ವಾಷಿಂಗ್ಟನ್ (ಪಿಟಿಐ): ವೀಸಾ ಮತ್ತು ತೆರಿಗೆಗೆ ಸಂಬಂಧಿಸಿದಂತೆ ಇನ್ಫೋಸಿಸ್ ವಂಚನೆ ಮಾಡುತ್ತಿದೆ ಎಂದು ಆರೋಪಿಸಿ ಅಮೆರಿಕದ ಉದ್ಯೋಗಿಯೊಬ್ಬರು ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ.

ವಲಸೆ ನಿಯಮಾವಳಿಗಳನ್ನು ನೇರವಾಗಿ ಉಲ್ಲಂಘಿಸಿ ಇನ್ಫೋಸಿಸ್ ಗ್ರಾಹಕ ವಿಭಾಗಗಳಿಗೆ ತರಬೇತಿ ಇಲ್ಲದ ಮತ್ತು ಕಳಪೆಗುಣಮಟ್ಟದ ಉದ್ಯೋಗಿಗಳನ್ನು ಪೂರ್ಣ ಅವಧಿ ಕೆಲಸಕ್ಕಾಗಿ ಅಮೆರಿಕಕ್ಕೆ ಕಳುಹಿಸಿದೆ. ಈ ಉದ್ಯೋಗಿಗಳಿಗೆ ಅಮೆರಿಕದ ಆದಾಯ ತೆರಿಗೆ ನೀತಿಗಳನ್ನು ಅನುಸರಿಸದೆ ಭಾರತದಲ್ಲಿಯೇ ವೇತನ ಪಾವತಿಸುತ್ತಿದೆ.

ಅತ್ತ ಈ ಉದ್ಯೋಗಿಗಳ ಮೇಲಿನ ಕಾರ್ಮಿಕ ವೆಚ್ಚದ ಹೆಸರಿನಲ್ಲಿ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ ಎಂದು ಆರೋಪಿಸಿ ಇನ್ಫೋಸಿಸ್ನಲ್ಲಿ ಔದ್ಯೋಗಿಕ ಪರಿಹಾರ ವಿಭಾಗದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ ಜಾಕ್ ಪಾಲ್ಮರ್ ಇಲ್ಲಿನ ಅಲಬಾಮಾ ಕೋರ್ಟ್ನಲ್ಲಿ ದೂರು ಸಲ್ಲಿಸಿದ್ದಾರೆ.

ಕೋರ್ಟ್ಗೆ ಸಲ್ಲಿಸಿರುವ 13 ಪುಟಗಳ ದೂರಿನಲ್ಲಿ ಪಾಲ್ಮರ್, 2009ರಲ್ಲಿ ಸರ್ಕಾರ ಎಚ್-1ಬಿ ಯೋಜನೆಗೆ ನಿರ್ಬಂಧ ವಿಧಿಸಿದ ನಂತರ ತಮ್ಮನ್ನು ಸಭೆಗಳನ್ನು ಆಯೋಜಿಸುವ ಸಲುವಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಇನ್ಫೋಸಿಸ್ ನಿರಾಕರಿಸಿದೆ. ‘ಈ ಪ್ರಕರಣದ ವಿಚಾರಣೆ ನಡೆಸಲಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ’ ಎಂದು ಇನ್ಫೋಸಿಸ್ ವಕ್ತಾರರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.