ಲಂಡನ್: ಆಧುನಿಕ ಕಾಲದ ಕ್ರಿಕೆಟ್ನಲ್ಲಿ ಸತತ ನಾಲ್ಕು ಟೆಸ್ಟ್ ಪಂದ್ಯಗಳು ಪೂರ್ಣ ಐದು ದಿನಗಳವರೆಗೆ ನಡೆದ ಉದಾಹರಣೆಗಳು ಇವೆಯೇ ಎಂಬ ಪ್ರಶ್ನೆಗೆ ಅಂಕಿಸಂಖ್ಯೆ ತಜ್ಞರು ಹುಡುಕಾಡುತ್ತಿದ್ದಾರೆ.

ಸದ್ಯ ನಡೆಯುತ್ತಿರುವ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ ಸರಣಿಯಲ್ಲಿ ಇದುವರೆಗೆ ಮುಗಿದ ನಾಲ್ಕು ಪಂದ್ಯಗಳೂ ಕೊನೆಯ ದಿನದ ಸಂಜೆಯವರೆಗೂ ನಡೆದವು. ಆ ಮಟ್ಟಿಗೆ ಇದೊಂದು ಅಪರೂಪದ ಮತ್ತು ರೋಚಕ ಸರಣಿ ಎಂಬುದರಲ್ಲಿ ಅನುಮಾನವೇ ಇಲ್ಲ.

ಗುರುವಾರ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಸರಣಿಯ ಕೊನೆ ಪಂದ್ಯ ಕೂಡ ಕುತೂಹಲ ಕೆರಳಿಸಿದೆ. ಏಕೆಂದರೆ; ಈಗಾಗಲೇ 2–1ರಿಂದ ಮುನ್ನಡೆಯಲ್ಲಿರುವ ಆತಿಥೇಯರು ಸರಣಿ ಗೆಲುವಿನ ಸಂಭ್ರಮ ಆಚರಿಸಬೇಕಾದರೆ, ಈ ಪಂದ್ಯದಲ್ಲಿ ಜಯಿಸಬೇಕು ಇಲ್ಲವೇ ಡ್ರಾ ಮಾಡಿಕೊಳ್ಳಬೇಕು. ಆದರೆ ಶುಭಮನ್ ಗಿಲ್ ಬಳಗಕ್ಕೆ ಸರಣಿ ಜಯಿಸುವ ಅವಕಾಶ ಮುಗಿದಿದೆ. ಆದರೆ ಈ ಪಂದ್ಯದಲ್ಲಿ ಗೆದ್ದರೆ 2–2ರ ಸಮಬಲ ಸಾಧಿಸಬಹುದು. ಓಲ್ಡ್ ಟ್ರಾಫರ್ಡ್ನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಸೋಲಿನ ದವಡೆಯಿಂದ ತಪ್ಪಿಸಕೊಂಡು ಡ್ರಾ ಮಾಡಿಕೊಂಡ ಭಾರತದ ಆಟಗಾರರ ಆತ್ಮವಿಶ್ವಾಸ ಈಗ ಉತ್ತುಂಗದಲ್ಲಿದೆ.

ಸ್ಟ್ರೋಕ್ಸ್, ಕಾರ್ಸ್, ಡಾಸನ್, ಜೋಫ್ರಾಗೆ ವಿಶ್ರಾಂತಿ

ಸರಣಿಯಲ್ಲಿ 2–1ರ ಮುನ್ನಡೆಯಲ್ಲಿರುವ ಇಂಗ್ಲೆಂಡ್ ತಂಡ

ಕಣಕ್ಕಿಳಿಯಲು ವೇಗಿ ಆಕಾಶ್ ದೀಪ್ ಫಿಟ್

ಆದರೆ ಈ ಪಂದ್ಯದಲ್ಲಿ ಭಾರತ ತಂಡವು ‘ಡೈನಾಮಿಕ್ ವಿಕೆಟ್ಕೀಪರ್’ ರಿಷಭ್ ಪಂತ್ ಅವರಿಲ್ಲದೇ ಕಣಕ್ಕಿಳಿಯಲಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಪಂತ್ ಅವರ ಕಾಲಿನ ಬೆರಳಿಗೆ ಚೆಂಡು ಬಡಿದು ಮೂಳೆ ಮುರಿದಿತ್ತು. ಆದ್ದರಿಂದ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದೆ. ಈ ಸರಣಿಯಲ್ಲಿ ಅವರು ಎರಡು ಶತಕ ಗಳಿಸಿದ್ದಾರೆ. ಒಟ್ಟು 479 ರನ್ಗಳು ಅವರ ಖಾತೆಯಲ್ಲಿವೆ. ಪ್ರತಿ ಇನಿಂಗ್ಸ್ನಲ್ಲಿಯೂ ಅವರು ಭಾರತ ತಂಡದ ಹೋರಾಟಕ್ಕೆ ನೂರಾನೆ ಬಲ ತುಂಬಿದ್ದರು. ಅವರ ಬದಲಿಗೆ ಧ್ರುವ ಜುರೇಲ್ ಕಣಕ್ಕಿಳಿಯಲಿದ್ದಾರೆ. ಪಂತ್ ಅವರಷ್ಟೇ ಉಪಯುಕ್ತ ಕಾಣಿಕೆ ನೀಡುವ ಸವಾಲು ಜುರೇಲ್ ಮುಂದಿದೆ.

ಆತಿಥೇಯ ತಂಡವೂ ನಾಯಕ ಬೆನ್ ಸ್ಟೋಕ್ಸ್ ಅವರಿಲ್ಲದೇ ಆಡಲಿದೆ. ಬಲಭುಜದ ಗಾಯದಿಂದಾಗಿ ಸ್ಟೋಕ್ಸ್ ಆಡುತ್ತಿಲ್ಲ. ಅವರ ಬದಲಿಗೆ ಓಲಿ ಪೋಪ್ ನಾಯಕತ್ವ ವಹಿಸುವರು. ಅವರಷ್ಟೇ ಅಲ್ಲ; ಪರಿಣಾಮಕಾರಿ ವೇಗದ ಬೌಲರ್ಗಳಾದ ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸ್ ಮತ್ತು ಸ್ಪಿನ್ನರ್ ಲಿಯಾಮ್ ಡಾಸನ್ ಕೂಡ ಆಡುವುದಿಲ್ಲ.

ಇನ್ನೊಂದೆಡೆ ಭಾರತ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಅವರು ಕಣಕ್ಕಿಳಿಯುವುದು ಖಚಿತವಾಗಿಲ್ಲ. ಸರಣಿ ಆರಂಭಕ್ಕೂ ಮುನ್ನ ಬೂಮ್ರಾ ಅವರು ಕಾರ್ಯಭಾರ ನಿಯಮದ ಪ್ರಕಾರ ಮೂರು ಪಂದ್ಯಗಳಲ್ಲಿ ಆಡಲಿರುವರು ಮತ್ತು ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆಯುವರು. ಇದು ಬಿಸಿಸಿಐ ವೈದ್ಯರ ಸಲಹೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಹೇಳಿದ್ದರು. ಆದರೆ ಮ್ಯಾಂಚೆಸ್ಟರ್ ಪಂದ್ಯವು ಮಹತ್ವದ್ದಾಗಿದ್ದ ಕಾರಣ ಬೂಮ್ರಾ ಕಣಕ್ಕಿಳಿದಿದ್ದರು. ಗುರುವಾರ ಟಾಸ್ ನಂತರವಷ್ಟೇ ಬೂಮ್ರಾ ಲಭ್ಯತೆ ಕುರಿತು ಖಚಿತಗೊಳ್ಳಲಿದೆ.

ಬೂಮ್ರಾ ವಿಶ್ರಾಂತಿ ಪಡೆದರೆ, ಮೊಹಮ್ಮದ್ ಸಿರಾಜ್ ಅವರೊಂದಿಗೆ ಆಕಾಶ್ ದೀಪ್ ವೇಗದ ಬೌಲಿಂಗ್ ಹೊಣೆ ನಿಭಾಯಿಸಬೇಕಿದೆ. ಇನ್ನೊಬ್ಬ ವೇಗದ ಬೌಲರ್ ಸ್ಥಾನಕ್ಕಾಗಿ ಅನುಭವಿ ಪ್ರಸಿದ್ಧ ಕೃಷ್ಣ ಅಥವಾ ಪದಾರ್ಪಣೆಗಾಗಿ ಕಾದಿರುವ ಅರ್ಷದೀಪ್ ಸಿಂಗ್ ಅವರ ನಡುವೆ ಪೈಪೋಟಿ ಇದೆ.

ಆಕ್ರಮಣಶೀಲ ನಾಯಕತ್ವ ಮತ್ತು ಆಲ್ರೌಂಡ್ ಆಟದಿಂದ ಸರಣಿಯುದ್ದಕ್ಕೂ ಭಾರತಕ್ಕೆ ಕಠಿಣ ಪೈಪೋಟಿಯೊಡ್ಡಿದ್ದ ಸ್ಟೋಕ್ಸ್ ಆಡದಿರುವುದು ಭಾರತಕ್ಕೆ ಒಂದು ರೀತಿಯಲ್ಲಿ ಅನುಕೂಲವಾಗಲಿದೆ. ಸ್ಟೋಕ್ಸ್ಗೆ ಹೋಲಿಸಿದರೆ ಪೋಪ್ ಶಾಂತಚಿತ್ತದ ವ್ಯಕ್ತಿತ್ವದವರು. ಉತ್ತಮ ಬ್ಯಾಟರ್ ಕೂಡ ಆಗಿದ್ದಾರೆ. ಅನುಭವಿ ಜೋ ರೂಟ್ ಬಿಟ್ಟರೆ ಉಳಿದವರೆಲ್ಲರೂ ಯುವ ಆಟಗಾರರೇ. ಆದ್ದರಿಂದ ಪೋಪ್ ಅವರಿಗೆ ಸರಣಿ ಜಯದತ್ತ ತಂಡವನ್ನು ಮುನ್ನಡೆಸುವ ಕಠಿಣ ಸವಾಲು ಇದೆ.

ತಂಡಗಳು

ಭಾರತ: ಶುಭಮನ್ ಗಿಲ್ (ನಾಯಕ) ಯಶಸ್ವಿ ಜೈಸ್ವಾಲ್ ಕೆ.ಎಲ್. ರಾಹುಲ್ ಸಾಯಿ ಸುದರ್ಶನ್ ಅಭಿಮನ್ಯು ಈಶ್ವರನ್ ಕರುಣ್ ನಾಯರ್ ರವೀಂದ್ರ ಜಡೇಜ ಧ್ರುವ ಜುರೇಲ್ (ವಿಕೆಟ್ಕೀಪರ್) ವಾಷಿಂಗ್ಟನ್ ಸುಂದರ್ ಶಾರ್ದೂಲ್ ಠಾಕೂರ್ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಪ್ರಸಿದ್ಧ ಕೃಷ್ಣ ಆಕಾಶ್ ದೀಪ್ ಕುಲದೀಪ್ ಯಾದವ್ ಅನ್ಷುಲ್ ಕಂಬೋಜ್ ಅರ್ಷದೀಪ್ ಸಿಂಗ್ ಎನ್. ಜಗದೀಶನ್ (ವಿಕೆಟ್ಕೀಪರ್).

ಇಂಗ್ಲೆಂಡ್: ಒಲಿ ಪೋಪ್ (ನಾಯಕ) ಜಾಕ್ ಕ್ರಾಲಿ ಬೆನ್ ಡಕೆಟ್ ಜೋ ರೂಟ್ ಹ್ಯಾರಿ ಬ್ರೂಕ್ ಜೇಕಬ್ ಬೆಥೆಲ್ ಜೆಮಿ ಸ್ಮಿತ್ (ವಿಕೆಟ್ಕೀಪರ್) ಕ್ರಿಸ್ ವೋಕ್ಸ್ ಗಸ್ ಅಟ್ಕಿನ್ಸನ್ ಜೆಮಿ ಒವರ್ಟನ್ ಜೋಶ್ ಟಂಗ್. ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ) ನೇರಪ್ರಸಾರ; ಸೋನಿ ಸ್ಪೋರ್ಟ್ಸ್ ನೆಟ್ವರ್ಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.