನಷ್ಟು ತೈಲ ಖರೀದಿಸಿದೆ.